
ಗೆದ್ದು ಸರಣಿಯನ್ನು ಕೈವಶ ಮಾಡಿಕೊಳ್ಳಲು ನೋಡುತ್ತಿದೆ. ಆದರೆ ಈ ಪಂದ್ಯಕ್ಕೂ ಮುನ್ನ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಇಂಜುರಿಯಿಂದಾಗಿ ಕೊನೆಯ ಏಕದಿನ ಪಂದ್ಯದಿಂದ ಹೊರಗುಳಿಯಲಿದ್ದಾರೆ(PC-PTI).

ಜುಲೈ 16, ಗುರುವಾರ ಕಾರ್ಡಿಫ್‌ನಲ್ಲಿ ನಡೆದ ಭಾರತ-ಇಂಗ್ಲೆಂಡ್ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಸುಂದರ್ ಬ್ಯಾಟಿಂಗ್ ಮಾಡುವಾಗ ಗಾಯಗೊಂಡರು. ವಿರಾಟ್ ಕೊಹ್ಲಿ ಔಟಾದ ನಂತರ ಬ್ಯಾಟಿಂಗ್ ಮಾಡಲು ಬಂದ ಸುಂದರ್ ಓಡುವಾಗ ಕಾಲಿನ ನೋವಿಗೆ ತುತ್ತಾದರು. ಕೂಡಲೇ ಮೈದಾನಕ್ಕೆ ಬಂದ ಫಿಸಿಯೋ ಸುಂದರ್ ಅವರ ಕಾಲಿಗೆ ಬ್ಯಾಂಡೇಜ್ ಮಾಡಿದರು(PC-PTI).

ಆದರೆ ಚಿಕಿತ್ಸೆಯ ಬಳಿಕವೂ ಸುಂದರ್ ಅವರ ನೋವು ಕಡಿಮೆ ಆಗಲಿಲ್ಲ. ಇದು ಸುಂದರ್ ಅವರ ಬ್ಯಾಟಿಂಗ್ ಮೇಲೆ ಪರಿಣಾಮ ಬೀರಿತು. ಹೀಗಾಗಿ ಅವರು ಮುಂದಿನ ಎಸೆತದಲ್ಲಿ ಪುಲ್ ಶಾಟ್ ಮಾಡಲು ಪ್ರಯತ್ನಿಸಿ ವಿಕೆಟ್ ಕೀಪರ್‌ಗೆ ಸುಲಭವಾದ ಕ್ಯಾಚ್ ನೀಡಿದರು. ಹೀಗಾಗಿ, ಸುಂದರ್ ಕೇವಲ ಐದು ಎಸೆತಗಳನ್ನು ಆಡಿ ಪೆವಿಲಿಯನ್‌ಗೆ ಮರಳಿದರು. ಇದರಿಂದಾಗಿ ಸುಂದರ್ ಫಿಲ್ಡಿಂಗ್ ಸಮಯದಲ್ಲೂ ಮೈದಾನಕ್ಕಿಳಿಯಲಿಲ್ಲ. ಪರಿಣಾಮವಾಗಿ, ಟೀಂ ಇಂಡಿಯಾಕ್ಕೆ ಒಬ್ಬ ಬೌಲರ್ನ ಕೊರತೆಯುಂಟಾಯಿತು(PC-PTI).

ಪಂದ್ಯ ಮುಗಿದ ಬಳಿಕ ಸುಂದರ್ಗೆ ಹೆಚ್ಚಿನ ತಪಾಸಣೆ ಮಾಡಲಾಗಿದ್ದು, ಅವರ ಗಾಯ ಗಂಭೀರವಾಗಿರುವುದು ಪತ್ತೆಯಾಗಿದೆ. ಹೀಗಾಗಿ ಜುಲೈ 19 ರಂದು ಲಾರ್ಡ್ಸ್‌ನಲ್ಲಿ ನಡೆಯಲಿರುವ ಅಂತಿಮ ಏಕದಿನ ಪಂದ್ಯದಲ್ಲಿ ಅವರಿಗೆ ಆಡಲು ಸಾಧ್ಯವಾಗುವುದಿಲ್ಲ ಎಂದು ಪಿಟಿಐ ವರದಿ ಬಹಿರಂಗಪಡಿಸಿದೆ. ಇದರರ್ಥ ಸುಂದರ್ ಸರಣಿಯಿಂದ ಹೊರಗುಳಿದಿದ್ದಾರೆ(PC-PTI).

ಸುಂದರ್ ಅವರ ಗಾಯವು ಟೀಂ ಇಂಡಿಯಾಕ್ಕೆ ದೊಡ್ಡ ಹೊಡೆತ. ಏಕೆಂದರೆ ಮೊದಲ ಪಂದ್ಯದಲ್ಲಿ ಅವರು ಅಕ್ಷರ್ ಪಟೇಲ್ ಅವರೊಂದಿಗೆ ಅಜೇಯ ಶತಕದ ಪಾಲುದಾರಿಕೆಯನ್ನು ನಿರ್ಮಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದರು. ಹಾಗೆಯೇ ಅದ್ಭುತ ಅರ್ಧಶತಕವನ್ನು ಬಾರಿಸಿದ್ದರು. ಆದರೀಗ ಅವರು ಕೊನೆಯ ಪಂದ್ಯದಿಂದ ಹೊರಬಿದ್ದಿರುವುದರಿಂದ ಅವರ ಜಾಗದಲ್ಲಿ ಯಾರು ಆಡಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ(PC-PTI).