Team India: ಟೀಮ್ ಇಂಡಿಯಾ ವಿಕೆಟ್ ಕೀಪರ್ ಸ್ಥಾನಕ್ಕೆ ಉಪೇಂದ್ರ..?

| Updated By: ಝಾಹಿರ್ ಯೂಸುಫ್

Updated on: Jun 21, 2023 | 11:08 PM

India vs West Indies: ಭಾರತ-ವೆಸ್ಟ್ ಇಂಡೀಸ್ ನಡುವಣ ಮೊದಲ ಟೆಸ್ಟ್ ಪಂದ್ಯವು ಜುಲೈ 12 ರಿಂದ 16 ರವರೆಗೆ ನಡೆಯಲಿದ್ದು, 2ನೇ ಪಂದ್ಯ ಜುಲೈ 20 ರಿಂದ 24 ರವರೆಗೆ ಜರುಗಲಿದೆ.

1 / 8
ಭಾರತ-ವೆಸ್ಟ್ ಇಂಡೀಸ್ (India vs West Indies) ನಡುವಣ ಸರಣಿ ಆರಂಭಕ್ಕೆ ಇನ್ನು ದಿನಗಳು ಮಾತ್ರ ಉಳಿದಿವೆ. ಇದಾಗ್ಯೂ ಈ ಸರಣಿಗಾಗಿ ಟೀಮ್ ಇಂಡಿಯಾವನ್ನು (Team India) ಪ್ರಕಟಿಸಿಲ್ಲ. ಇತ್ತ ಆಯ್ಕೆ ಸಮಿತಿಯು ತಂಡದಲ್ಲಿ ಮಹತ್ವದ ಬದಲಾವಣೆ ಮಾಡುವ ಇರಾದೆಯಲ್ಲಿದ್ದಾರೆ.

2 / 8
ಇದಕ್ಕಾಗಿ ಕೆಲ ಯುವ ಆಟಗಾರರ ಪಟ್ಟಿಯನ್ನೂ ಕೂಡ ಆಯ್ಕೆಗಾರರು ಈಗಾಗಲೇ ಸಿದ್ಧಪಡಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಉಪೇಂದ್ರ ಯಾದವ್ ಹೆಸರು ಕೂಡ ಕಾಣಿಸಿಕೊಂಡಿದೆ.

3 / 8
ಉತ್ತರ ಪ್ರದೇಶ ಮೂಲದ ಉಪೇಂದ್ರ ಯಾದವ್ ವಿಕೆಟ್ ಕೀಪರ್ ಬ್ಯಾಟ್ಸ್​ಮನ್. ಈಗಾಗಲೇ ದೇಶೀಯ ಅಂಗಳದಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಇದಾಗ್ಯೂ ಅವರಿಗೆ ಟೀಮ್ ಇಂಡಿಯಾದ ಅದೃಷ್ಟದ ಬಾಗಿಲು ತೆರೆದಿಲ್ಲ.

4 / 8
ಇತ್ತ ಭಾರತ ತಂಡದಲ್ಲಿ ಅವಕಾಶ ಪಡೆದ ಕೆಎಸ್ ಭರತ್ 8 ಇನಿಂಗ್ಸ್​ಗಳಿಂದ ಕಲೆಹಾಕಿದ್ದು ಕೇವಲ 129 ರನ್ ಮಾತ್ರ. ಅದರಲ್ಲೂ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದಲ್ಲಿ ಆಸೀಸ್ ವೇಗಿಗಳನ್ನು ಎದುರಿಸಲು ಭರತ್ ತಡಕಾಡಿದ್ದರು.

5 / 8
ಹೀಗಾಗಿಯೇ ಬಿಸಿಸಿಐ ಆಯ್ಕೆ ಸಮಿತಿ ಹೊಸ ವಿಕೆಟ್ ಕೀಪರ್​ನತ್ತ ಕಣ್ಣಾಡಿಸಿದ್ದಾರೆ. ಈ ವೇಳೆ ಕಂಡು ಬಂದ ಹೆಸರು ಉಪೇಂದ್ರ ಯಾದವ್. ರಣಜಿ ಕ್ರಿಕೆಟ್​ನಲ್ಲಿ ಯುಪಿ ಪರ 47 ಇನಿಂಗ್ಸ್ ಆಡಿರುವ ಉಪೇಂದ್ರ 5 ಭರ್ಜರಿ ಶತಕ, 7 ಅರ್ಧಶತಕದೊಂದಿಗೆ ಒಟ್ಟು 1666 ರನ್ ಕಲೆಹಾಕಿದ್ದಾರೆ.

6 / 8
ಒಂದು ವೇಳೆ ಕೆಎಸ್ ಭರತ್ ಅವರನ್ನು ತಂಡದಿಂದ ಕೈ ಬಿಟ್ಟರೆ ಟೀಮ್ ಇಂಡಿಯಾದಲ್ಲಿ ವಿಕೆಟ್ ಕೀಪರ್​ಗಳಾಗಿ ಇಶಾನ್ ಕಿಶನ್ ಹಾಗೂ ಉಪೇಂದ್ರ ಯಾದವ್ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

7 / 8
ಆದರೆ ಮತ್ತೊಂದೆಡೆ ಕೆಎಸ್ ಭರತ್​ಗೆ ಇನ್ನೊಂದು ಅವಕಾಶ ನೀಡಬೇಕೆಂಬ ಅಭಿಪ್ರಾಯಗಳು ಕೂಡ ಕೇಳಿ ಬರುತ್ತಿದೆ. ಹೀಗಾಗಿ ವೆಸ್ಟ್​ ಇಂಡೀಸ್ ಟೆಸ್ಟ್​ ಸರಣಿಯಲ್ಲಿ ಕೆಎಸ್ ಭರತ್ ಅವಕಾಶ ಪಡೆಯಲಿದ್ದಾರಾ ಅಥವಾ ಉಪೇಂದ್ರ ಯಾದವ್ ಎಂಟ್ರಿ ಕೊಡಲಿದ್ದಾರಾ ಎಂಬುದೇ ಕುತೂಹಲ.

8 / 8
ಭಾರತ-ವೆಸ್ಟ್ ಇಂಡೀಸ್ ನಡುವಣ ಮೊದಲ ಟೆಸ್ಟ್ ಪಂದ್ಯವು ಜುಲೈ 12 ರಿಂದ 16 ರವರೆಗೆ ನಡೆಯಲಿದ್ದು, 2ನೇ ಪಂದ್ಯ ಜುಲೈ 20 ರಿಂದ 24 ರವರೆಗೆ ಜರುಗಲಿದೆ.