ವಾಸ್ತವವಾಗಿ ಭಾರತ ಈ ಟೆಸ್ಟ್ ವಿಶ್ವಕಪ್ನ ಮೊದಲ ಆವೃತ್ತಿಯಲ್ಲೂ ಫೈನಲ್ ಆಡಿತ್ತು. ಆದರೆ ಆ ಪಂದ್ಯದಲ್ಲಿ ಕಿವೀಸ್ ವಿರುದ್ಧ ಸೋತು, ಖಾಲಿ ಕೈಯಲ್ಲಿ ತವರಿಗೆ ಮರಳಿತ್ತು. ಆ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕತ್ವವಹಿಸಿಕೊಂಡಿದ್ದ ವಿರಾಟ್, ಮೊದಲ ಇನ್ನಿಂಗ್ಸ್‌ನಲ್ಲಿ 44 ರನ್ ಬಾರಿಸಿದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 13 ರನ್‌ಗಳಿಗೆ ಸುಸ್ತಾಗಿದ್ದರು. ಕೊಹ್ಲಿಯ ಬ್ಯಾಟಿಂಗ್ ಕೂಡ ಭಾರತದ ಸೋಲಿಗೆ ಬಹುದೊಡ್ಡ ಕಾರಣವಾಗಿತ್ತು. ಇಂತಹ ಸಂದರ್ಭದಲ್ಲಿ ತಮ್ಮ ಹಿಂದಿನ ತಪ್ಪನ್ನು ಸರಿಪಡಿಸಿಕೊಂಡು ಆಸ್ಟ್ರೇಲಿಯಾ ವಿರುದ್ಧ ದೊಡ್ಡ ಇನಿಂಗ್ಸ್ ಆಡುವ ಮೂಲಕ ಭಾರತಕ್ಕೆ ಐತಿಹಾಸಿಕ ಜಯ ತಂದುಕೊಡುವ ಪ್ರಯತ್ನ ಕೊಹ್ಲಿಯದ್ದಾಗಿದೆ.