
ಕನ್ನಡ ಚಿತ್ರರಂಗದಲ್ಲೂ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ‘ದೇವಿ’ ಸಿನಿಮಾದ ನಿರ್ಮಾಪಕ, ನಾಯಕ ನಟ, ಯುವ ರೈತ ಚೇತನ್ ಗೌಡ ಅವರು ವಿಶೇಷವಾಗಿ ಮತ್ತು ಅರ್ಥಪೂರ್ಣವಾಗಿ ಹಬ್ಬ ಆಚರಿಸಿದ್ದಾರೆ.
ರೈತ ಕುಟುಂಬದಿಂದ ಬಂದಿರುವ ಚೇತನ್ ಅವರು ಪೌರಕಾರ್ಮಿಕ ಮಹಿಳೆಯರಿಗೆ ಸೀರೆ ಹಾಗೂ ಸಿಹಿ ಹಂಚುವ ಮೂಲಕ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ. ಅವರಿಗೆ ‘ದೇವಿ’ ಚಿತ್ರತಂಡದವರು ಸಾಥ್ ನೀಡಿದ್ದಾರೆ.
‘ದೇವಿ’ ಸಿನಿಮಾಗಾಗಿ ದುಡಿಯುತ್ತಿರುವ ಎಲ್ಲರಿಗೂ ಚೇತನ್ ಅವರು ಬೋನಸ್ ಕೊಡುವ ಮೂಲಕ ಚಿತ್ರರಂಗದಲ್ಲಿ ಮಾದರಿಯಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ 2027ರ ಮಾರ್ಚ್ ವೇಳೆಗೆ ‘ದೇವಿ’ ತೆರೆಕಾಣಲಿದೆ.
ನಟ ಚೇತನ್, ನಟಿ ಭವ್ಯಾ ಗೌಡ, ನಿರ್ದೇಶಕ ಪ್ರಕಾಶ್, ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್, ಸಂಭಾಷಣೆಕಾರ ಮಾಸ್ತಿ ಸೇರಿದಂತೆ ಇಡೀ ಚಿತ್ರತಂಡದವರು ಒಟ್ಟಿಗೆ ಸೇರಿ ಈ ಬಾರಿಯ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ.
ಈ ಚಿತ್ರಕ್ಕೆ ಮಂಡ್ಯದಲ್ಲಿ ಮುಂದಿನ ಹಂತದ ಚಿತ್ರೀಕರಣ ಶುರುವಾಗಲಿದೆ. ಅದೇ ಕೊನೆಯ ಹಂತದ ಚಿತ್ರೀಕರಣ ಆಗಿರಲಿದೆ. ‘ಸಿಆರ್ ಪ್ರೊಡಕ್ಷನ್ಸ್’ ಬ್ಯಾನರ್ ಮೂಲಕ ಚೇತನ್ ಅವರೇ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.