WPL ಗಿಂತಲೂ ಕಡಿಮೆ ಪಾಕಿಸ್ತಾನ್ ಸೂಪರ್ ಲೀಗ್ನ ಬಹುಮಾನ ಮೊತ್ತ..!
TV9 Web | Updated By: ಝಾಹಿರ್ ಯೂಸುಫ್
Updated on:
Mar 19, 2024 | 9:53 AM
IPL 2024 - PSL 2024: ಇಂಡಿಯನ್ ಪ್ರೀಮಿಯರ್ ಲೀಗ್ಗೆ (ಐಪಿಎಲ್) ಪರ್ಯಾಯವಾಗಿ ಪಾಕ್ನಲ್ಲಿ ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್ಎಲ್) ಅನ್ನು ಶುರು ಮಾಡಲಾಗಿತ್ತು. ಆದರೆ 2008 ರಲ್ಲಿ ಆರಂಭವಾದ ಐಪಿಎಲ್ ಬಹುಮಾನ ಮೊತ್ತ 20 ಕೋಟಿ ರೂ,ಗೆ ತಲುಪಿದರೆ, ಪಿಎಸ್ಎಲ್ ಪ್ರೈಸ್ ಮನಿ ಇನ್ನೂ ಕೂಡ 5 ಕೋಟಿ ರೂ. ದಾಟಿಲ್ಲ ಎಂಬುದೇ ವಿಶೇಷ.
1 / 6
ಒಂದೆಡೆ ವುಮೆನ್ಸ್ ಪ್ರೀಮಿಯರ್ ಲೀಗ್ (WPL 2024) ಮುಕ್ತಾಯವಾಗಿದೆ. ಮತ್ತೊಂದೆಡೆ ಪಾಕಿಸ್ತಾನ್ ಸೂಪರ್ ಲೀಗ್ಗೆ (PSL 2024) ತೆರೆಬಿದ್ದಿದೆ. ಇತ್ತ ಭಾರತದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕಿರೀಟ ಮುಡಿಗೇರಿಸಿಕೊಂಡರೆ, ಅತ್ತ ಪಾಕಿಸ್ತಾನದಲ್ಲಿ ಇಸ್ಲಾಮಾಬಾದ್ ಯುನೈಟೆಡ್ (IU) ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ.
2 / 6
ಇದರ ಬೆನ್ನಲ್ಲೇ ಉಭಯ ಲೀಗ್ಗಳ ಬಹುಮಾನ ಮೊತ್ತ ಕೂಡ ಚರ್ಚೆಗೆ ಕಾರಣವಾಗಿದೆ. ಏಕೆಂದರೆ ಪಾಕಿಸ್ತಾನ್ ಸೂಪರ್ ಲೀಗ್ಗಿಂತಲೂ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಅಧಿಕ ಬಹುಮಾನ ಮೊತ್ತವನ್ನು ಪಾವತಿಸಲಾಗುತ್ತಿದೆ.
3 / 6
ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಪಾಕಿಸ್ತಾನ್ ಸೂಪರ್ ಲೀಗ್ ಶುರುವಾಗಿ 9 ವರ್ಷಗಳೇ ಕಳೆದಿವೆ. ಇದಾಗ್ಯೂ ಪಿಎಸ್ಎಲ್ನ ಬಹುಮಾನ ಮೊತ್ತ ಇನ್ನೂ ಕೂಡ 9 ಕೋಟಿಯ ಅಸುಪಾಸಿಗೂ ತಲುಪಿಲ್ಲ. ಆದರೆ ಕೇವಲ 2 ಸೀಸನ್ ಪೂರೈಸಿರುವ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಪಿಎಸ್ಎಲ್ಗಿಂತಲೂ ಹೆಚ್ಚಿನ ಬಹುಮಾನ ಮೊತ್ತ ನೀಡಲಾಗುತ್ತಿದೆ.
4 / 6
ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್-2 ರ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 8 ವಿಕೆಟ್ಗಳ ಜಯ ಸಾಧಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಡೆದಿರುವ ಬಹುಮಾನ ಮೊತ್ತ ಬರೋಬ್ಬರಿ 6 ಕೋಟಿ ರೂ. ಇನ್ನು ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡವು 3 ಕೋಟಿ ರೂ. ಪಡೆದುಕೊಂಡಿದೆ.
5 / 6
ಪಾಕಿಸ್ತಾನ್ ಸೂಪರ್ ಲೀಗ್ ಸೀಸನ್-9 ರ ಫೈನಲ್ನಲ್ಲಿ ಮುಲ್ತಾನ್ ಸುಲ್ತಾನ್ಸ್ ವಿರುದ್ಧ ಇಸ್ಲಾಮಾಬಾದ್ ಯುನೈಟೆಡ್ ತಂಡವು 2 ವಿಕೆಟ್ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿರುವ ಇಸ್ಲಾಮಾಬಾದ್ ಯುನೈಟೆಡ್ ತಂಡಕ್ಕೆ ಸಿಕ್ಕಿರುವ ಬಹುಮಾನ ಮೊತ್ತ 4.15 ಕೋಟಿ ರೂ. ಹಾಗೆಯೇ ರನ್ನರ್ ಅಪ್ ಮುಲ್ತಾನ್ ಸುಲ್ತಾನ್ಸ್ ತಂಡಕ್ಕೆ ಕೇವಲ 1.6 ಕೋಟಿ ರೂ. ನೀಡಲಾಗಿದೆ.
6 / 6
ಅಂದರೆ ವುಮೆನ್ಸ್ ಪ್ರೀಮಿಯರ್ ಲೀಗ್ಗೆ ಹೋಲಿಸಿದರೆ ಪಾಕಿಸ್ತಾನ್ ಸೂಪರ್ ಲೀಗ್ ಬಹುಮಾನ ಮೊತ್ತ 1.85 ಕೋಟಿ ರೂ. ಕಡಿಮೆ ಇದೆ. ಇನ್ನು ಐಪಿಎಲ್ಗೆ ಹೋಲಿಸುವುದೇ ಬೇಡ, ಏಕೆಂದರೆ ಇಂಡಿಯನ್ ಪ್ರೀಮಿಯರ್ ಲೀಗ್ ಬಹುಮಾನ ಮೊತ್ತ ಬರೋಬ್ಬರಿ 20 ಕೋಟಿ ರೂ.