ಪಾರಿವಾಳದ ಗರಿಯನ್ನು ಮನೆಯಲ್ಲಿಟ್ಟರೆ ಏನಾಗುತ್ತೆ ಗೊತ್ತಾ?
ಪಾರಿವಾಳವು ಶಾಂತಿ, ಸಂತೋಷ ಮತ್ತು ಶುದ್ಧತೆಯ ಸಂಕೇತವಾಗಿದೆ. ಶಾಂತಿಯ ಸಂಕೇತವಾಗಿರುವ ಈ ಹಕ್ಕಿಗಳು ಮನೆಗೆ ಬಂದ್ರೆ ಶುಭವೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಹೀಗೆ ಶಾಸ್ತ್ರಗಳಲ್ಲಿ ಕೆಲವು ಘಟನೆಗಳನ್ನು ಮಂಗಳಕರ ಅಥವಾ ಅಶುಭವೆಂದು ಪರಿಗಣಿಸಲಾಗುತ್ತದೆ. ಅದರಲ್ಲಿ ಪಾರಿವಾಳಗಳು ಮನೆಗೆ ಬಂದರೆ ಮಂಗಳಕರ ಎಂದು ಹೇಳಲಾಗುತ್ತದೆ. ಅದೇ ರೀತಿ ಈ ಪಾರಿವಾಳದ ಗರಿಯನ್ನು ಮನೆಯಲ್ಲಿಟ್ಟರೆ ಏನಾಗುತ್ತೆ ಗೊತ್ತಾ? ಈ ಕುರಿತ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ.
Updated on: May 26, 2025 | 6:23 PM

ಮನೆಯಲ್ಲಿಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗಲು ನಮಿಲು ಗರಿಗಳನ್ನು ಇಟ್ಟುಕೊಳ್ಳುವುದು ತುಂಬಾ ಶುಭವೆಂದು ಶಾಸ್ತ್ರಗಳಲ್ಲಿ ಪರಿಗಣಿಸಲಾಗಿದೆ. ಅದೇ ರೀತಿ ಪಾರಿವಾಳದ ಗರಿಯನ್ನು ಸಹ ಮನೆಯಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದಂತೆ. ಹೌದು ಮನೆಯಲ್ಲಿ ಪಾರಿವಾಳದ ಗರಿಯನ್ನು ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಶಾಂತಿ ಮತ್ತು ಸಾಮರಸ್ಯದ ವಾತಾವರಣ ನಿರ್ಮಾಣವಾಗುತ್ತದೆ ಎಂದು ನಂಬಲಾಗಿದೆ.

ಮನೆಯಲ್ಲಿ ಸಂತೋಷ ನೆಲೆಸುತ್ತದೆ: ವಾಸ್ತು ಶಾಸ್ತ್ರದ ಪ್ರಕಾರ, ಬಿದ್ದ ಪಾರಿವಾಳದ ಗರಿಯನ್ನು ಬಿಳಿ ಬಟ್ಟೆಯಲ್ಲಿ ಕಟ್ಟಿ ಮನೆಯಲ್ಲಿ ಇಡಬೇಕು. ಇದರಿಂದ ಮನೆಯಲ್ಲಿ ಸಂತೋಷ ನೆಲೆಸುತ್ತಂತೆ. ಇದರೊಂದಿಗೆ ಲಕ್ಷ್ಮೀದೇವಿಯ ಆಶೀರ್ವಾದವೂ ಲಭಿಸುತ್ತದೆ ಎಂದು ನಂಬಲಾಗಿದೆ.

ಪ್ರಗತಿಯ ಹಾದಿ ತೆರೆದುಕೊಳ್ಳುತ್ತದೆ: ಮನೆಯಲ್ಲಿ ಪಾರಿವಾಳದ ಗರಿಗಳನ್ನು ಇಟ್ಟುಕೊಳ್ಳುವವರ ಮನೆಯಲ್ಲಿ ಸಂಪತ್ತಿನ ಅಧಿದೇವತೆ ನೆಲೆಸುತ್ತಾಳೆ ಎಂದು ನಂಬಲಾಗಿದೆ. ಜೊತೆಗೆ ಲಕ್ಷ್ಮಿ ದೇವಿಯ ಅನುಗ್ರಹದಿಂದ, ಮನೆಯಲ್ಲಿರುವ ಜನರ ಆದಾಯ ಹೆಚ್ಚಾಗುತ್ತದೆ. ಅಲ್ಲದೆ, ಪ್ರತಿಯೊಬ್ಬರೂ ತಮ್ಮ ಕೆಲಸದಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸುತ್ತಾರೆ ಎಂದು ಹೇಳಲಾಗುತ್ತದೆ.

ಸಮಸ್ಯೆಗಳು ದೂರವಾಗುತ್ತವೆ: ಮನೆಯಲ್ಲಿ ಪಾರಿವಾಳದ ಗರಿಯನ್ನು ಇಡುವುದು ಸಂತೋಷ ಮತ್ತು ಶುಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದರಿಂದಾಗಿ, ದೇವತೆಗಳು ಯಾವಾಗಲೂ ಮನೆಯಲ್ಲಿ ನೆಲೆಸುತ್ತಾರೆ ಮತ್ತು ನಕಾರಾತ್ಮಕ ವಿಷಯಗಳು, ಶಕ್ತಿಗಳು ಮನೆಯಿಂದ ದೂರವಿರುತ್ತವೆ. ಅಲ್ಲದೆ ಮನೆಯ ಸಮಸ್ಯೆಗಳು ದೂರವಾಗುತ್ತದೆ ಎಂದು ನಂಬಲಾಗಿದೆ.

ಸಕಾರಾತ್ಮಕ ಶಕ್ತಿ: ನಂಬಿಕೆಗಳ ಪ್ರಕಾರ ಮನೆಯಲ್ಲಿ ಪಾರಿವಾಳದ ಗರಿಯನ್ನು ಇಟ್ಟುಕೊಳ್ಳುವುದರಿಂದ ಮನೆ ತುಂಬಾ ಸಕಾರಾತ್ಮಕ ಶಕ್ತಿ ಹರಡುತ್ತದೆ. ಮತ್ತು ಇದರಿಂದ ಮನೆಯಲ್ಲಿ ಯಾವುದೇ ಜಗಳಗಳು ಮನಸ್ತಾಪಗಳು ಇರುವುದಿಲ್ಲ, ಕುಟುಂಬದ ವಾತಾವರಣವೂ ಆಹ್ಲಾದಕರವಾಗಿರುತ್ತದೆ ಎಂದು ನಂಬಲಾಗಿದೆ.

ಪಾರಿವಾಳದ ಗರಿಯನ್ನು ಎಲ್ಲಿ ಇಡಬೇಕು: ವಾಸ್ತುಶಾಸ್ತ್ರದ ಪ್ರಕಾರ ಪಾರಿವಾಳದ ಗರಿಯನ್ನು ವಾಸದ ಕೋಣೆಯ ದಕ್ಷಿಣ ಮೂಲೆಯಲ್ಲಿ, ಅಡುಗೆ ಕೋಣೆಯ ಉತ್ತರ ಮೂಲೆಯಲ್ಲಿ ಮತ್ತು ಮಲಗುವ ಕೋಣೆಯ ಪೂರ್ವ ಮೂಲೆಯಲ್ಲಿ ಯಾರು ನೋಡದ ಸ್ಥಳದಲ್ಲಿ ಇಟ್ಟರೆ ಒಳ್ಳೆಯದು.




