ಐಸಿಸಿ ‍ರ‍್ಯಾಂಕಿಂಗ್​ನಲ್ಲಿ ಭಾರತೀಯರದ್ದೇ ದರ್ಬಾರು..!

| Updated By: ಝಾಹಿರ್ ಯೂಸುಫ್

Updated on: Sep 20, 2023 | 6:23 PM

ICC Rankings: ಐಸಿಸಿ ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ 2 ಸ್ವರೂಪಗಳಲ್ಲಿ ಟೀಮ್ ಇಂಡಿಯಾ ಅಗ್ರಸ್ಥಾನ ಅಲಂಕರಿಸಿದರೆ, ಒಂದು ಸ್ವರೂಪದಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಹಾಗಿದ್ರೆ ಐಸಿಸಿ ‍ರ‍್ಯಾಂಕಿಂಗ್​ನಲ್ಲಿ ಟೀಮ್ ಇಂಡಿಯಾ ಆಟಗಾರರು ಯಾವ ಸ್ಥಾನಗಳಲ್ಲಿದ್ದಾರೆ ಎಂದು ನೋಡೋಣ...

1 / 13
ಐಸಿಸಿ ಪ್ರಕಟಿರುವ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾ ಹಾಗೂ ಭಾರತೀಯ ಆಟಗಾರರದ್ದೇ ದರ್ಬಾರು. ಏಕೆಂದರೆ ಮೂರು ಮಾದರಿಯ ಕ್ರಿಕೆಟ್​ ‍ರ‍್ಯಾಂಕಿಂಗ್‌ ಪಟ್ಟಿಯಲ್ಲಿ 5 ವಿಭಾಗಗಳಲ್ಲಿ ಭಾರತೀಯ ಆಟಗಾರರು ಅಗ್ರಸ್ಥಾನದಲ್ಲಿದ್ದಾರೆ.

2 / 13
ಹಾಗೆಯೇ ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ 2 ಸ್ವರೂಪಗಳಲ್ಲಿ ಟೀಮ್ ಇಂಡಿಯಾ ಅಗ್ರಸ್ಥಾನ ಅಲಂಕರಿಸಿದರೆ, ಒಂದು ಸ್ವರೂಪದಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಹಾಗಿದ್ರೆ ಐಸಿಸಿ ‍ರ‍್ಯಾಂಕಿಂಗ್​ನಲ್ಲಿ ಟೀಮ್ ಇಂಡಿಯಾ ಆಟಗಾರರು ಯಾವ ಸ್ಥಾನಗಳಲ್ಲಿದ್ದಾರೆ ಎಂದು ನೋಡೋಣ...

3 / 13
ನಂಬರ್ 1 ಟಿ20 ಬ್ಯಾಟರ್- ಸೂರ್ಯಕುಮಾರ್ ಯಾದವ್: ಪ್ರಸ್ತುತ ಟಿ20 ಬ್ಯಾಟ್ಸ್​ಮನ್​ಗಳ ​ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಹೊಡಿಬಡಿ ದಾಂಡಿಗ ಸೂರ್ಯಕುಮಾರ್ ಯಾದವ್ ಅಗ್ರಸ್ಥಾನದಲ್ಲಿದ್ದಾರೆ.

4 / 13
ನಂಬರ್ 1 ಏಕದಿನ ಬೌಲರ್- ಮೊಹಮ್ಮದ್ ಸಿರಾಜ್: ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಪ್ರಸ್ತುತ ಏಕದಿನ ಕ್ರಿಕೆಟ್​ ಬೌಲರ್​ಗಳ ಪಟ್ಟಿಯಲ್ಲಿ ನಂಬರ್ 1 ಸ್ಥಾನ ಅಲಂಕರಿಸಿದ್ದಾರೆ.

5 / 13
ನಂಬರ್ 1 ಟೆಸ್ಟ್ ಬೌಲರ್- ರವಿಚಂದ್ರನ್ ಅಶ್ವಿನ್: ಟೆಸ್ಟ್ ಕ್ರಿಕೆಟ್​ನ ಬೌಲರ್​ಗಳ ಶ್ರೇಯಾಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾ ಸ್ಪಿನ್ನರ್ ಆರ್​. ಅಶ್ವಿನ್ ಅಗ್ರಸ್ಥಾನದಲ್ಲಿರುವುದು ವಿಶೇಷ.

6 / 13
ನಂಬರ್ 1 ಟೆಸ್ಟ್ ಆಲ್​ರೌಂಡರ್- ರವೀಂದ್ರ ಜಡೇಜಾ: ಟೆಸ್ಟ್ ಕ್ರಿಕೆಟ್​ನ ಆಲ್​ರೌಂಡರ್​ ​ರ‍್ಯಾಂಕಿಂಗ್‌ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಅಗ್ರಸ್ಥಾನ ಅಲಂಕರಿಸಿದ್ದಾರೆ.

7 / 13
ನಂಬರ್ 2 ಟೆಸ್ಟ್ ಆಲ್​ರೌಂಡರ್- ರವಿಚಂದ್ರನ್ ಅಶ್ವಿನ್: ಈ ಪಟ್ಟಿಯಲ್ಲಿ ಜಡೇಜಾ ಅಗ್ರಸ್ಥಾನದಲ್ಲಿದ್ದರೆ, ರವಿಚಂದ್ರನ್ ಅಶ್ವಿನ್ ನಂಬರ್ 2 ಟೆಸ್ಟ್ ಆಲ್​ರೌಂಡರ್ ಎನಿಸಿಕೊಂಡಿದ್ದಾರೆ.

8 / 13
ನಂಬರ್ 3 ಟೆಸ್ಟ್ ಬೌಲರ್​- ರವೀಂದ್ರ ಜಡೇಜಾ: ಟೆಸ್ಟ್ ಬೌಲರ್​ಗಳ ಶ್ರೇಯಾಂಕ ಪಟ್ಟಿಯಲ್ಲಿ ರವೀಂದ್ರ ಜಡೇಜಾ 3ನೇ ಸ್ಥಾನವನ್ನು ಅಲಂಕರಿಸಿದ್ದಾರೆ.

9 / 13
ನಂಬರ್ 2 ಏಕದಿನ ಬ್ಯಾಟರ್- ಶುಭ್​ಮನ್ ಗಿಲ್: ಏಕದಿನ ಬ್ಯಾಟ್ಸ್​ಮನ್​ಗಳ ಶ್ರೇಯಾಂಕ ಪಟ್ಟಿಯಲ್ಲಿ ಯುವ ದಾಂಡಿಗ ಶುಭ್​ಮನ್ ಗಿಲ್ ದ್ವಿತೀಯ ಸ್ಥಾನದಲ್ಲಿದ್ದಾರೆ.

10 / 13
ನಂಬರ್ 2 ಟಿ20 ಆಲ್​ರೌಂಡರ್: ಟಿ20 ಕ್ರಿಕೆಟ್​ನ ಆಲ್​ರೌಂಡರ್​ಗಳ ಶ್ರೇಯಾಂಕ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯ ದ್ವಿತೀಯ ಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ.

11 / 13
ನಂಬರ್ 1 ಟೆಸ್ಟ್ ತಂಡ: ಟೆಸ್ಟ್​ ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ತಂಡವು ಅಗ್ರಸ್ಥಾನದಲ್ಲಿದೆ.

12 / 13
ನಂಬರ್ 1 ಟಿ20 ತಂಡ: ಟಿ20 ತಂಡಗಳ ಶ್ರೇಯಾಂಕ ಪಟ್ಟಿಯಲ್ಲೂ ಟೀಮ್ ಇಂಡಿಯಾ ಅಗ್ರಸ್ಥಾನ ಅಲಂಕರಿಸಿರುವುದು ವಿಶೇಷ.

13 / 13
ನಂಬರ್ 2 ಏಕದಿನ ತಂಡ: ಏಕದಿನ ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾ ದ್ವಿತೀಯ ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು ಕ್ವೀನ್ ಸ್ವೀಪ್ ಮಾಡಿದರೆ ಅಗ್ರಸ್ಥಾನಕ್ಕೇರಬಹುದು.