ಬಣ್ಣ ಬಣ್ಣದ ಬಟ್ಟೆ ತೊಟ್ಟು ಕೂಲಿಂಗ್ ಗ್ಲಾಸ್ ಧರಿಸಿ ಭರ್ಜರಿ ಸ್ಟೆಪ್ಸ್ ಹಾಕಿದ ಹುಡುಗಿಯರು - ಇದು ಬೆಣ್ಣೆ ನಗರಿ ಹುಡುಗಿಯರ ಕಾರ್ನಿವಲ್ ಡೇ. ದಿನನಿತ್ಯ ಸಮವಸ್ತ್ರ ಧರಿಸಿ ಕಾಲೇಜಿಗೆ ಆಗಮಿಸಿ, ಉಪಾನ್ಯಾಸಕರಿಂದ ಪಾಠ ಪ್ರವಚನ ಕೇಳ್ತಿದ್ದ ಕಾಲೇಜಿನ ಹೆಣ್ ಹೈಕ್ಳಿಂದು ಬಣ್ಣ ಬಣ್ಣದ ಬಟ್ಟೆ ತೊಟ್ಟು ಕಾಲೇಜಿನಲ್ಲಿ ಭರ್ಜರಿ ಸ್ಟೆಪ್ಸ್ ಹಾಕಿದ್ರು, ಇನ್ನು ಕೆಲವರು ಕೂಲಿಂಗ್ ಗ್ಲಾಸ್ ಧರಿಸಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿ, ವಿವಿಧ ಸಿನಿಮಾ ಹಾಡುಗಳಿಗೆ ಗುಂಪು ಗುಂಪಾಗಿ ಭರ್ಜರಿ ಸ್ಟೆಪ್ ಹಾಕುವ ಮೂಲಕ ನೆರೆದಿದ್ದ ಗಂಡ್ ಹೈಕ್ಳುಗಳನ್ನು ರಂಜಿಸಿ ವಿಭಿನ್ನವಾಗಿ ಕಾರ್ನಿವಲ್ ಡೇ (food carnival ) ಆಚರಿಸುವ ಮೂಲಕ ಸಖತ್ ಎಂಜಾಯ್ ಮಾಡಿದ್ರು. ಇಲ್ಲಿದೆ ನೋಡಿ ಫುಡ್ ಡಾನ್ಸ್ ಕಮಾಲ್ ಸ್ಟೋರಿ (Davan College Davangere).
ಒಟ್ಟಾರೆ ಕಾರ್ಯಕ್ರಮವನ್ನು ಪ್ರತಿ ಎರಡು ವರ್ಷಕ್ಕೊಮ್ಮೆ ಕಾಲೇಜಿನ ವತಿಯಿಂದ ಹಮ್ಮಿಕೊಳ್ಳುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು, ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದ್ರು, ಇದಲ್ಲದೆ ಪೋಷಕರು ಆಗಮಿಸಿ ಹಣ ಸಂದಾಯ ಮಾಡಿ ತಮಗಿಷ್ಟವಾದ ಖಾದ್ಯಗಳನ್ನು ಸವಿದ್ರು, ಅದೇನೆ ಆಗಲಿ ಹುಡುಗರ ಬದಲು ಹುಡಿಯರೇ ಹೆಚ್ಚು ಕುಣಿದಿದ್ದು ವಿಶೇಷವಾಗಿತ್ತು.
ಇದರಿಂದ ಅವರಿಗೆ ಬಿಸೆನೆಸ್ ಬಗ್ಗೆ ಉಪಾಯಗಳು ಬರಲಿವೆ. ಅದ್ದರಿಂದ ಈ ರೀತಿಯ ಫುಡ್ ಫೆಸ್ಟ್ ಕೂಡ ಮಾಡಿದ್ದೇವೆ. ಕಾರ್ಯಕ್ರಮದಲ್ಲಿ 4,000 ಜನ ಆಗಮಿಸಿದ್ದು, ಟಿಕೆಟ್ ಪಡೆದು ವಿವಿಧ ಖಾದ್ಯಗಳನ್ನು ಸವಿದರು ಎಂದು ಪ್ರಿನ್ಸಿಪಾಲ್ ಅನಿತಾ ಅಭಿಪ್ರಾಯ ಪಟ್ಟರು.
ಇನ್ನು ಇದಕ್ಕೆ ಪ್ರತಿಕ್ರಿಯಿಸಿದ ಪ್ರಾಂಶುಪಾಲರಾದ ಅನಿತಾ ರವರು ಈ ಕಾರ್ಯಕ್ರಮವನ್ನು 2007 ರಿಂದ ಆಚರಿಸಲಾಗುತ್ತಿದೆ. ಎರಡು ವರ್ಷಕ್ಕೊಮ್ಮೆ ಆಚರಿಸಲಾಗುವ ಕಾರ್ಯಕ್ರಮ ಕಳೆದ 2018 ರಲ್ಲಿ ಆಚರಿಸಿದ್ವಿ. ಈ ಕಾರ್ಯಕ್ರಮದಲ್ಲಿ 14 ಸ್ಟಾಲ್ ಗಳನ್ನು ಮಾಡಿ ವಿದ್ಯಾರ್ಥಿಗಳು ಮನೆಯಿಂದ ಮಾಡಿಕೊಂಡ ಬಂದಿದ್ದ ಅಡುಗೆಯನ್ನು ಸ್ಟಾಲ್ ನಲ್ಲಿ ಇರಿಸಿ ಅದಕ್ಕೆ ಇಂತಿಷ್ಟು ಟಿಕೆಟ್ ಎಂದು ನಿಗದಿಪಡಿಸಿ ಬಿಸೆನೆಸ್ ಮಾಡಿದರು.
ಬಾಪೂಜಿ ಸಮುದಾಯ ಭವನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದರಿಂದ ಪೋಷಕರು ಕೂಡ ತಮ್ಮ ಮಕ್ಕಳ ನೃತ್ಯಗಳನ್ನು ಕಣ್ತುಂಬಿಕೊಳ್ಳಲು ದಾಂಗುಡಿ ಇಟ್ಟಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿದ್ಯಾರ್ಥಿನಿಯರು ಒಂದು ತಿಂಗಳಿನಿಂದ ಸಿದ್ಧತೆ ನಡೆಸಿ ತಮಗೆ ಇಷ್ಟವಾದ ಉಡುಗೆ ತೊಟ್ಟು ಭರ್ಜರಿ ಎಂಜಾಯ್ ಮಾಡಿದ್ರು. ವಿವಿಧ ತೊಡುಗೆಗಳನ್ನು ಧರಿಸಿ ಆಗಮಿಸಿದ್ದ ವಿದ್ಯಾರ್ಥಿನಿಯರು ಸೆಲ್ಫಿಗೆ ಫೋಸ್ ನೀಡಿದ್ರು.
ಬಾಪೂಜಿ ಸಮುದಾಯ ಭವನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದರಿಂದ ಪೋಷಕರು ಕೂಡ ತಮ್ಮ ಮಕ್ಕಳ ನೃತ್ಯಗಳನ್ನು ಕಣ್ತುಂಬಿಕೊಳ್ಳಲು ದಾಂಗುಡಿ ಇಟ್ಟಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿದ್ಯಾರ್ಥಿನಿಯರು ಒಂದು ತಿಂಗಳಿನಿಂದ ಸಿದ್ಧತೆ ನಡೆಸಿ ತಮಗೆ ಇಷ್ಟವಾದ ಉಡುಗೆ ತೊಟ್ಟು ಭರ್ಜರಿ ಎಂಜಾಯ್ ಮಾಡಿದ್ರು. ವಿವಿಧ ತೊಡುಗೆಗಳನ್ನು ಧರಿಸಿ ಆಗಮಿಸಿದ್ದ ವಿದ್ಯಾರ್ಥಿನಿಯರು ಸೆಲ್ಫಿಗೆ ಫೋಸ್ ನೀಡಿದ್ರು.
ಕಾರ್ನಿವಲ್ ಡೇಯಲ್ಲಿ ರಾರಾ ರಕ್ಕಮ್ಮ, ನಿಂಬೆಹಣ್ಣಿನಂತ ಹುಡುಗಿ ಬಂದ್ಳು ನೋಡು, ಬತ್ತಮೀಜ್ ದಿಲ್, ಅ ಅಂಟೆ ಅಹಾ ಪುರ, ಗಂಗ್ನಮ್ ಸ್ಟಾರ್, ದೇದೇ ಚುಮ್ಮಾ, ಸಂತೋಷಕ್ಕೆ ಹಾಡು ಸಂತೋಷಕ್ಕೆ, ಹವಾ ಹವಾ... ಹೀಗೆ ನಾನಾ ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆಯ ಹಾಡುಗಳಿಗೆ ಹುಚ್ಚೆದ್ದು ಕುಣಿದರು. ಇದೆ ವೇಳೆ ವಿದ್ಯಾರ್ಥಿನಿ ರಾಧಾ ಮಾತನಾಡಿ ಭಾನುವಾರ ಕಾರ್ನಿವಲ್ ಫೆಸ್ಟ್ ಆಚರಿಸಿದ್ದೇವೆ. ಇದಕ್ಕೆ ನಮ್ಮ ಕಾಲೇಜಿನ ಸಿಬ್ಬಂದಿ ಸಹಕಾರ ಅಪಾರ, ಸಾಕಷ್ಟು ಹಾಡುಗಳಿಗೆ ಡಾನ್ಸ್ ಮಾಡಿದ್ದೇವೆ. ಡಾನ್ಸ್ ಮಾಡಲು ಕೊರಿಯಾಗ್ರಫರ್ ಜೊತೆ ಎರಡು ತಿಂಗಳಿಂದ ಅಭ್ಯಾಸ ಮಾಡಿದ್ವೀ. ಇಂದು ತಮ್ಮ ಪ್ರತಿಭೆಗಳನ್ನು ಅನಾವರಣ ಮಾಡಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದ್ರು.
ಇನ್ನು ಸಾಂಪ್ರದಾಯಿಕ ಉಡುಗೆಯಲ್ಲಿ ಬಂದಿದ್ದ ಕೆಲ ಹುಡುಗಿಯರು ಮನೆಯಿಂದ ಅಡುಗೆ ಮಾಡಿ ತಂದಿದ್ದ ವಿವಿಧ ಖಾದ್ಯಗಳನ್ನು ಎಲ್ಲರಿಗೂ ಉಣಬಡಿಸಿದ್ರು. ಒಬ್ಬ ವಿದ್ಯಾರ್ಥಿನಿ ಸ್ನೇಹಿತೆಯರ ಜೊತೆಗೂಡಿ ಸೆಲ್ಫಿ ತೆಗೆದುಕೊಂಡರೆ ಮತ್ತೋರ್ವ ವಿದ್ಯಾರ್ಥಿನಿ ಸ್ನೇಹಿತೆಯರ ಜೊತೆಗೂಡಿ ಹಾಡಿಗೆ ಹೆಜ್ಜೆ ಹಾಕುತ್ತ ವಿಡಿಯೊ ಮಾಡಿಕೊಳ್ಳುತ್ತಿದ್ದರು. (ವರದಿ: ಬಸವರಾಜ್ ದೊಡ್ಮನಿ ಟಿವಿ9 ದಾವಣಗೆರೆ)
ದಾವಣಗೆರೆ ನಗರದಲ್ಲಿರುವ ದವನ್ ಕಾಲೇಜಿನ (Davan College Davangere) ವತಿಯಿಂದ ಬಾಪೂಜಿ ಸಮುದಾಯ ಭವರದಲ್ಲಿಂದು ಕಾರ್ನಿವಲ್ ಹಬ್ಬವನ್ನು ಆಚರಿಸಲಾಯಿತು, ದಿನ ನಿತ್ಯ ಸಮವಸ್ತ್ರ ಧರಿಸಿ ಕಾಲೇಜಿಗೆ ಆಗಮಿಸಿ ಪಾಠ ಕೇಳುತ್ತಿದ್ದ ವಿದ್ಯಾರ್ಥಿನಿಯರು ಭಾನುವಾರ ಕಲರ್ ಕಲರ್ ಬಟ್ಟೆ ತೊಟ್ಟು ಕೂಲಿಂಗ್ ಗ್ಲಾಸ್ ಧರಿಸಿ ಹಿಂದಿ ಹಾಗೂ ಕನ್ನಡ ಸಿನಿಮಾ ಹಾಡುಗಳಿಗೆ ಹೆಣ್ ಹೈಕ್ಳು ಸಖತ್ ಹೆಜ್ಜೆ ಹಾಕುವ ಮೂಲಕ ಎಂಜಾಯ್ ಮಾಡಿದ್ರು,
Published On - 5:52 pm, Mon, 2 January 23