AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾದ ಓರ್ವ ಆಟಗಾರ ಡೌಟ್: ಇಬ್ಬರ ನಡುವೆ ಪೈಪೋಟಿ

T20 World Cup 2026: ಟಿ20 ವಿಶ್ವಕಪ್ ಟೂರ್ನಿಯು ಫೆಬ್ರವರಿ 7 ರಿಂದ ಶುರುವಾಗಲಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಈ ಟೂರ್ನಿಯಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿವೆ. ಈಗಾಗಲೇ ಭಾರತ ತಂಡವು 15 ಸದಸ್ಯರುಗಳ ಬಲಿಷ್ಠ ಪಡೆಯನ್ನು ರೂಪಿಸಿದ್ದು, ಈ ತಂಡದಿಂದ ಓರ್ವ ಆಟಗಾರ ಹೊರಗುಳಿಯುವ ಸಾಧ್ಯತೆಯಿದೆ.

ಝಾಹಿರ್ ಯೂಸುಫ್
|

Updated on: Jan 27, 2026 | 11:53 AM

Share
T20 World Cup 2026: ಟಿ20 ವಿಶ್ವಕಪ್ ಆರಂಭಕ್ಕೆ ಇನ್ನು ಉಳಿದಿರುವುದು ದಿನಗಳು ಮಾತ್ರ. ಫೆಬ್ರವರಿ 7 ರಿಂದ ಶುರುವಾಗಲಿರುವ ಕ್ರಿಕೆಟ್ ಮಹಾಸಮರಕ್ಕೆ ಈಗಾಗಲೇ ಎಲ್ಲಾ ತಂಡಗಳು ಸಜ್ಜಾಗಿವೆ. ಈ ಸಜ್ಜಾಗುವಿಕೆಯ ನಡುವೆ ಟೀಮ್ ಇಂಡಿಯಾ ಆಟಗಾರನೋರ್ವ ಟೂರ್ನಿಯಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂಬ ಸುದ್ದಿಯೊಂದು ಹೊರಬಿದ್ದಿದೆ.

1 / 5
ಭಾರತ ತಂಡದ ಆಲ್​ರೌಂಡರ್ ವಾಷಿಂಗ್ಟನ್ ಸುಂದರ್ ಟಿ20 ವಿಶ್ವಕಪ್​ಗೆ ಆಯ್ಕೆಯಾಗಿದ್ದರು. ಆದರೆ ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿ ವೇಳೆ ಅವರು ಗಾಯಗೊಂಡಿದ್ದರು. ಎಡ ಪೆಕ್ಕೆಲುಬಿನ ಗಾಯಕ್ಕೆ ತುತ್ತಾಗಿದ್ದ ಕಾರಣ ಅವರು ನ್ಯೂಝಿಲೆಂಡ್ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ.

2 / 5
ಇನ್ನು ಟಿ20 ವಿಶ್ವಕಪ್​ಗೆ ಉಳಿದಿರುವುದು ಕೆಲ ದಿನಗಳು ಮಾತ್ರ. ಇದಾಗ್ಯೂ ವಾಷಿಂಗ್ಟನ್ ಸುಂದರ್ ಸಂಪೂರ್ಣ ಫಿಟ್​ ಆಗಿರುವ ವರದಿ ಬಂದಿಲ್ಲ. ಹೀಗಾಗಿ ಅವರು ಮುಂಬರುವ ಟಿ20 ವಿಶ್ವಕಪ್​ನಿಂದ ಹೊರಗುಳಿಯುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

3 / 5
ಇತ್ತ ವಾಷಿಂಗ್ಟನ್ ಸುಂದರ್​ ಹೊರಗುಳಿದರೆ ಯಾರಿಗೆ ಚಾನ್ಸ್ ಸಿಗಲಿದೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಸದ್ಯ ಸಿಗುತ್ತಿರುವ ಉತ್ತರ ರಿಯಾನ್ ಪರಾಗ್ ಅಥವಾ ರವಿ ಬಿಷ್ಣೋಯ್. ಸುಂದರ್​ ಬದಲಿಗೆ ಸ್ಪಿನ್ನರ್​ನನ್ನು ಆಯ್ಕೆ ಮಾಡಲು ಮುಂದಾದರೆ ರವಿ ಬಿಷ್ಣೋಯ್​ಗೆ ಚಾನ್ಸ್ ಸಿಗಲಿದೆ. ಇನ್ನು ಆಲ್​ರೌಂಡರ್​ ಆಯ್ಕೆಗೆ ಮುಂದಾದರೆ ರಿಯಾನ್ ಪರಾಗ್​ಗೆ ಅವಕಾಶ ಸಿಗುವ ಸಾಧ್ಯತೆಯಿದೆ. 

4 / 5
ಟಿ20 ವಿಶ್ವಕಪ್​ಗೆ ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್ (ಅನುಮಾನ).

5 / 5