ಪ್ರತಿಷ್ಠಿತ ಕಾನ್ಸ್ ಫಿಲ್ಮ್ ಚಿತ್ರೋತ್ಸವದಲ್ಲಿ ‘ಲಕ್ಷ್ಮೀ ನಿವಾಸ’ ನಟಿ ದಿಶಾ ಮದನ್; 400 ಗಂಟೆಗಳಲ್ಲಿ ತಯಾರಾದ ಸೀರೆ ಉಟ್ಟು ಮಿಂಚಿಂಗ್
ಪ್ರತಿಷ್ಠಿತ ‘ಕಾನ್ಸ್ ಚೀತ್ರೋತ್ಸವ’ ಅದ್ದೂರಿಯಾಗಿ ನಡೆಯುತ್ತಿದೆ. ದೇಶ-ವಿದೇಶಗಳಿಂದ ಸೆಲೆಬ್ರಿಟಿಗಳು ಆಗಮಿಸಿ ಇಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುತ್ತಿದ್ದಾರೆ. ಅದೇ ರೀತಿ ಕನ್ನಡ ಕಿರುತೆರೆಯ ಖ್ಯಾತ ನಟಿ ದಿಶಾ ಮದನ್ ಕೂಡ ಕಾನ್ಸ್ ಸಿನಿಮೋತ್ಸವದಲ್ಲಿ ಮಿಂಚಿದ್ದಾರೆ. ಅವರ ಫೋಟೋಗಳು ವೈರಲ್ ಆಗಿವೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.
Updated on:May 19, 2025 | 8:43 AM

ಕಾನ್ಸ್ ಸಿನಿಮೋತ್ಸವವನ್ನು ಅತ್ಯಂತ ಪ್ರತಿಷ್ಠಿತ ಚಿತ್ರೋತ್ಸವ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಹೆಜ್ಜೆ ಹಾಕಬೇಕು ಎಂಬುದು ಅನೇಕ ನಟಿಯರ ಕನಸು. ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಅನೇಕರು ಗಮನ ಸೆಳೆಯುತ್ತಾರೆ. ಈ ಸಾಲಿಗೆ ಕಿರುತೆರೆ ನಟಿ ದಿಶಾ ಮದನ್ ಸೇರಿದ್ದಾರೆ.

ಕಾನ್ಸ್ ಸಿನಿಮೋತ್ಸವವನ್ನು ಅತ್ಯಂತ ಪ್ರತಿಷ್ಠಿತ ಚಿತ್ರೋತ್ಸವ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಹೆಜ್ಜೆ ಹಾಕಬೇಕು ಎಂಬುದು ಅನೇಕ ನಟಿಯರ ಕನಸು. ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಅನೇಕರು ಗಮನ ಸೆಳೆಯುತ್ತಾರೆ. ಈ ಸಾಲಿಗೆ ಕಿರುತೆರೆ ನಟಿ ದಿಶಾ ಮದನ್ ಸೇರಿದ್ದಾರೆ.

ಮತ್ತೊಂದು ವಿಶೇಷತೆ ಇದೆ. ಅವರು ಧರಿಸಿದ್ದ ಸೀರೆ ಬರೋಬ್ಬರಿ 400 ಗಂಟೆಗಳಲ್ಲಿ ಸಿದ್ಧವಾಗಿದೆ. ಅಂದರೆ ಸರಿ ಸುಮಾರು 16 ದಿನಗಳು ಈ ಸೀರೆ ತಯಾರಿಸಲು ಬೇಕಾಗಿದೆ ಅನ್ನೋದು ವಿಶೇಷ. ಈ ವಿಚಾರ ಕೇಳಿ ಅನೇಕರು ಅಚ್ಚರಿಗೊಂಡಿದ್ದಾರೆ.

ಚೆಟ್ಟಿನಾಡ್ ಬಳಿಯ ಕುಶಲಕರ್ಮಿಗಳು 400 ಗಂಟೆಗಳಿಗೂ ಹೆಚ್ಚು ಕಾಲ ಕೈಯಿಂದ ನೇಯ್ದ ಶುದ್ಧ ಜರಿ ಕಾಂಚಿವರಂ ಸೀರೆ ಇದಾಗಿದೆ. ಇದರಲ್ಲಿ ಅವರು ಮಿಂಚಿ ಗಮನ ಸೆಳೆಯುತ್ತಾ ಇದ್ದಾರೆ. ಅವರಿಗೆ ಎಲ್ಲರೂ ಅಭಿನಂದನೆ ತಿಳಿಸಿದ್ದಾರೆ.

ಕಾನ್ಸ್ ಚಿತ್ರೋತ್ಸವ ಫ್ರಾನ್ಸ್ನಲ್ಲಿ ನಡೆಯುತ್ತದೆ. ಇದು ವಿಶ್ವ ಚಿತ್ರರಂಗಕ್ಕೆ ಪ್ರತಿಷ್ಠಿತ ಸಿನಿಮೋತ್ಸವ. ಬರೋಬ್ಬರಿ 12 ದಿನಗಳ ಕಾಲ ಈ ಉತ್ಸವ ನಡೆಯಲಿದೆ. ಈ ಬಾರಿ ಮೇ 13ರಂದು ಇದು ಆರಂಭ ಆಗಿದೆ. ಇನ್ನೂ ಕೆಲ ದಿನಗಳ ಕಾಲ ಈ ಸಿನಿಮೋತ್ಸವ ನಡೆಯಲಿದೆ.
Published On - 7:35 am, Mon, 19 May 25




