- Kannada News Photo gallery Cristiano Ronaldo becomes the first person to have 500 million followers on instagram
ಫುಟ್ಬಾಲ್ ದೈತ್ಯ ರೊನಾಲ್ಡೊ ಹಿಂದೆ ಬಿದ್ದ 50 ಕೋಟಿ ಜನ..! ಕಿಂಗ್ ಕೊಹ್ಲಿ ಕೂಡ ಯಾರಿಗೂ ಕಮ್ಮಿ ಇಲ್ಲ
Cristiano Ronaldo: ರೊನಾಲ್ಡೊಗೆ ಈಗ ಇನ್‌ಸ್ಟಾಗ್ರಾಮ್‌ನಲ್ಲಿ 500 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಇಷ್ಟು ಅನುಯಾಯಿಗಳನ್ನು ಹೊಂದಿರುವ ವಿಶ್ವದ ಏಕೈಕ ವ್ಯಕ್ತಿ ರೊನಾಲ್ಡೊ.
Updated on:Nov 22, 2022 | 11:11 AM

ಪೋರ್ಚುಗಲ್‌ನ ಸೂಪರ್ ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಆಟಕ್ಕೆ ಮನಸೋಲದವರಿಲ್ಲ. ಮೈದಾನದಲ್ಲಿ ರೊನಾಲ್ಡೊ ಆಟಕ್ಕೆ ಎಂತಹ ಘಟಾನುಘಟಿ ತಂಡಗಳೇ ನೆಲಕ್ಕಚ್ಚಿವೆ. ಫುಟ್ಬಾಲ್ ಜಗತ್ತಿನಲ್ಲಿ ರೊನಾಲ್ಡೊ ಗಳಿಸಿರುವ ಅಪಾರ ಖ್ಯಾತಿಯಿಂದಲೇ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಫಿಫಾ ವಿಶ್ವಕಪ್‌ನಲ್ಲಿ ತನ್ನ ಕಾಲ್ಚೆಳಕ ತೋರಲು ಸಿದ್ಧತೆ ಮಾಡಿಕೊಳ್ಳುತ್ತಿರುವ ರೊನಾಲ್ಡೊ ಸೋಶಿಯಲ್ ಮೀಡಿಯಾದಲ್ಲಿ ಹೊಸದೊಂದು ದಾಖಲೆ ಬರೆದಿದ್ದಾರೆ.

ರೊನಾಲ್ಡೊಗೆ ಈಗ ಇನ್‌ಸ್ಟಾಗ್ರಾಮ್‌ನಲ್ಲಿ 500 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಇಷ್ಟು ಅನುಯಾಯಿಗಳನ್ನು ಹೊಂದಿರುವ ವಿಶ್ವದ ಏಕೈಕ ವ್ಯಕ್ತಿ ರೊನಾಲ್ಡೊ. ಆದಾಗ್ಯೂ ರೊನಾಲ್ಡೊ ಮಾತ್ರ ಕೇವಲ 523 ಜನರನ್ನು ಫಾಲೋ ಮಾಡುತ್ತಿದ್ದಾರೆ. ಹಾಗೆಯೇ ಟ್ವಿಟರ್‌ನಲ್ಲಿ ರೊನಾಲ್ಡೊಗೆ 105 ಮಿಲಿಯನ್ ಅನುಯಾಯಿಗಳಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿರುವ ಆಟಗಾರರ ಪಟ್ಟಿಯಲ್ಲಿ ರೊನಾಲ್ಡೊ ಅಕ್ಕಪಕ್ಕ ಮತ್ತ್ಯಾವ ಆಟಗಾರನೂ ಇಲ್ಲ. ರೊನಾಲ್ಡೊ ಹೊರತುಪಡಿಸಿ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಇದ್ದು, ಅವರು 376 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.

ಈ ಇಬ್ಬರನ್ನು ಬಿಟ್ಟರೆ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಕೀರ್ತಿ ಕಿಂಗ್ ಕೊಹ್ಲಿಗೆ ಸಲ್ಲುತ್ತದೆ. ರೊನಾಲ್ಡೊ ಮತ್ತು ಮೆಸ್ಸಿ ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಮೂರನೇ ಆಟಗಾರ ನಮ್ಮ ವಿರಾಟ್. ಇನ್‌ಸ್ಟಾಗ್ರಾಮ್‌ನಲ್ಲಿ ಕೊಹ್ಲಿ 224 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

ರೊನಾಲ್ಡೊ ಪ್ರಸ್ತುತ ಫಿಫಾ ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಅವರ ರಾಷ್ಟ್ರೀಯ ತಂಡ ಪೋರ್ಚುಗಲ್ ನವೆಂಬರ್ 24 ರಂದು ಗ್ರೂಪ್-ಎಚ್‌ನಲ್ಲಿ ಘಾನಾ ವಿರುದ್ಧ ಪಂದ್ಯವನ್ನು ಆಡಬೇಕಾಗಿದೆ.
Published On - 11:09 am, Tue, 22 November 22
