Ipl 2022: RCB ಗೆ ಮತ್ತೆ ಕಿಂಗ್ ಕೊಹ್ಲಿ ನಾಯಕ..?

Edited By:

Updated on: Dec 18, 2021 | 6:31 PM

IPL 2022 Rcb Captain: ಈ ಹಿಂದೆ ಕೆಲಸದ ಹೊರೆಯಿಂದಾಗಿ ವಿರಾಟ್ ಕೊಹ್ಲಿ ಆರ್​ಸಿಬಿ, ಟೀಮ್ ಇಂಡಿಯಾ ಟಿ20 ತಂಡದ ನಾಯಕತ್ವದಿಂದ ಕೆಳಗಿಳಿದಿದ್ದರು. (ಡೈಲಿಹಂಟ್​ನಲ್ಲಿ ಫೋಟೋ ಗ್ಯಾಲರಿ ಸ್ಟೋರಿಯಲ್ಲಿ ಸುದ್ದಿ ಸಾರಾಂಶ ಕಾಣಿಸುತ್ತಿಲ್ಲ. ಹಾಗಾಗಿ tv9kannada.com ಗೆ ಭೇಟಿ ನೀಡಿದ್ರೆ ಸಂಪೂರ್ಣ ಸುದ್ದಿ ಓದಬಹುದು)

1 / 6
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​ 15ನ ಮೆಗಾ ಹರಾಜಿಗಾಗಿ ಎಲ್ಲಾ ತಂಡಗಳು  ಸಿದ್ದತೆಯಲ್ಲಿದೆ. ಅದರಲ್ಲೂ ಹೊಸ ಎರಡು ಫ್ರಾಂಚೈಸಿಗಳು ಸೇರಿ ಒಟ್ಟು ಐದು ತಂಡಗಳು ಹೊಸ ನಾಯಕನ ಹುಡುಕಾಟದಲ್ಲಿದೆ. ಅದರಂತೆ ಕೆಕೆಆರ್​, ಪಂಜಾಬ್ ಕಿಂಗ್ಸ್​, ಆರ್​ಸಿಬಿ, ಲಕ್ನೋ ಹಾಗೂ ಅಹಮದಾಬಾದ್ ಫ್ರಾಂಚೈಸಿಗಳು ಹೊಸ ಕ್ಯಾಪ್ಟನ್​ ಅನ್ನು ಆಯ್ಕೆ ಮಾಡಬೇಕಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​ 15ನ ಮೆಗಾ ಹರಾಜಿಗಾಗಿ ಎಲ್ಲಾ ತಂಡಗಳು ಸಿದ್ದತೆಯಲ್ಲಿದೆ. ಅದರಲ್ಲೂ ಹೊಸ ಎರಡು ಫ್ರಾಂಚೈಸಿಗಳು ಸೇರಿ ಒಟ್ಟು ಐದು ತಂಡಗಳು ಹೊಸ ನಾಯಕನ ಹುಡುಕಾಟದಲ್ಲಿದೆ. ಅದರಂತೆ ಕೆಕೆಆರ್​, ಪಂಜಾಬ್ ಕಿಂಗ್ಸ್​, ಆರ್​ಸಿಬಿ, ಲಕ್ನೋ ಹಾಗೂ ಅಹಮದಾಬಾದ್ ಫ್ರಾಂಚೈಸಿಗಳು ಹೊಸ ಕ್ಯಾಪ್ಟನ್​ ಅನ್ನು ಆಯ್ಕೆ ಮಾಡಬೇಕಿದೆ.

2 / 6

ಈ ಬಾರಿಯ ಐಪಿಎಲ್ ಮುಕ್ತಾಯದ ಬೆನ್ನಲ್ಲೇ ಆರ್​ಸಿಬಿ ತಂಡದ ನಾಯಕತ್ವಕ್ಕೆ ಕೊಹ್ಲಿ ರಾಜೀನಾಮೆ ನೀಡಿದ್ದರು. ಕೆಲಸದ ಒತ್ತಡ ಹೆಚ್ಚಾಗಿರುವ ಕಾರಣ ನಾಯಕನಾಗಿ ಮುಂದುವರೆಯಲು ಸಾಧ್ಯವಾಗುತ್ತಿಲ್ಲ ಎಂದಿದ್ದರು. ಹೀಗಾಗಿಯೇ ಆರ್​ಸಿಬಿ ತಂಡದ ಹೊಸ ನಾಯಕನ ವಿಚಾರ ಚರ್ಚೆಯಲ್ಲಿದೆ.

3 / 6

ಆದರೆ ಇದೀಗ ಆರ್​ಸಿಬಿ ತಂಡದ ಮುಂದಿನ ನಾಯಕ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗುವ ಸಾಧ್ಯತೆಯಿದೆ. ಏಕೆಂದರೆ ಆರ್​ಸಿಬಿ ಇದೀಗ ವಿರಾಟ್ ಕೊಹ್ಲಿ ಅವರನ್ನೇ ಮತ್ತೊಮ್ಮೆ ನಾಯಕನಾಗಿ ಘೋಷಿಸಲಿದೆ ಎಂದು ವರದಿಯಾಗಿದೆ.

4 / 6

ಈ ಹಿಂದೆ ಕೆಲಸದ ಹೊರೆಯಿಂದಾಗಿ ವಿರಾಟ್ ಕೊಹ್ಲಿ ಆರ್​ಸಿಬಿ, ಟೀಮ್ ಇಂಡಿಯಾ ಟಿ20 ತಂಡದ ನಾಯಕತ್ವದಿಂದ ಕೆಳಗಿಳಿದಿದ್ದರು. ಆದರೆ ಇದೀಗ ವಿರಾಟ್ ಕೊಹ್ಲಿಯನ್ನು ಟೀಮ್ ಇಂಡಿಯಾ ಏಕದಿನ ತಂಡದ ನಾಯಕನ ಸ್ಥಾನದಿಂದ ಕೆಳಗಿಳಿಸಲಾಗಿದೆ. ಸದ್ಯ ಕೊಹ್ಲಿ ಟೆಸ್ಟ್ ತಂಡದ ನಾಯಕನಾಗಿ ಮಾತ್ರ ಮುಂದುವರೆಯಲಿದ್ದಾರೆ.

5 / 6

ಅಂದರೆ ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಟಿ20 ಹಾಗೂ ಏಕದಿನ ತಂಡಗಳ ನಾಯಕನ ಹೊರೆ ಕಡಿಮೆಯಾಗಿದೆ. ಇತ್ತ ನಾಯಕನ ಜವಾಬ್ದಾರಿ ಕಡಿಮೆಯಾಗಿರುವ ಕಾರಣ ಕೊಹ್ಲಿಯ ಒತ್ತಡ ಕೂಡ ಕಡಿಮೆಯಾಗಲಿದೆ. ಹೀಗಾಗಿ ಮತ್ತೊಮ್ಮೆ ಆರ್​ಸಿಬಿ ತಂಡದ ನಾಯಕನಾಗಿ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

6 / 6

ಅತ್ತ ಟೀಮ್ ಇಂಡಿಯಾ ಟಿ20 ಹಾಗೂ ಏಕದಿನ ತಂಡ ನಾಯಕತ್ವ ವಿರಾಟ್ ಕೊಹ್ಲಿ ಕೈತಪ್ಪುತ್ತಿದ್ದಂತೆ ಇತ್ತ ಆರ್​ಸಿಬಿಗೆ ಮುಂದಿನ ಸೀಸನ್​ನಲ್ಲೂ ವಿರಾಟ್ ಕೊಹ್ಲಿಯೇ ನಾಯಕ ಎನ್ನಲಾಗುತ್ತಿದೆ. ಹೀಗಾಗಿ ಮುಂದಿನ ಸೀಸನ್​ನಲ್ಲೂ ವಿರಾಟ್ ಕೊಹ್ಲಿಯೇ ಆರ್​ಸಿಬಿ ತಂಡವನ್ನು ಮುನ್ನಡೆಸಿದರೂ ಅಚ್ಚರಿಪಡಬೇಕಿಲ್ಲ.

Published On - 6:26 pm, Sat, 18 December 21

Loading...
Unable to load recommendations.
Follow Us