- Kannada News Photo gallery Divya Uruduga shares her Marriage photos fans in shock here is why Entertainment News In Kannada
ಮದುವೆ ಸಂದರ್ಭದ ಫೋಟೋ ಹಂಚಿಕೊಂಡ ದಿವ್ಯಾ ಉರುಡುಗ; ಅರವಿಂದ್ ಎಲ್ಲಿ ಕೇಳ್ಬೇಡಿ
ದಿವ್ಯಾ ಉರುಡುಗ ಅವರು ‘ನಿನಗಾಗಿ’ ಧಾರಾವಾಹಿಯಲ್ಲಿ ರಚನಾ ಹೆಸರಿನ ಪಾತ್ರ ಮಾಡಿದ್ದಾರೆ. ರುತ್ವಿಕ್ ಅವರು ಜೀವ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಇನ್ನು ಕಿಶನ್ ಬೆಳಗಲಿ ಅಶ್ವಿನ್ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಇದು ಧಾರಾವಾಹಿಯ ಫೋಟೋ.
Updated on: Oct 22, 2024 | 9:09 AM

ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ಅವರ ಮಧ್ಯೆ ಪ್ರೀತಿ ಇದೆ. ಬಿಗ್ ಬಾಸ್ನಲ್ಲಿ ಇವರ ಮಧ್ಯೆ ಪ್ರೀತಿ ಹುಟ್ಟಿತು. ಈಗ ದಿವ್ಯಾ ಉರುಡುಗ ಅವರು ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವುಗಳು ‘ನಿನಗಾಗಿ’ ಧಾರಾವಾಹಿಯ ಫೋಟೋಗಳು.

ದಿವ್ಯಾ ಉರುಡುಗ ಅವರು ‘ನಿನಗಾಗಿ’ ಧಾರಾವಾಹಿಯಲ್ಲಿ ರಚನಾ ಹೆಸರಿನ ಪಾತ್ರ ಮಾಡಿದ್ದಾರೆ. ರುತ್ವಿಕ್ ಅವರು ಜೀವ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಇನ್ನು ಕಿಶನ್ ಬೆಳಗಲಿ ಅಶ್ವಿನ್ ಹೆಸರಿನ ಪಾತ್ರ ಮಾಡುತ್ತಿದ್ದಾರೆ.

ರಚನಾ ಹಾಗೂ ಅಶ್ವಿನ್ ಮಧ್ಯೆ ಕುಟುಂಬದವರು ಮದುವೆ ಫಿಕ್ಸ್ ಮಾಡಿದ್ದಾರೆ. ಆದರೆ, ಮದುವೆ ನಡೆಯುವಾಗ ಕಂಕಣ ಹೋಗಿ ಅಗ್ನಿಯಲ್ಲಿ ಬಿದ್ದು ಹೋಗಿದೆ. ಇದರಿಂದ ಮದುವೆ ಅರ್ಧಕ್ಕೆ ನಿಂತಿದೆ. ಇದು ರಚನಾಗೆ ಖುಷಿ ನೀಡಿದೆ.

ರಚನಾ ಹಾಗೂ ಹೀರೋ ಜೀವ ಮಧ್ಯೆ ಮದುವೆ ನಡೆಯಬೇಕಿದೆ. ಈ ಕಾರಣದಿಂದ ರಚನಾ ಹಾಗೂ ಅಶ್ವಿನ್ ವಿವಾಹ ಅರ್ಧಕ್ಕೆ ನಿಂತು ಹೋಗಿದೆ. ಇದು ರಚನಾ ಅವರ ಮನೆಯವರಿಗೆ ಶಾಕಿಂಗ್ ಎನಿಸಿದೆ. ಇದು ಅಪಶಕುನ ಎಂದು ಎಲ್ಲರೂ ಅಂದುಕೊಂಡಿದ್ದಾರೆ.

ಸದ್ಯದ ಮಟ್ಟಿಗೆ ವಿವಾಹ ಮುಂದಕ್ಕೆ ಹೋಗಿದೆ. ಕಿಶನ್ ಹಾಗೂ ದಿವ್ಯಾ ಉರುಡುಗ ಅವರು ಸೋಶಿಯಲ್ ಮೀಡಿಯಾದಲ್ಲಿ ಧಾರಾವಾಹಿಗೆ ಸಂಬಂಧಿಸಿದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ಶಾಕ್ ಆಗಿದ್ದಾರೆ.




