Updated on: Jun 27, 2023 | 9:08 AM
ಧಾರವಾಡ-ಬೆಂಗಳೂರಿನ ನಡುವೆ ಇಂದು (ಜೂನ್ 27) ವಂದೇ ಭಾರತ್ ರೈಲು ಸಂಚಾರ ಶುರು ಮಾಡಲಿದೆ. ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಆಗಿ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ.
ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲು ಪ್ರಯಾಣಕ್ಕೆ ಚಾಲನೆ ಹಿನ್ನೆಲೆ ವಂದೇ ಧಾರವಾಡ ಕಲಾವಿದ ಮಂಜುನಾಥ ಹಿರೇಮಠ ರವರು ವಂದೇ ಭಾರತ್ ರೈಲಿನ ಪುಟ್ಟ ಮಾದರಿ ತಯಾರಿಸಿದ್ದಾರೆ.
ಪರಿಸರ ಸ್ನೇಹಿ ಮೂರ್ತಿ ಕಲಾವಿದ ಹಿರೇಮಠ ರವರು ಮೂರು ಇಂಚು ಎತ್ತರ, ಎರಡೂವರೆ ಅಡಿ ಉದ್ಧದ ರೈಲಿನ ಕಲಾಕೃತಿ ರಚಿಸಿದ್ದು ಪುಟ್ಟ ರೈಲಿನ ಜೊತೆಗೆ ಮೋದಿಯ ಪುಟ್ಟ ಪ್ರತಿಮೆ ಸಹ ತಯಾರಿಸಿದ್ದಾರೆ.
ಪ್ರಧಾನಿ ಮೋದಿಯವರೇ ಧಾರವಾಡದಲ್ಲಿ ಹಸಿರು ನಿಶಾನೆ ತೋರಿಸಿ ವಂದೇ ಭಾರತ್ ರೈಲಿಗೆ ಚಾಲನೆ ಕೊಡುವ ಪ್ರತ್ಯಕ್ಷ ಮಾದರಿಯಲ್ಲಿ ಈ ಕಲಾಕೃತಿ ಮೂಡಿ ಬಂದಿದೆ.
ಈ ಕಲಾಕೃತಿಯ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಲಾವಿದ ಹಿರೇಮಠ ಅಭಿನಂದನೆ ಸಲ್ಲಿಸಿದ್ದಾರೆ.
ಥರ್ಮಾಕೋಲ್, ಪ್ಕೈವುಡ್ ತುಂಡು ಸೇರಿ ವಿವಿಧ ತ್ಯಾಜ್ಯಗಳಿಂದ ವಂದೇ ಭಾರತ್ ರೈಲಿನ ಮಾದರಿಯನ್ನು ತಯಾರಿಸಲಾಗಿದೆ.
ಪ್ರಧಾನಿ ಮೋದಿ ವರ್ಚುವಲ್ ಆಗಿ ಚಾಲನೆ ಕೊಟ್ಟರೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಅಧಿಕೃತ ಚಾಲನೆ ನೀಡಲಿದ್ದಾರೆ.