Kannada News Photo gallery Davanagere Jagalur Congress MLA B Devendrappa special story from peon to MLA life journey
ಶಾಲೆಯಲ್ಲಿ ಕಸ ಗುಡಿಸುತ್ತಾ ಜವಾನಗಿರಿ ಮಾಡಿಕೊಂಡಿದ್ದ ದೇವೇಂದ್ರಪ್ಪ ಶಾಸಕರಾಗಿ ಆಯ್ಕೆಯಾದರು! ಆದರೆ ನಿನ್ನೆಯೂ ಶಾಲೆಗೆ ಹೋಗಿ ಕಸಗುಡಿಸಿ ಬಂದರು!
ಅಂದು ಆತನ ಕೆಲ್ಸವೇ ಅದಾಗಿತ್ತು. ದಿನಾ ಬೆಳಗಾದ್ರೆ ಶಾಲೆಯ (School) ಕಸ ಗುಡಿಸುವುದು. ನೀರು ತುಂಬುವುದು. ಶಾಲೆ ಆರಂಭವಾಗುತ್ತಿದ್ದಂತೆ ಗಂಟೆ ಬಾರಿಸುವುದು. ಹೀಗೆ ಮೂರು ದಶಕಗಳ ಕಾಲ ಆತ ನಿರಂತರ ಜವಾನಗಿರಿ ಮಾಡಿದ್ದ. ಇಂತಹ ಓರ್ವ ವ್ಯಕ್ತಿ ಈಗ ಅಷ್ಟು ದೊಡ್ಡ ಸ್ಥಾನಕ್ಕೆ ಹೋಗುತ್ತಾನೆ ಅಂತಾ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಆದ್ರೆ ಆತ ಮಾತ್ರ ಇಂದು ಎಷ್ಟೇ ದೊಡ್ಡ ಸ್ಥಾನಕ್ಕೆ ಏರಿದ್ದರೂ ಸಹ ತನಗೆ ಅನ್ನ ಹಾಕಿದ ಸಂಸ್ಥೆಯನ್ನ ಮಾತ್ರ ಮರೆತಿಲ್ಲ. ನಿನ್ನೆ ಗುರುವಾರ ರಾಜ್ಯಾದ್ಯಂತ ಬೆಳಿಗ್ಗೆ ಶಾಲೆಗಳು ಪುನರಾರಂಭವಾದಾಗ ಆತ ಸಹ ಶಾಲೆಗೆ ಬಂದು ಕಸಗುಡಿಸಿ ಗುರುವೃಂದಕ್ಕೆ ನಮಸ್ಕರಿಸಿ, ಗಂಟೆ ಬಾರಿಸಿದಾಗ ಬಹುತೇಕರು ಭಾವುಕರಾಗಿದ್ದರು! ಇಲ್ಲಿದೆ ನೋಡಿ ಜವಾನಗಿರಿಯಿಂದ ವಿಧಾನ ಸಭೆಗೆ ಶಾಸಕ ದೇವೇಂದ್ರಪ್ಪ ಸ್ಟೋರಿ (Jagalur Congress MLA B Devendrappa).