- Kannada News Photo gallery Dharwad Agro-weather forecast Severe cold wave conditions in Kittur Karnataka and Kalyana Karnataka weather updates in kannada
ಉತ್ತರ ಕರ್ನಾಟಕದ ಮಂದಿಯನ್ನು ನಡುಗಿಸಲಿರುವ ಚಳಿ; ಥಂಡಿ ಹವಾದ ಬಗ್ಗೆ ಕೃಷಿ ಹವಾಮಾನ ಮುನ್ಸೂಚನೆ
ಮಳೆಯನ್ನು ಹೆಚ್ಚಿಗೆ ಕಂಡಿರದ ಪ್ರದೇಶಗಳಲ್ಲಿ ಇಡೀ ವಾತಾವರಣವೇ ಏರುಪೇರಾಗಿ ಹೋಗಿತ್ತು. ಪರಿಣಾಮ ಆ ಜಿಲ್ಲೆಗಳ ಜನ ಚೇತರಿಸಿಕೊಳ್ಳುತ್ತಿರುವಾಗಲೇ ಚಳಿಗಾಲವೂ ಸಹ ನಾನೇನು ಕಮ್ಮಿ ಇಲ್ಲ ಅಂತಾ ಅದೇ ಜಿಲ್ಲೆಗಳಲ್ಲಿ ಅಬ್ಬರಿಸೋದಕ್ಕೆ ತುದಿಗಾಲ ಮೇಲೆ ನಿಂತಿದೆ.
Updated on:Nov 21, 2022 | 8:03 AM

Dharwad Agro-weather forecast Severe cold wave conditions in Kittur Karnataka and Kalyana Karnataka weather updates in kannada

Dharwad Agro-weather forecast Severe cold wave conditions in Kittur Karnataka and Kalyana Karnataka weather updates in kannada

ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಇಡೀ ಉತ್ತರ ಕರ್ನಾಟಕ ವ್ಯಾಪ್ತಿ ಹೊಂದಿರುವ ಕೃಷಿ ಹವಾಮಾನ ಮುನ್ಸೂಚನಾ ಕೇಂದ್ರವಿದ್ದು, ಈ ಕೇಂದ್ರದ ಈಗಾಗಲೇ ಚಳಿಯ ಲೆಕ್ಕಾಚಾರ ಹಾಕಿದೆ. ಮಳೆಯಂತೆಯೇ ಈ ಸಲ ಚಳಿಯೂ ಕಾಡಲಿದೆ ಎಂದು ಹವಾಮಾನ ತಜ್ಞ ಡಾ. ಆರ್. ಎಚ್. ಪಾಟೀಲ ಅವರು ಮುನ್ಸೂಚನೆ ನೀಡಿದ್ದಾರೆ.

ಸಾಮಾನ್ಯವಾಗಿ ಚಳಿ ಹೆಚ್ಚಾಗುವುದು ಡಿಸೆಂಬರ್ ಮೂರನೇ ವಾರದ ಬಳಿಕ. ಆದರೆ ಈ ಬಾರಿ ಚಳಿ ನವೆಂಬರ್ ಆರಂಭದಲ್ಲಿಯೇ ಶುರುವಾಗಿದೆ. ನವೆಂಬರ್ 24ರಿಂದ ಚಳಿ ಜನರನ್ನು ಹೆಚ್ಚು ನಡುಗಿಸಲಿದೆ. ಅದರ ಮುನ್ಸೂಚನೆ ಎಂಬಂತೆ ಈಗಾಗಲೇ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಬೆಳಗ್ಗೆ 10 ಗಂಟೆಯಾದರೂ ಜನ ಚಳಿಯಿಂದಾಗಿ ಹೊರಗೆ ಬರುತ್ತಿಲ್ಲ.

ಇನ್ನು ಧಾರವಾಡದಲ್ಲಿ ಮಧ್ಯಾಹ್ನದ ಹೊತ್ತಿನಲ್ಲಿಯೂ ಸಹ ಸ್ವೆಟರ್ ಹಾಕಿಕೊಂಡು ಓಡಾಡುತ್ತಿರುವುದನ್ನು ಕಾಣಬಹುದು. ಒಂದೆಡೆ ಬಿಸಿಲಿನ ತಾಪ ಇದ್ದರೂ ಚಳಿಯ ಹೊಡೆತವೂ ಅದಕ್ಕೆ ಸೆಡ್ಡು ಹೊಡೆದು ನಿಂತಿದೆ. ಹೀಗಾಗಿ ಅನೇಕರು ಈಗ ಬೆಳಗಿನ 8ರ ಬಳಿಕ ವಾಕಿಂಗ್ ಮಾಡಲು ರಸ್ತೆಗೆ ಇಳಿಯುವಂತಾಗಿದೆ. ಒಟ್ಟಾರೆಯಾಗಿ ಉತ್ತರ ಕರ್ನಾಟಕದ ಜನ ಈಗ ಚಳಿಯನ್ನು ಎದುರಿಸಲು ಈಗಿನಿಂದಲೇ ಸಜ್ಜಾಗಬೇಕಿದೆ. (ನರಸಿಂಹಮೂರ್ತಿ ಪ್ಯಾಟಿ, ಟಿವಿ9, ಧಾರವಾಡ)
Published On - 8:03 am, Mon, 21 November 22




