ಪಾಕ್ ನಂತರ ಈ ಸಾಧನೆ ಮಾಡಿದ ವಿಶ್ವದ ಎರಡನೇ ತಂಡ ಟೀಂ ಇಂಡಿಯಾ

Updated on: Sep 20, 2025 | 5:37 PM

Team India Achieves T20I Milestone: ಏಷ್ಯಾಕಪ್‌ನಲ್ಲಿ ಒಮಾನ್ ವಿರುದ್ಧದ ಪಂದ್ಯದೊಂದಿಗೆ ಭಾರತ ತನ್ನ 250ನೇ ಅಂತರರಾಷ್ಟ್ರೀಯ ಟಿ20 ಪಂದ್ಯವನ್ನು ಪೂರ್ಣಗೊಳಿಸಿತು. ಈ ಮೈಲಿಗಲ್ಲು ದಾಟಿದ ಭಾರತ ಸೂಪರ್ 4 ಹಂತಕ್ಕೆ ಅಜೇಯ ತಂಡವಾಗಿ ಪ್ರವೇಶಿಸಿದೆ. ಈವರೆಗೆ 250 ಪಂದ್ಯಗಳಲ್ಲಿ 167 ಗೆಲುವು ಸಾಧಿಸಿರುವ ಭಾರತದ ಗೆಲುವಿನ ಶೇಕಡಾವಾರು 66.66 ಆಗಿದೆ. ವಿವಿಧ ನಾಯಕರ ನೇತೃತ್ವದಲ್ಲಿ ಈ ಮೈಲಿಗಲ್ಲು ಸಾಧಿಸುವಲ್ಲಿ ಭಾರತ ಯಶಸ್ವಿಯಾಗಿದೆ.

1 / 6
ಭಾರತ ಮತ್ತು ಒಮಾನ್ ನಡುವಿನ ಪಂದ್ಯದೊಂದಿಗೆ ಏಷ್ಯಾಕಪ್ ಗುಂಪು ಹಂತ ಮುಕ್ತಾಯಗೊಂಡಿದೆ. ಇದೀಗ ಸೂಪರ್ 4 ಸುತ್ತು ಆರಂಭವಾಗಲಿದೆ. ಒಮಾನ್ ವಿರುದ್ಧದ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಅಜೇಯ ತಂಡವಾಗಿ ಸೂಪರ್ 4 ಸುತ್ತಿಗೆ ಎಂಟ್ರಿಕೊಟ್ಟಿರುವ ಟೀಂ ಇಂಡಿಯಾ ಇನ್ನು ಇದೇ ಪಂದ್ಯದಲ್ಲಿ ಮಹತ್ವದ ಮೈಲಿಗಲ್ಲನ್ನು ದಾಟಿತು.

ಭಾರತ ಮತ್ತು ಒಮಾನ್ ನಡುವಿನ ಪಂದ್ಯದೊಂದಿಗೆ ಏಷ್ಯಾಕಪ್ ಗುಂಪು ಹಂತ ಮುಕ್ತಾಯಗೊಂಡಿದೆ. ಇದೀಗ ಸೂಪರ್ 4 ಸುತ್ತು ಆರಂಭವಾಗಲಿದೆ. ಒಮಾನ್ ವಿರುದ್ಧದ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಅಜೇಯ ತಂಡವಾಗಿ ಸೂಪರ್ 4 ಸುತ್ತಿಗೆ ಎಂಟ್ರಿಕೊಟ್ಟಿರುವ ಟೀಂ ಇಂಡಿಯಾ ಇನ್ನು ಇದೇ ಪಂದ್ಯದಲ್ಲಿ ಮಹತ್ವದ ಮೈಲಿಗಲ್ಲನ್ನು ದಾಟಿತು.

2 / 6

ವಾಸ್ತವವಾಗಿ ಒಮಾನ್ ವಿರುದ್ಧದ ಟಿ20 ಪಂದ್ಯ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಟೀಂ ಇಂಡಿಯಾದ 250ನೇ ಪಂದ್ಯವಾಗಿದೆ. ಈ ಮೂಲಕ ಟೀಂ ಇಂಡಿಯಾ ಪಾಕಿಸ್ತಾನದ ನಂತರ 250 ಅಂತರರಾಷ್ಟ್ರೀಯ ಟಿ20ಪಂದ್ಯಗಳನ್ನು ಆಡಿದ ವಿಶ್ವದ ಎರಡನೇ ರಾಷ್ಟ್ರ ಎನಿಸಿಕೊಂಡಿದೆ. ಪಾಕಿಸ್ತಾನವು ಪ್ರಸ್ತುತ 275 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ದಾಖಲೆಯನ್ನು ಹೊಂದಿದೆ.

3 / 6

ಇಲ್ಲಿಯವರೆಗೆ ಆಡಿರುವ 250 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ, ಟೀಂ ಇಂಡಿಯಾ 167 ಪಂದ್ಯಗಳಲ್ಲಿ ಗೆದ್ದಿದ್ದು, 71 ಪಂದ್ಯಗಳಲ್ಲಿ ಸೋತಿದೆ. ಉಳಿದಂತೆ ಆರು ಪಂದ್ಯಗಳು ಟೈ ಆಗಿವೆ. ಈ 250 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಗೆಲುವಿನ ಶೇಕಡಾವಾರು 66.66 ಆಗಿದೆ.

4 / 6

2006 ರಲ್ಲಿ ವೀರೇಂದ್ರ ಸೆಹ್ವಾಗ್ ನಾಯಕತ್ವದಲ್ಲಿ ಭಾರತ ತನ್ನ ಮೊದಲ ಟಿ20 ಪಂದ್ಯವನ್ನು ಆಡಿತ್ತು. ಆ ಪಂದ್ಯವನ್ನೂ ಗೆದ್ದುಕೊಂಡಿತ್ತು. ಅದಾದ ನಂತರ, ಧೋನಿ ನಾಯಕತ್ವದಲ್ಲಿ ಭಾರತ ತಂಡವು ತನ್ನ 50ನೇ ಟಿ20 ಪಂದ್ಯವನ್ನಾಡಿ ಅದನ್ನು ಗೆದ್ದಿತು. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡವು ತನ್ನ 100 ನೇ ಟಿ20 ಪಂದ್ಯವನ್ನು ಆಡಿ ಅದನ್ನು ಗೆದ್ದಿತ್ತು.

5 / 6

ಹಾಗೆಯೇ ಕೊಹ್ಲಿ ನಾಯಕತ್ವದಲ್ಲಿಯೇ 150 ನೇ ಟಿ20 ಪಂದ್ಯವನ್ನಾಡಿದ್ದ ಟೀಂ ಇಂಡಿಯಾ ಆ ಪಂದ್ಯವನ್ನು ಸಹ ಗೆದ್ದಿತು. ಆದರೆ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ 200ನೇ ಅಂತರರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ್ದ ಟೀಂ ಇಂಡಿಯಾ ಆ ಪಂದ್ಯದಲ್ಲಿ ಗೆಲುವು ಸಾಧಿಸುವುದರಲ್ಲಿ ವಿಫಲವಾಗಿತ್ತು.

6 / 6

ಇದೀಗ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ 250 ನೇ ಟಿ20ಪಂದ್ಯವನ್ನಾಡಿದ್ದ ಭಾರತ ಅಮೋಘ ಗೆಲುವು ಸಾಧಿಸಿದೆ. ಅಲ್ಲದೆ ಈ ಪಂದ್ಯ ಸೂರ್ಯಕುಮಾರ್ ಯಾದವ್ ನಾಯಕನಾಗಿ 25 ನೇ ಟಿ20 ಪಂದ್ಯವಾಗಿತ್ತು. ಇದುವರೆಗೆ 25 ಟಿ20 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿರುವ ಸೂರ್ಯ20 ಪಂದ್ಯಗಳನ್ನು ಗೆದ್ದಿದ್ದರೆ, 4 ಪಂದ್ಯಗಳಲ್ಲಿ ಸೋತಿದೆ, ಒಂದು ಪಂದ್ಯ ಟೈನಲ್ಲಿ ಕೊನೆಗೊಂಡಿದೆ.

Loading...
Unable to load recommendations.
Follow Us