ಅಭಿಷೇಕ್ ಶರ್ಮಾಗೆ ಸಿಕ್ಕ ಕಾರು ಭಾರತಕ್ಕೆ ತರುವಂತಿಲ್ಲ..!

Updated on: Oct 07, 2025 | 11:30 AM

Abhishek Sharma: ಈ ಬಾರಿಯ ಏಷ್ಯಾಕಪ್​ನಲ್ಲಿ ಅತ್ಯಧಿಕ ರನ್​ಗಳಿಸಿದ್ದು ಟೀಮ್ ಇಂಡಿಯಾದ ಯುವ ಎಡಗೈ ದಾಂಡಿಗ ಅಭಿಷೇಕ್ ಶರ್ಮಾ. 7 ಇನಿಂಗ್ಸ್​ಗಳಲ್ಲಿ ಆರಂಭಿಕನಾಗಿ ಬ್ಯಾಟ್ ಬೀಸಿದ್ದ ಅಭಿ 314 ರನ್​ ಗಳಿಸುವ ಮೂಲಕ ಮಿಂಚಿದ್ದರು. ಈ ಭರ್ಜರಿ ಪ್ರದರ್ಶನದ ಫಲವಾಗಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್​ ಪ್ರಶಸ್ತಿ ಪಡೆದಿದ್ದರು.

1 / 5
ಏಷ್ಯಾಕಪ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಅಭಿಷೇಕ್ ಶರ್ಮಾ (Abhishek Sharma) ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಪಡೆದಿದ್ದರು. ಈ ಪ್ರಶಸ್ತಿಯೊಂದಿಗೆ ಟೀಮ್ ಇಂಡಿಯಾ ಆಟಗಾರನಿಗೆ ಸುಮಾರು 25 ಲಕ್ಷ ರೂ. ಮೌಲ್ಯದ ಹವಾಲ್ H9 SUV ಕಾರು ಕೂಡ ನೀಡಲಾಗಿತ್ತು. ಆದರೀಗ ಈ ಐಷಾರಾಮಿ ಕಾರನ್ನು ಭಾರತಕ್ಕೆ ತರಲು ಬಿಕ್ಕಟ್ಟು ಎದುರಾಗಿದೆ. 

ಏಷ್ಯಾಕಪ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಅಭಿಷೇಕ್ ಶರ್ಮಾ (Abhishek Sharma) ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಪಡೆದಿದ್ದರು. ಈ ಪ್ರಶಸ್ತಿಯೊಂದಿಗೆ ಟೀಮ್ ಇಂಡಿಯಾ ಆಟಗಾರನಿಗೆ ಸುಮಾರು 25 ಲಕ್ಷ ರೂ. ಮೌಲ್ಯದ ಹವಾಲ್ H9 SUV ಕಾರು ಕೂಡ ನೀಡಲಾಗಿತ್ತು. ಆದರೀಗ ಈ ಐಷಾರಾಮಿ ಕಾರನ್ನು ಭಾರತಕ್ಕೆ ತರಲು ಬಿಕ್ಕಟ್ಟು ಎದುರಾಗಿದೆ. 

2 / 5

ಹೌದು, ಅಭಿಷೇಕ್ ಶರ್ಮಾಗೆ ಸಿಕ್ಕ  HAVAL H9 SUV ಕಾರನ್ನು ಭಾರತಕ್ಕೆ ತರಲು ಕಾನೂನಿನ ತೊಡಕು ಉಂಟಾಗಿದೆ. ಇದಕ್ಕೆ ಮುಖ್ಯ ಕಾರಣ ಭಾರತೀಯ ರಸ್ತೆ ನಿಯಮ. ಅಂದರೆ ಭಾರತದಲ್ಲಿ ಬಲಗೈ ಡ್ರೈವ್ (RHD) ವಾಹನಗಳನ್ನು ಮಾತ್ರ  ಓಡಿಸಲು ಅನುಮತಿಸಲಾಗಿದೆ.

3 / 5

ಅತ್ತ ಅಭಿಷೇಕ್ ಶರ್ಮಾಗೆ ಸಿಕ್ಕಿರುವುದು ಎಡಗೈ ಡ್ರೈವ್ (LHD) ಕಾರ್. ಹವಾಲ್ H9 SUV ಕಾರಿನ ಸ್ಟೇರಿಂಗ್ ಎಡ ಭಾಗದಲ್ಲಿದೆ. ಹೀಗಾಗಿ ಈ ಕಾರನ್ನು ಭಾರತದಲ್ಲಿ ನೋಂದಾಯಿಸಲು ಹಾಗೂ ಓಡಿಸಲು ಅವಕಾಶವಿಲ್ಲ. ಇದೇ ಕಾರಣದಿಂದಾಗಿ ಅಭಿಷೇಕ್ ಶರ್ಮಾ ಇನ್ನೂ ಸಹ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಕಾರನ್ನು ಭಾರತಕ್ಕೆ ತಂದಿಲ್ಲ ಎಂದು ತಿಳಿದು ಬಂದಿದೆ.

4 / 5

ಇದಾಗ್ಯೂ GWM  ಕಂಪೆನಿಯು ನವೆಂಬರ್ 2025 ರ ವೇಳೆಗೆ ಭಾರತದಲ್ಲಿ ಬಲಗೈ ಡ್ರೈವ್ ಆವೃತ್ತಿಯಲ್ಲಿ HAVAL SUV ಅನ್ನು ಬಿಡುಗಡೆ ಮಾಡಲಿದ್ದಾರೆ ಎಂದು ವರದಿಯಾಗಿದೆ. ಈ ವೇಳೆ ಅಭಿಷೇಕ್ ಶರ್ಮಾ ಅವರಿಗೆ ಭಾರತದಲ್ಲಿ ಬಳಸಬಹುದಾದ ಹೊಸ ಮಾದರಿಯ ಬಲಗೈ ಡ್ರೈವ್ (RHD) ಹವಾಲ್ H9 SUV ಕಾರ್ ನೀಡುವ ಸಾಧ್ಯತೆಯಿದೆ.

5 / 5

ಹೀಗಾಗಿ ಏಷ್ಯಾಕಪ್​ನಲ್ಲಿ ಗೆದ್ದಂತಹ ಕಾರನ್ನು ಪಡೆಯಲು ಅಭಿಷೇಕ್ ಶರ್ಮಾ ಇನ್ನೊಂದಷ್ಟು ದಿನಗಳವರೆಗೆ ಕಾಯಲೇಬೇಕು. ಸದ್ಯ ವಿಶ್ರಾಂತಿಯಲ್ಲಿರುವ ಯುವ ಎಡಗೈ ದಾಂಡಿಗ ಅಕ್ಟೋಬರ್​ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ವೇಳೆ ಮತ್ತೆ ಟೀಮ್ ಇಂಡಿಯಾವನ್ನು ಕೂಡಿಕೊಳ್ಳಲಿದ್ದಾರೆ. ಇದು ಅಭಿಷೇಕ್ ಶರ್ಮಾ ಅವರ ಮೊದಲ ಆಸೀಸ್ ಪ್ರವಾಸವಾಗಿದ್ದು, ಈ ಸರಣಿಯಲ್ಲಿ ಅವರ ಪ್ರದರ್ಶನ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.

Loading...
Unable to load recommendations.
Follow Us