World Cup Qualifier: ವಿಶ್ವಕಪ್​ನಿಂದ 4 ತಂಡಗಳು ಔಟ್! ಸೂಪರ್ ಸಿಕ್ಸ್​ಗೆ ಈ 6 ತಂಡಗಳ ಎಂಟ್ರಿ

Updated on: Jun 26, 2023 | 9:25 AM

World Cup Qualifier: ಸೂಪರ್ ಸಿಕ್ಸ್‌ ಹಂತಕ್ಕೆ 10 ತಂಡಗಳ ಪೈಕಿ ಯಾವ 6 ತಂಡಗಳು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿವೆ ಎಂಬುದು ಖಚಿತವಾಗಿದೆ.

1 / 8
ಜೂನ್ 18 ರಿಂದ ಆರಂಭವಾಗಿರುವ ವಿಶ್ವಕಪ್ ಅರ್ಹತಾ ಸುತ್ತಿನ ಲೀಗ್ ಹಂತ ಇನ್ನೇರಡು ದಿನಗಳಲ್ಲಿ ಮುಗಿಯಲಿದೆ. ಕ್ವಾಲಿಫೈಯರ್ ಸುತ್ತಿನಲ್ಲಿ 10 ತಂಡಗಳು ಕಣಕ್ಕಿಳಿದಿದ್ದು, ಅಂತಿಮವಾಗಿ ಪಾಯಿಂಟ್ ಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು  ಈ ಬಾರಿಯ ಏಕದಿನ ವಿಶ್ವಕಪ್​ಗೆ ಅರ್ಹತೆ ಪಡೆಯಲ್ಲಿವೆ.

ಜೂನ್ 18 ರಿಂದ ಆರಂಭವಾಗಿರುವ ವಿಶ್ವಕಪ್ ಅರ್ಹತಾ ಸುತ್ತಿನ ಲೀಗ್ ಹಂತ ಇನ್ನೇರಡು ದಿನಗಳಲ್ಲಿ ಮುಗಿಯಲಿದೆ. ಕ್ವಾಲಿಫೈಯರ್ ಸುತ್ತಿನಲ್ಲಿ 10 ತಂಡಗಳು ಕಣಕ್ಕಿಳಿದಿದ್ದು, ಅಂತಿಮವಾಗಿ ಪಾಯಿಂಟ್ ಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು ಈ ಬಾರಿಯ ಏಕದಿನ ವಿಶ್ವಕಪ್​ಗೆ ಅರ್ಹತೆ ಪಡೆಯಲ್ಲಿವೆ.

2 / 8

ಅದಕ್ಕೂ ಮುನ್ನ ಸದ್ಯಕ್ಕೆ ಕ್ವಾಲಿಫೈಯರ್ ಸುತ್ತಿನಲ್ಲಿ ಲೀಗ್ ಹಂತ ಮುಕ್ತಾಯದ ಸನಿಹದಲ್ಲಿದ್ದು, ಇದೀಗ ಮುಂದಿನ ಹಂತ ಅಂದರೆ, ಸೂಪರ್ ಸಿಕ್ಸ್‌ ಹಂತಕ್ಕೆ 10 ತಂಡಗಳ ಪೈಕಿ ಯಾವ 6 ತಂಡಗಳು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿವೆ ಎಂಬುದು ಖಚಿತವಾಗಿದೆ.

3 / 8

ಕ್ವಾಲಿಫೈಯರ್ ಸುತ್ತಿನ ಲೀಗ್ ಹಂತವು ಮಂಗಳವಾರದವರೆಗೆ ಮುಂದುವರಿಯಲಿದ್ದು, ನಂತರ ಸೂಪರ್ ಸಿಕ್ಸ್ ಮತ್ತು ಪ್ಲೇಆಫ್ ಸೆಮಿಫೈನಲ್ ಪಂದ್ಯದ ಹಂತವು ಗುರುವಾರದಿಂದ ಆರಂಭವಾಗಲಿದೆ. ಅಲ್ಲಿ ಆರು ತಂಡಗಳು ವಿಶ್ವಕಪ್ ಆಡಲು ಸ್ಪರ್ಧಿಸಲಿವೆ. ಇಲ್ಲಿಂದ ಸ್ಥಾನ ಗಿಟ್ಟಿಸಿಕೊಂಡ ತಂಡ ವಿಶ್ವಕಪ್ ಆಡಲು ಭಾರತಕ್ಕೆ ಬರಲಿದೆ.

4 / 8

ಇದರಲ್ಲಿ ಎಲ್ಲರ ಕಣ್ಣು ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ಮೇಲೆ ನೆಟ್ಟಿದೆ. ಒಂದು ಕಾಲದಲ್ಲಿ ಪ್ರಬಲವಾಗಿದ್ದ ಎರಡೂ ತಂಡಗಳು ಅರ್ಹತಾ ಪಂದ್ಯಗಳನ್ನು ಆಡುವ ಮೂಲಕ ವಿಶ್ವಕಪ್ ತಲುಪುವ ಸ್ಥಿತಿಯಲ್ಲಿವೆ. ಸದ್ಯ ಲೀಗ್ ಸುತ್ತಿನಲ್ಲಿ 10 ತಂಡಗಳ ಪೈಕಿ 4 ತಂಡಗಳ ಪಯಣ ಅಂತ್ಯಗೊಂಡಿದೆ. ಅದೇನೆಂದರೆ, 2023ರ ವಿಶ್ವಕಪ್ ಆಡುವ ಈ ನಾಲ್ಕು ತಂಡಗಳ ಕನಸು ನನಸಾಗಿಯೇ ಉಳಿದು ಈಗ ತವರಿಗೆ ಮರಳಬೇಕಾಗಿದೆ.

5 / 8

ಅಂದರೆ ವಿಶ್ವಕಪ್ ಆಡಲು ಅರ್ಹತಾ ಹಂತದಲ್ಲಿ ಆಡುತ್ತಿರುವ 10 ತಂಡಗಳ ಪೈಕಿ 4 ತಂಡಗಳಾದ ನೇಪಾಳ. ಯುಎಇ, ಯುಎಸ್ಎ ಮತ್ತು ಐರ್ಲೆಂಡ್ ತಂಡಗಳು ಈ ಬಾರಿಯ ವಿಶ್ವಕಪ್​ನಲ್ಲಿ ಆಡಲು ಸಾಧ್ಯವಾಗುವುದಿಲ್ಲ.

6 / 8

ಇನ್ನುಳಿದ 6 ತಂಡಗಳಾದ ನೆದರ್ಲ್ಯಾಂಡ್ಸ್, ಶ್ರೀಲಂಕಾ, ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್ ಮತ್ತು ಓಮನ್ ಜೊತೆಗೆ ಅರ್ಹತಾ ಪಂದ್ಯದ ಆತಿಥೇಯ ಜಿಂಬಾಬ್ವೆ ತಂಡಗಳು ಸೂಪರ್ ಸಿಕ್ಸ್‌ ಹಂತಕ್ಕೆ ಎಂಟ್ರಿಕೊಟ್ಟಿವೆ. ಈ ಆರು ತಂಡಗಳು ಈಗ ಅಂತಿಮ ಎರಡು ತಂಡಗಳಾಗಿ ವಿಶ್ವಕಪ್ ತಲುಪಲು ಪರಸ್ಪರ ಪೈಪೋಟಿ ನಡೆಸಲಿವೆ.

7 / 8

ಆದಾಗ್ಯೂ, ಲೀಗ್ ಹಂತದಲ್ಲಿ ಇನ್ನೂ ನಾಲ್ಕು ಪಂದ್ಯಗಳು ಬಾಕಿ ಉಳಿದಿವೆ. ಅವು ಮುಗಿದ ನಂತರ, ಸೂಪರ್ ಸಿಕ್ಸ್‌ನಲ್ಲಿ ಯಾವ ತಂಡವು ಯಾರನ್ನು ಎದುರಿಸಲಿದೆ ಎಂಬುದನ್ನು ಪಾಯಿಂಟ್ ಟೇಬಲ್ ನಿರ್ಧರಿಸುತ್ತದೆ.

8 / 8

10 ತಂಡಗಳಲ್ಲಿ 2 ತಂಡಗಳು ಮಾತ್ರ ವಿಶ್ವಕಪ್‌ಗೆ ಅರ್ಹತೆ ಪಡೆಯುತ್ತವೆ. ಅಂದರೆ ಕ್ವಾಲಿಫೈಯರ್ ಸುತ್ತಿನ ಮೂಲಕ ಕೇವಲ 2 ತಂಡಗಳು ಮಾತ್ರ ವಿಶ್ವಕಪ್‌ಗೆ ಎಂಟ್ರಿಕೊಡಲಿವೆ. ಕ್ವಾಲಿಫೈಯರ್ ಪಂದ್ಯದ ಹಂತದಲ್ಲಿ ಅಂತಿಮ 2 ತಂಡಗಳನ್ನು ನಿರ್ಧರಿಸಲು ಈಗ ಸೂಪರ್ ಸಿಕ್ಸ್ ಸುತ್ತನ್ನು ಆಡಲಾಗುತ್ತದೆ. ನಂತರ ಈ ಎರಡೂ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಲಿದೆ. ಆ ಬಳಿಕ ಅಂತಿಮ 2 ತಂಡಗಳ ಚಿತ್ರಣ ಸ್ಪಷ್ಟವಾಗಲಿದೆ.

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us