- Kannada News Photo gallery Cricket photos Urvashi Rautela Birthday Why Urvashi Rautelas Name Linked With Rishabh Pant here is the details
Urvashi Rautela Birthday: ರಿಷಬ್ ಪಂತ್ ಜೊತೆ ನಟಿ ಊರ್ವಶಿ ರೌಟೇಲಾ ಹೆಸರು ತಳುಕು ಹಾಕಿಕೊಂಡಿದ್ಯಾಕೆ?
Urvashi Rautela Birthday: ನಟಿಯ ಹೇಳಿಕೆಗೆ ಇನ್ಸ್ಟಾಗ್ರಾಮ್ನಲ್ಲಿ ಪ್ರತ್ತ್ಯುತ್ತರ ನೀಡಿದ್ದ ಪಂತ್, ಊರ್ವಶಿ ತನ್ನ ಹೆಸರನ್ನು ಜನಪ್ರಿಯತೆಗಾಗಿ ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಖಡಕ್ ರಿಪ್ಲೆ ನೀಡಿದ್ದ ಊರ್ವಶಿ, ರಿಷಭ್ ಪಂತ್ರನ್ನು ಚೋಟು ಎಂದು ಕರೆದು ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದ್ದರು.
Updated on: Feb 25, 2023 | 11:03 AM

ಬಾಲಿವುಡ್‌ನ ಹಾಟ್ ಮತ್ತು ಬೋಲ್ಡ್ ನಟಿ ಊರ್ವಶಿ ರೌಟೇಲಾ ಇಂದು ತಮ್ಮ 29 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ, ಅಂದರೆ ಫೆಬ್ರವರಿ 25 ರಂದು. ಉತ್ತರಾಖಂಡ್‌ನಲ್ಲಿ ಜನಿಸಿದ ಊರ್ವಶಿ ತನ್ನ ನಟನೆಯಿಂದ ಅಷ್ಟಾಗಿ ಸುದ್ದಿಯಾಗದಿದ್ದರೂ, ಇತರೆ ಗಾಸಿಪ್ಗಳಿಂದಲೇ ಹೆಚ್ಚಾಗಿ ಚರ್ಚೆಯಲ್ಲಿರುತ್ತಾರೆ. ಅಂತಹ ಗಾಸಿಪ್ಗಳಲ್ಲಿ ಮೊದಲನೆಯದ್ದು, ಕ್ರಿಕೆಟಿಗ ರಿಷಬ್ ಪಂತ್ ಜೊತೆಗಿನ ಸೋಶಿಯಲ್ ಮೀಡಿಯಾ ವಾರ್.

ಊರ್ವಶಿ ರೌಟೇಲಾ ಹೆಸರು ರಿಷಬ್ ಪಂತ್ ಜೊತೆ ಬಹಳ ದಿನಗಳಿಂದ ತಳುಕು ಹಾಕಿಕೊಂಡಿದೆ. ಊರ್ವಶಿ ಯಾವುದೇ ಪೋಸ್ಟ್ ಹಂಚಿಕೊಂಡರೂ, ಅಭಿಮಾನಿಗಳು ಅದನ್ನು ರಿಷಬ್ ಪಂತ್ಗೆ ಹೋಲಿಕೆ ಮಾಡಲು ಪ್ರಾರಂಭಿಸುತ್ತಾರೆ.

ಅಭಿಮಾನಿಗಳ ಈ ಹೋಲಿಕೆಗೂ ಕಾರಣವಿದ್ದು, ಕೆಲ ತಿಂಗಳ ಹಿಂದೆ ಊರ್ವಶಿ ರೌಟೇಲಾ ನೀಡಿದ ಹೇಳಿಕೆ ವೈರಲ್ ಆಗಿತ್ತು. ಈ ಸಂದರ್ಶನದಲ್ಲಿ ನಟಿ ರೌಟೇಲಾ, ದೆಹಲಿಯ ಹೋಟೆಲ್‌ನಲ್ಲಿ ಆರ್‌ಪಿ ತನಗಾಗಿ ಕಾಯುತ್ತಿದ್ದರು. ಜೊತೆಗೆ ಅವರು ನನಗೆ 17 ಕ್ಕೂ ಹೆಚ್ಚು ಬಾರಿ ಕರೆ ಮಾಡಿದ್ದರು. ತುಂಬಾ ಸುಸ್ತಾಗಿದ್ದ ನಾನು, ಮುಂಬೈಗೆ ಬಂದು ನಿನ್ನೊಂದಿಗೆ ಮಾತನಾಡುವುದಾಗಿ ಹೇಳಿ ಕಳಿಸಿದ್ದೆ ಎಂದು ಹೇಳಿಕೊಂಡಿದ್ದರು.

ಈ ಹೇಳಿಕೆ ಬಳಿಕ ಆರ್‌ಪಿ ಎಂದರೆ ರಿಷಬ್ ಪಂತ್ ಎಂದುಕೊಂಡ ಅಭಿಮಾನಿಗಳು ಇಬ್ಬರನ್ನು ಸೋಶಿಯಲ್ ಮೀಡಿಯಾದಲ್ಲಿ ಕಾಲೆಳೆಯಲು ಆರಂಭಿಸಿದ್ದರು. ಬಳಿಕ ನಟಿಯ ಹೇಳಿಕೆಗೆ ಇನ್ಸ್ಟಾಗ್ರಾಮ್ನಲ್ಲಿ ಪ್ರತ್ತ್ಯುತ್ತರ ನೀಡಿದ್ದ ಪಂತ್, ಊರ್ವಶಿ ತನ್ನ ಹೆಸರನ್ನು ಜನಪ್ರಿಯತೆಗಾಗಿ ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಖಡಕ್ ರಿಪ್ಲೆ ನೀಡಿದ್ದ ಊರ್ವಶಿ, ರಿಷಭ್ ಪಂತ್ರನ್ನು ಚೋಟು ಎಂದು ಕರೆದು ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದ್ದರು.

ಬಳಿಕ ಟಿ20 ವಿಶ್ವಕಪ್ ವೀಕ್ಷಿಸಲು ದುಬೈಗೂ ಹಾರಿದ್ದ ನಟಿ ಮತ್ತಷ್ಟು ಮುನ್ನಲೆಗೆ ಬಂದಿದ್ದರು. ಕೆಲವು ದಿನಗಳ ಹಿಂದೆ ರಿಷಬ್ ಪಂತ್ ಕಾರು ಅಪಘಾತಕ್ಕೀಡಾದಾಗ ಅವರ ಚೇತರಿಕೆಗಾಗಿ ದೇವರಲ್ಲಿ ಮೊರೆ ಇಟ್ಟಿರುವುದಾಗಿ ಪೋಸ್ಟ್ ಮಾಡುವ ಮೂಲಕ ಊರ್ವಶಿ, ಪಂತ್ ಅಭಿಮಾನಿಗಳ ಹೃದಯ ಗೆದ್ದಿದ್ದರು.




