
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ನೊಂದಿಗೆ ಸಂಚಲನ ಸೃಷ್ಟಿಸಿರುವ ವೈಭವ್ ಸೂರ್ಯವಂಶಿ (Vaibhav Sooryavanshi) ಭರ್ಜರಿ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದು ಕೂಡ ಕೀರನ್ ಪೊಲಾರ್ಡ್ 652 ಇನಿಂಗ್ಸ್ಗಳ ಮೂಲಕ ಮಾಡಿದ್ದನ್ನು ಕೇವಲ 33 ಇನಿಂಗ್ಸ್ಗಳಲ್ಲಿ ಸಾಧಿಸಿ ತೋರಿಸುವ ಮೂಲಕ ಎಂಬುದು ವಿಶೇಷ. (PC: IPL)

ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್ಭಟಿಸಿದ ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 12 ಸಿಕ್ಸರ್ ಹಾಗೂ 5 ಫೋರ್ಗಳೊಂದಿಗೆ 97 ರನ್ ಚಚ್ಚಿದ್ದರು. ಅಂದರೆ ಬರೋಬ್ಬರಿ 334.48 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದರು. ಈ ಬಿರುಗಾಳಿ ಬ್ಯಾಟಿಂಗ್ನೊಂದಿಗೆ ವೈಭವ್ ವಿಶೇಷ ವಿಶ್ವ ದಾಖಲೆ ನಿರ್ಮಿಸಿದ್ದಾರೆ. (PC: IPL)

ಅಂದರೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ 300+ ಸ್ಟ್ರೈಕ್ ರೇಟ್ನೊಂದಿಗೆ ಅತ್ಯಧಿಕ 50+ ಸ್ಕೋರ್ಗಳಿಸಿದ ವಿಶ್ವದ 2ನೇ ಬ್ಯಾಟರ್ ಎಂಬ ಭರ್ಜರಿ ದಾಖಲೆಯನ್ನು ವೈಭವ್ ಸೂರ್ಯವಂಶಿ ತಮ್ಮದಾಗಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಕೀರನ್ ಪೊಲಾರ್ಡ್. (PC: IPL)

ಕೀರನ್ ಪೊಲಾರ್ಡ್ ಟಿ20 ಕ್ರಿಕೆಟ್ನಲ್ಲಿ ಈವರೆಗೆ 652 ಇನಿಂಗ್ಸ್ ಆಡಿದ್ದಾರೆ. ಈ ವೇಳೆ 300+ ಸ್ಟ್ರೈಕ್ ರೇಟ್ನಲ್ಲಿ 4 ಬಾರಿ 50+ ಸ್ಕೋರ್ಗಳಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ 300+ ಸ್ಟ್ರೈಕ್ ರೇಟ್ನಲ್ಲಿ 4 ಬಾರಿ ಅರ್ಧಶತಕಕ್ಕಿಂತ ಅಧಿಕ ರನ್ಗಳಿಸಿದ ವಿಶ್ವ ದಾಖಲೆ ನಿರ್ಮಿಸಿದ್ದಾರೆ. (PC: IPL)

ಇದೀಗ 15 ವರ್ಷದ ವೈಭವ್ ಸೂರ್ಯವಂಶಿ ಈ ಭರ್ಜರಿ ದಾಖಲೆಯನ್ನು ಸರಿಗಟ್ಟಿದ್ದಾರೆ. ಅದು ಕೂಡ ಕೇವಲ 33 ಇನಿಂಗ್ಸ್ಗಳಲ್ಲಿ. ಅಂದರೆ ವೈಭವ್ ಸೂರ್ಯವಂಶಿ ಈವರೆಗೆ ಆಡಿದ 33 ಟಿ20 ಇನಿಂಗ್ಸ್ಗಳಲ್ಲಿ 4 ಬಾರಿ 300+ ಸ್ಟ್ರೈಕ್ ರೇಟ್ನಲ್ಲಿ ಅರ್ಧಶತಕಕ್ಕಿಂತ ಅಧಿಕ ರನ್ಗಳಿಸಿದ್ದಾರೆ. ಈ ಮೂಲಕ 652 ಇನಿಂಗ್ಸ್ಗಳ ಮೂಲಕ ಕೀರನ್ ಪೊಲಾರ್ಡ್ ನಿರ್ಮಿಸಿದ ವಿಶ್ವ ದಾಖಲೆಯನ್ನು ವೈಭವ್ ಸೂರ್ಯವಂಶಿ ಕೇವಲ 33 ಇನಿಂಗ್ಸ್ಗಳಲ್ಲಿ ಸರಿಗಟ್ಟಿದ್ದಾರೆ. (PC: IPL)