
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಈವರೆಗೆ 750 ಕ್ಕೂ ಹೆಚ್ಚು ಭಾರತೀಯರು ಕಣಕ್ಕಿಳಿದಿದ್ದಾರೆ. ಈ ಆಟಗಾರರಿಗೆ ಸಾಧ್ಯವಾಗದೇ ಇರುವುದನ್ನು 15 ವರ್ಷದ ವೈಭವ್ ಸೂರ್ಯವಂಶಿ (Vaibhav Sooryavanshi) ಸಾಧಿಸಿ ತೋರಿಸಿದ್ದಾರೆ. ಅದು ಕೂಡ ಸಿಕ್ಸರ್ಗಳ ಸುರಿಮಳೆಯೊಂದಿಗೆ..! (PC: IPL)

ಹೌದು, ಐಪಿಎಲ್ ಇತಿಹಾಸದಲ್ಲಿ ಆವೃತ್ತಿಯೊಂದರಲ್ಲಿ 50+ ಸಿಕ್ಸ್ ಸಿಡಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ಭರ್ಜರಿ ದಾಖಲೆಯೊಂದನ್ನು ವೈಭವ್ ಸೂರ್ಯವಂಶಿ ತಮ್ಮದಾಗಿಸಿಕೊಂಡಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 10 ಸಿಕ್ಸ್ ಸಿಡಿಸುವ ಮೂಲಕ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ. (PC: IPL)

ಇದಕ್ಕೂ ಮುನ್ನ ಐಪಿಎಲ್ ಸೀಸನ್ನಲ್ಲಿ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆ ಸನ್ರೈಸರ್ಸ್ ಹೈದರಾಬಾದ್ ತಂಡದ ಅಭಿಷೇಕ್ ಶರ್ಮಾ ಹೆಸರಿನಲ್ಲಿತ್ತು. ಐಪಿಎಲ್ 2024 ರಲ್ಲಿ 42 ಸಿಕ್ಸ್ ಸಿಡಿಸುವ ಮೂಲಕ ಅಭಿಷೇಕ್ ಈ ದಾಖಲೆ ಬರೆದಿದ್ದರು. (PC: IPL)

ಆದರೆ ಈ ಬಾರಿಯ ಐಪಿಎಲ್ ಮೂಲಕ ವೈಭವ್ ಸೂರ್ಯವಂಶಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. 13 ಪಂದ್ಯಗಳಲ್ಲಿ 53 ಸಿಕ್ಸ್ ಸಿಡಿಸುವ ಮೂಲಕ ವೈಭವ್ ಸೂರ್ಯವಂಶಿ ಐಪಿಎಲ್ ಆವೃತ್ತಿಯೊಂದರಲ್ಲಿ 50 ಕ್ಕಿಂತ ಹೆಚ್ಚು ಸಿಕ್ಸ್ ಬಾರಿಸಿದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ. (PC: IPL)

ಅಷ್ಟೇ ಅಲ್ಲದೆ ಐಪಿಎಲ್ವೊಂದರಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದ್ದಾರೆ. ಈ ದಾಖಲೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಕ್ರಿಸ್ ಗೇಲ್. ವೆಸ್ಟ್ ಇಂಡೀಸ್ ದಾಂಡಿಗ 2012 ರಲ್ಲಿ ಬರೋಬ್ಬರಿ 59 ಸಿಕ್ಸ್ ಸಿಡಿಸಿ ಈ ದಾಖಲೆ ನಿರ್ಮಿಸಿದ್ದರು. (PC: IPL)

ಇದೀಗ ವೈಭವ್ ಸೂರ್ಯವಂಶಿ 13 ಇನಿಂಗ್ಸ್ಗಳ ಮೂಲಕ 53 ಸಿಕ್ಸ್ ಸಿಡಿಸಿದ್ದಾರೆ. ಈ ಮೂಲಕ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದ್ದಾರೆ. ಅಷ್ಟೇ ಅಲ್ಲದೆ ಮುಂದಿನ ಪಂದ್ಯದಲ್ಲಿ 7 ಸಿಕ್ಸ್ ಸಿಡಿಸಿದರೆ ಐಪಿಎಲ್ ಆವೃತ್ತಿಯೊಂದರಲ್ಲಿ ಅತೀ ಹೆಚ್ಚು ಬಾರಿಸಿದ ಸಾರ್ವಕಾಲಿಕ ದಾಖಲೆ ವೈಭವ್ ಸೂರ್ಯವಂಶಿ ಪಾಲಾಗಲಿದೆ. (PC: IPL)
Published On - 7:08 am, Wed, 20 May 26