- Kannada News Photo gallery Cricket photos team india all rounder Hardik Pandya youngest cricketer in the world to cross 25 million followers on instagram
Hardik Pandya: ಮದುವೆಯ ಬಳಿಕ ಹಾರ್ದಿಕ್ ಪಾಂಡ್ಯಗೆ ಸಿಕ್ತು ಮೊದಲ ಸಿಹಿ ಸುದ್ದಿ..!
Hardik Pandya: ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಆದ ಇನ್‌ಸ್ಟಾಗ್ರಾಮ್‌ನಲ್ಲಿ ಪಾಂಡ್ಯ ಈಗ 25.1 ಮಿಲಿಯನ್ ಅನುಯಾಯಿಗಳನ್ನು ಅಂದರೆ, 2.51 ಕೋಟಿ ಅನುಯಾಯಿಗಳನ್ನು ಸಂಪಾದಿಸಿದ್ದಾರೆ.
Updated on: Mar 08, 2023 | 5:58 PM

ಐಪಿಎಲ್ನಲ್ಲಿ ತಂಡವನ್ನು ಚಾಂಪಿಯನ್ ಮಾಡಿದ್ದೆ ಬಂತು, ಅಲ್ಲಿಂದ ಟೀಂ ಇಂಡಿಯಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮುಟ್ಟಿದೆಲ್ಲ ಚಿನ್ನವಾಗಿದೆ. ಸದ್ಯ ಟೀಂ ಇಂಡಿಯಾದ ಟಿ20 ತಂಡದ ನಾಯಕನಾಗಿರುವ ಹಾರ್ದಿಕ್ ಕಳೆದ ಕೆಲವು ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಇದೀಗ ಟೀಂ ಇಂಡಿಯಾದಿಂದ ಹೊರಗಿದ್ದು, ವಿಶ್ರಾಂತಿಯ ಮೂಡ್ನಲ್ಲಿರುವ ಪಾಂಡ್ಯ ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಮೈಲಿಗಲ್ಲು ಸಾಧಿಸಿದ್ದಾರೆ.

ಅದೆನೆಂದರೆ, ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಆದ ಇನ್‌ಸ್ಟಾಗ್ರಾಮ್‌ನಲ್ಲಿ ಪಾಂಡ್ಯ ಈಗ 25.1 ಮಿಲಿಯನ್ ಅನುಯಾಯಿಗಳನ್ನು ಅಂದರೆ, 2.51 ಕೋಟಿ ಅನುಯಾಯಿಗಳನ್ನು ಸಂಪಾದಿಸಿದ್ದಾರೆ.

ಈ ವಿಚಾರದಲ್ಲಿ ಅನುಭವಿ ಟೆನಿಸ್ ಆಟಗಾರರಾದ ರೋಜರ್ ಫೆಡರರ್ ಮತ್ತು ರಫಾಲ್ ನಡಾಲ್ ಅವರನ್ನು ಹಿಂದಿಕ್ಕಿರುವ ಪಾಂಡ್ಯ ಈ ಮೈಲಿಗಲ್ಲು ಸಾಧಿಸಿದ ವಿಶ್ವದ ಅತ್ಯಂತ ಕಿರಿಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

2.51 ಕೋಟಿ ಫಾಲೋವರ್ಸ್ ದಾಟಿದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಾರ್ದಿಕ್, ನನ್ನನ್ನು ಪ್ರೀತಿಸುವ ಮತ್ತು ಬೆಂಬಲಿಸುವ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ನಡಾಲ್ 1 ಕೋಟಿ 79 ಲಕ್ಷ ಹಿಂಬಾಲಕರನ್ನು ಹೊಂದಿದ್ದರೆ, ರೋಜರ್ ಫೆಡರರ್ 1 ಕೋಟಿ 10 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ. ಟ್ವಿಟರ್‌ನಲ್ಲಿ ಹಾರ್ದಿಕ್ 80 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದು, ಅಲ್ಲಿಯೂ ಅವರ ಫಾಲೋವರ್ಸ್ಗಳ ಬಳಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ.

ಅಂದಹಾಗೆ, ನಾವು ಕ್ರಿಕೆಟಿಗರ ಬಗ್ಗೆ ಹೇಳುವುದಾದರೆ, ವಿರಾಟ್ ಕೊಹ್ಲಿ ಸೋಶಿಯಲ್ ಮೀಡಿಯಾದ ಸುಲ್ತಾನ ಅಂತಲೇ ಹೇಳಬಹುದು. ವಿರಾಟ್ ಇನ್‌ಸ್ಟಾಗ್ರಾಮ್‌ನಲ್ಲಿ 239 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.




