T20 World Cup 2022: ಸೆಮಿಫೈನಲ್ ಆಡುವ 4 ತಂಡಗಳನ್ನು ಹೆಸರಿಸಿದ ರಾಬಿನ್ ಉತ್ತಪ್ಪ

Edited By:

Updated on: Oct 26, 2022 | 10:59 PM

T20 World Cup 2022: ಟೀಮ್ ಇಂಡಿಯಾದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಆಯ್ಕೆ ಮಾಡಿದ ನಾಲ್ಕು ಸೆಮಿಫೈನಲಿಸ್ಟ್ ತಂಡಗಳು ಹೀಗಿವೆ.

1 / 9
ಟಿ20 ವಿಶ್ವಕಪ್​ನ ಸೂಪರ್-12 ಪಂದ್ಯಗಳು ಶುರುವಾಗಿದೆ. ಈಗಾಗಲೇ ಎಲ್ಲಾ ತಂಡಗಳ ಒಂದೊಂದು ಪಂದ್ಯ ಮುಗಿದಿವೆ. ಇದರ ನಡುವೆ ಟೀಮ್ ಇಂಡಿಯಾದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಸೆಮಿಫೈನಲ್ ಪ್ರವೇಶಿಸುವ 4 ತಂಡಗಳನ್ನು ಹೆಸರಿಸಿದ್ದಾರೆ.

ಟಿ20 ವಿಶ್ವಕಪ್​ನ ಸೂಪರ್-12 ಪಂದ್ಯಗಳು ಶುರುವಾಗಿದೆ. ಈಗಾಗಲೇ ಎಲ್ಲಾ ತಂಡಗಳ ಒಂದೊಂದು ಪಂದ್ಯ ಮುಗಿದಿವೆ. ಇದರ ನಡುವೆ ಟೀಮ್ ಇಂಡಿಯಾದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಸೆಮಿಫೈನಲ್ ಪ್ರವೇಶಿಸುವ 4 ತಂಡಗಳನ್ನು ಹೆಸರಿಸಿದ್ದಾರೆ.

2 / 9

ಅಚ್ಚರಿ ಎಂದರೆ ರಾಬಿನ್ ಉತ್ತಪ್ಪ ಆಯ್ಕೆ ಮಾಡಿದ ನಾಲ್ಕು ತಂಡಗಳಲ್ಲಿ ಟೀಮ್ ಇಂಡಿಯಾ ಇಲ್ಲ. ಅಂದರೆ ಭಾರತ ತಂಡವು ಸೆಮಿಫೈನಲ್ ಹಂತಕ್ಕೆ ಬರುವುದಿಲ್ಲ ಎಂದು ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.

3 / 9

ಇನ್ನು ಈ ಬಾರಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯುತ್ತಿರುವುದರಿಂದ ಅವರಿಗೆ ತವರಿನ ಬೆಂಬಲ ಸಿಗಲಿದೆ. ಹೀಗಾಗಿ ಆರೋನ್ ಫಿಂಚ್ ಪಡೆಯು ನಾಕೌಟ್ ಹಂತಕ್ಕೆ ಎಂಟ್ರಿ ಕೊಡಲಿದೆ ಎಂದು ಕನ್ನಡಿಗ ತಿಳಿಸಿದ್ದಾರೆ.

4 / 9

ಅದರಂತೆ ರಾಬಿನ್ ಉತ್ತಪ್ಪ ಆಯ್ಕೆ ಮಾಡಿದ ನಾಲ್ಕು ಸೆಮಿಫೈನಲಿಸ್ಟ್ ತಂಡಗಳು ಹೀಗಿವೆ....

5 / 9

ಆಸ್ಟ್ರೇಲಿಯಾ

6 / 9

ಇಂಗ್ಲೆಂಡ್

7 / 9

ಸೌತ್ ಆಫ್ರಿಕಾ

8 / 9

ಪಾಕಿಸ್ತಾನ್

9 / 9

2007 ರ ಟಿ20 ವಿಶ್ವಕಪ್​ ಚಾಂಪಿಯನ್ ತಂಡದ ಭಾಗವಾಗಿದ್ದ ರಾಬಿನ್ ಉತ್ತಪ್ಪ ಹೇಳಿರುವ ಭವಿಷ್ಯವು ನಿಜವಾಗಲಿದೆಯಾ ಕಾದು ನೋಡಬೇಕಿದೆ.

Loading...
Unable to load recommendations.
Follow Us