ನಟಿ ದೀಪಿಕಾ ಪಡುಕೋಣೆ ಅವರು ‘ಪಠಾಣ್’ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಅವರ ಅಭಿಮಾನಿಗಳ ವಲಯದಲ್ಲಿ ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ.
‘ಪಠಾಣ್’ ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅವರು ಜೋಡಿ ಆಗಿದ್ದಾರೆ. ಅವರಿಬ್ಬರು ಒಟ್ಟಿಗೆ ನಟಿಸುತ್ತಿರುವ 4ನೇ ಸಿನಿಮಾ ಇದು. ಆ ಕಾರಣದಿಂದಲೂ ಹೈಪ್ ಸೃಷ್ಟಿ ಆಗಿದೆ.
‘ಪಠಾಣ್’ ಸಿನಿಮಾದ ಮೊದಲ ಹಾಡು ‘ಬೇಷರಂ ರಂಗ್..’ ಬಿಡುಗಡೆ ಆಗಿದೆ. ಈ ಗೀತೆಯನ್ನು ಗ್ಲಾಮರಸ್ ಆಗಿ ಚಿತ್ರಿಸಲಾಗಿದೆ. ದೀಪಿಕಾ ಪಡುಕೋಣೆ ಅವರು ತುಂಬ ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆಗಳ ನಿದ್ದೆ ಕದ್ದಿದ್ದಾರೆ.
ಶಾರುಖ್ ಖಾನ್ ಅವರು ಈ ಚಿತ್ರಕ್ಕಾಗಿ ತುಂಬ ಶ್ರಮಪಟ್ಟಿದ್ದಾರೆ. ದೇಹ ಹುರಿಗೊಳಿಸಿಕೊಂಡು ಸಿಕ್ಸ್ ಪ್ಯಾಕ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅದರ ಝಲಕ್ ಕೂಡ ಈ ಹಾಡಿನಲ್ಲಿ ಹೈಲೈಟ್ ಆಗಿದೆ.
2023ರ ಜನವರಿ 25ರಂದು ‘ಪಠಾಣ್’ ಚಿತ್ರ ರಿಲೀಸ್ ಆಗಲಿದೆ. ಸಿದ್ದಾರ್ಥ್ ಆನಂದ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಜೊತೆ ಜಾನ್ ಅಬ್ರಾಹಂ ಕೂಡ ಪ್ರಮುಖ ಪಾತ್ರವೊಂದನ್ನು ಮಾಡಿದ್ದಾರೆ.
Published On - 3:02 pm, Mon, 12 December 22