Divya Gowda: ಭವ್ಯಾಗಿಂತ ಫೇಮಸ್ ಆಗಿದ್ದು ಹೇಗೆ? ಸುದೀಪ್ಗೆ ವಿವರಿಸಿದ ದಿವ್ಯಾ
‘ಬಿಗ್ ಬಾಸ್ ಕನ್ನಡ ಸೀಸನ್ 11’ಕ್ಕೆ ಎಂಟ್ರಿ ಕೊಟ್ಟಿದ್ದ ಭವ್ಯಾ ಗೌಡ ಅವರ ಸಹೋದರಿ ದಿವ್ಯಾ ಸಾಕಷ್ಟು ಫೇಮಸ್ ಆದರು. ಅವರಿಗೆ ಒಂದೇ ದಿನದಲ್ಲಿ ಭರ್ಜರಿ ಜನಪ್ರಿಯತೆ ಸಿಕ್ಕಿತು. ಇದಕ್ಕೆ ಕಾರಣ ಯಾರು ಎಂಬುದನ್ನು ಅವರು ವಿವರಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
1 / 5
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಫ್ಯಾಮಿಲಿ ವೀಕ್ ವೇಳೆ ಭವ್ಯಾ ಗೌಡ ಅವರ ಸಹೋದರಿ ದಿವ್ಯಾ ಗೌಡ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದರು. ಅವರು ಸಾಕಷ್ಟು ಗಮನ ಸೆಳೆದರು. ಅವರು ಇಷ್ಟು ಫೇಮಸ್ ಆಗಲು ಕಾರಣ ಆಗಿದ್ದು ಒಂದೇ ಅಂಶವಂತೆ.
2 / 5
ಭವ್ಯಾಗೋಸ್ಕರ ದಿವ್ಯಾ ಅವರು ಬಿಗ್ ಬಾಸ್ ಫಿನಾಲೆಯಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಆ ಬಳಿಕ ಬಿಗ್ ಬಾಸ್ ಫಿನಾಲೆ ವೇದಿಕೆ ಮೇಲೆ ಸುದೀಪ್ ಅವರು ದಿವ್ಯಾ ಜೊತೆ ಮಾತುಕತೆ ನಡೆಸಿದರು. ಆಗ ಕೆಲವು ವಿಚಾರವನ್ನು ಅವರು ಹಂಚಿಕೊಂಡರು.
3 / 5
‘ನಾನು ಇಷ್ಟು ಫೇಮಸ್ ಆಗಲು ರಜತ್ ಅವರೇ ಕಾರಣ. ಭವ್ಯಾಗಿಂತ ನೀವೇ ಚೆನ್ನಾಗಿದ್ದೀರಿ ಎಂದು ಹೇಳಿದರು. ಈ ಕಾರಣಕ್ಕೆ ನಾನು ಸಾಕಷ್ಟು ಫೇಮಸ್ ಆದೆ’ ಎಂದು ದಿವ್ಯಾ ಅವರು ಹೇಳಿಕೊಂಡರು. ಇದನ್ನು ಕೇಳಿ ಭವ್ಯಾಗೆ ಅಚ್ಚರಿ ಆಯಿತು.
4 / 5
ರಜತ್ ಅವರು ಏನೇ ವಿಚಾರ ಇದ್ದರೂ ಓಪನ್ ಆಗಿ ಹೇಳಿಕೊಳ್ಳುತ್ತಾರೆ. ಅದೇ ರೀತಿ ದಿವ್ಯಾ ಬಂದಾಗ ಅವರನ್ನು ಹೊಗಳಿದ್ದರು. ಭವ್ಯಾ ಬದಲು ನಿವೇ ಬಿಗ್ ಬಾಸ್ ಮನೆಗೆ ಬರಬಹುದಿತ್ತಲ್ಲ ಎಂದು ದೊಡ್ಮನೆಯಲ್ಲಿ ಹೇಳಿಕೊಂಡರು.
5 / 5
ಕಿಚ್ಚ ಸುದೀಪ್ ಕೂಡ ಭವ್ಯಾ ಅವರ ಕಾಲೆಳೆದರು. ‘ನಾವು ಭವ್ಯಾಗೋಸ್ಕರ ಡ್ಯಾನ್ಸ್ ಮಾಡಲ್ಲ. ಡ್ಯಾನ್ಸ್ ಮಾಡುವುದರಿಂದ ನಮಗೆ ಒಂದಷ್ಟು ಜನಪ್ರತಿಯತೆ ಸಿಗುತ್ತದೆ ಎಂದು ದಿವ್ಯಾ ಹೇಳಿದ್ದಾರೆ’ ಎಂಬುದಾಗಿ ಸುದೀಪ್ ಭವ್ಯಾಗೆ ವಿವರಿಸಿದರು.