RCB ಪ್ಲೇಆಫ್ಗೆ ಪ್ರವೇಶಿಸಬೇಕಿದ್ದರೆ ಇಷ್ಟು ಪಂದ್ಯ ಗೆಲ್ಲಲೇಬೇಕು..!
WPL 2025: ವುಮೆನ್ಸ್ ಪ್ರೀಮಿಯರ್ ಲೀಗ್ನ ಮೊದಲ ಪಂದ್ಯದಲ್ಲಿ 6 ವಿಕೆಟ್ಗಳ ಜಯ ಸಾಧಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (RCB), ಎರಡನೇ ಪಂದ್ಯದಲ್ಲಿ 8 ವಿಕೆಟ್ಗಳ ಗೆಲುವು ದಾಖಲಿಸಿತ್ತು. ಆದರೆ ಇದಾದ ಬಳಿಕ ಮುಂಬೈ ಇಂಡಿಯನ್ಸ್ ಯುಪಿ ವಾರಿಯರ್ಸ್ ಹಾಗೂ ಗುಜರಾತ್ ಜೈಂಟ್ಸ್ ವಿರುದ್ಧ ಸೋಲುಂಡಿದೆ. ಇದಾಗ್ಯೂ ಆರ್ಸಿಬಿ ತಂಡಕ್ಕೆ ಇನ್ನೂ ಮೂರು ಮ್ಯಾಚ್ಗಳಿದ್ದು, ಈ ಪಂದ್ಯಗಳು ಸ್ಮೃತಿ ಮಂಧಾನ ಪಡೆಗೆ ನಿರ್ಣಾಯಕ.
Updated on: Mar 01, 2025 | 9:55 AM

ವುಮೆನ್ಸ್ ಪ್ರೀಮಿಯರ್ ಲೀಗ್ನ ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆ ಬಳಿಕ ಹ್ಯಾಟ್ರಿಕ್ ಸೋಲುಂಡಿದೆ. ಅದು ಸಹ ತವರು ಮೈದಾನದ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ. ಈ ಮೂರು ಸೋಲುಗಳೊಂದಿಗೆ ಆರ್ಸಿಬಿ ತಂಡದ ಪ್ಲೇಆಫ್ ಹಾದಿ ಕೂಡ ತುಸು ಕಠಿಣವಾಗಿದೆ.

ಅಂದರೆ ಆರ್ಸಿಬಿ ತಂಡಕ್ಕೆ ಇನ್ನುಳಿದಿರುವುದು ಕೇವಲ ಮೂರು ಮ್ಯಾಚ್ಗಳು ಮಾತ್ರ. ಈ ಮೂರು ಪಂದ್ಯಗಳಲ್ಲೂ ಗೆದ್ದರೆ ಮಾತ್ರ ನೇರವಾಗಿ ಪ್ಲೇಆಫ್ಗೆ ಪ್ರವೇಶಿಸಬಹುದು. ಇಲ್ಲದಿದ್ದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇತರೆ ತಂಡಗಳ ಫಲಿತಾಂಶವನ್ನು ಅವಲಂಭಿಸಬೇಕಾಗುತ್ತದೆ.

ಆರ್ಸಿಬಿ ತಂಡವು ಮುಂದಿನ ಮೂರು ಮ್ಯಾಚ್ಗಳಲ್ಲಿ, ಅಂದರೆ ಡೆಲ್ಲಿ ಕ್ಯಾಪಿಟಲ್ಸ್, ಯುಪಿ ವಾರಿಯರ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ವಿರುದ್ಧ ಜಯ ಸಾಧಿಸಿದರೆ ಒಟ್ಟು 10 ಅಂಕಗಳೊಂದಿಗೆ ನೇರವಾಗಿ ಪ್ಲೇಆಫ್ಗೆ ಪ್ರವೇಶಿಸಬಹುದು.

ಒಂದು ವೇಳೆ ಆರ್ಸಿಬಿ ತಂಡವು ಕೊನೆಯ ಮೂರು ಪಂದ್ಯಗಳಲ್ಲಿ 2 ಗೆಲುವು ಮಾತ್ರ ಸಾಧಿಸಿದರೆ, ಒಟ್ಟು 8 ಅಂಕಗಳೊಂದಿಗೆ ಪ್ಲೇಆಫ್ ರೇಸ್ನಲ್ಲೇ ಉಳಿಯಲಿದೆ. ಆದರೆ ಇಲ್ಲಿ ನೆಟ್ ರನ್ ರೇಟ್ ಕೂಡ ಗಣನೆಗೆ ಬರುತ್ತದೆ. ಹೀಗಾಗಿ ಆರ್ಸಿಬಿ ಮುಂದಿನ ಪಂದ್ಯಗಳ ಮೂಲಕ ನೆಟ್ ರನ್ ರೇಟ್ ಹೆಚ್ಚಿಸಿಕೊಳ್ಳುವತ್ತ ಕೂಡ ಗಮನಹರಿಸಬೇಕಾಗುತ್ತದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಕೊನೆಯ ಮೂರು ಲೀಗ್ ಹಂತದ ಪಂದ್ಯಗಳಲ್ಲಿ ಒಂದು ಜಯ ಮಾತ್ರ ಸಾಧಿಸಿದರೆ, ಪ್ಲೇಆಫ್ಗೆ ಅರ್ಹತೆ ಪಡೆಯಲು ಇತರೆ ತಂಡಗಳ ಫಲಿತಾಂಶಗಳನ್ನು ಅವಲಂಭಿಸಬೇಕಾಗುತ್ತದೆ. ಅದರಲ್ಲೂ ಮುಂಬೈ ಇಂಡಿಯನ್ಸ್ ವಿರುದ್ಧದ ಕೊನೆಯ ಲೀಗ್ ಪಂದ್ಯವು ಆರ್ಸಿಬಿ ಪಾಲಿಗೆ ನಿರ್ಣಾಯಕವಾಗಲಿದೆ.

ಇನ್ನು ಆರ್ಸಿಬಿ ತಂಡವು ಮುಂದಿನ ಮೂರು ಮ್ಯಾಚ್ಗಳಲ್ಲೂ ಸೋತರೆ ವುಮೆನ್ಸ್ ಪ್ರೀಮಿಯರ್ ಲೀಗ್ನಿಂದ ಹೊರಬೀಳಲಿದೆ. ಏಕೆಂದರೆ ಆರ್ಸಿಬಿ ವಿರುದ್ಧ ಗೆಲ್ಲುವ ಡೆಲ್ಲಿ ಕ್ಯಾಪಿಟಲ್ಸ್ 10 ಅಂಕಗಳನ್ನು, ಮುಂಬೈ ಇಂಡಿಯನ್ಸ್ 8 ಅಂಕಗಳನ್ನು ಹಾಗೂ ಯುಪಿ ವಾರಿಯರ್ಸ್ 6 ಅಂಕಗಳನ್ನು ಹೊಂದಲಿದೆ. ಇತ್ತ ಆರ್ಸಿಬಿ ತಂಡದ ಅಂಕವು 4 ರಲ್ಲೇ ಉಳಿಯಲಿದೆ.

ಹೀಗಾಗಿ ಈ ಬಾರಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್-3 ರ ಪ್ಲೇಆಫ್ಗೆ ನೇರವಾಗಿ ಎಂಟ್ರಿ ಕೊಡಬೇಕಿದ್ದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂದಿನ ಮೂರು ಪಂದ್ಯಗಳಲ್ಲೂ ಜಯ ಸಾಧಿಸಬೇಕು. ಅದರಲ್ಲೂ ಎಲ್ಲಾ ಪಂದ್ಯಗಳಲ್ಲೂ ನೆಟ್ ರನ್ ರೇಟ್ ಹೆಚ್ಚಿಸಿಕೊಳ್ಳುವತ್ತ ಗಮನಹರಿಸಬೇಕಿರುವುದು ಅನಿವಾರ್ಯ.



















