- Kannada News Photo gallery Easy and effective ways to look more handsome and attractive Kannada News SIU
Mens Fashion Tips : ಯುವಕರೇ ಸ್ಟೈಲಿಶ್ ಆಗಿ ಕಾಣಲು ಬಟ್ಟೆಗಳ ಆಯ್ಕೆ ಹೀಗಿರಲಿ
ಫ್ಯಾಷನ್ ಎನ್ನುವುದು ಕಾಲ ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ. ಅದು ಬಟ್ಟೆ, ಚಪ್ಪಲಿ ಹೀಗೆ ಎಲ್ಲಾ ವಿಚಾರದಲ್ಲಿ ಬದಲಾಗುತ್ತಾ ಹೋಗುತ್ತದೆ. ಹೀಗಾಗಿ ನಾವು ಧರಿಸುವ ಉಡುಪುಗಳು ನಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ. ನೀವೆನಾದರೂ ಕಾನ್ಫಿಡೆಂಟ್ ಆಗಿ ಕಾಣಲು ಬಯಸಿದರೆ ಆಕರ್ಷಕವಾದ ಉಡುಗೆಗಳನ್ನು ಧರಿಸುವುದು ಅಷ್ಟೇ ಮುಖ್ಯ. ಆದರೆ ಈ ಹುಡುಗಿಯರು ಫ್ಯಾಷನ್ ಗೆ ಗಮನ ಹರಿಸುವಷ್ಟು ಹುಡುಗರು ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಹೀಗಾಗಿ ಈ ಹುಡುಗರು ತಮ್ಮ ಡ್ರೆಸ್ಸಿಂಗ್ ಸ್ಟೈಲ್ ನಲ್ಲಿ ಈ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಬಹುದು.
Updated on: Sep 05, 2024 | 2:08 PM

ಬಟ್ಟೆಗಳ ಬಣ್ಣದ ಬಗ್ಗೆ ಗಮನವಿರಲಿ: ಸ್ಟೈಲಿಶ್ ಆಗಿ ಕಾಣಲು ಬಟ್ಟೆಯ ಬಣ್ಣಕ್ಕೆ ವಿಶೇಷ ಗಮನ ಹರಿಸಬೇಕು. ಜೀನ್ಸ್, ಶರ್ಟ್ ಅಥವಾ ಟೀ ಶರ್ಟ್‌ಗಳ ಬಣ್ಣವನ್ನು ಹೊಂದಿಸಿಕೊಳ್ಳಬೇಕು. ಈ ವೇಳೆಯಲ್ಲಿ ಕಾಂಟ್ರಾಸ್ಟ್ ಬಣ್ಣಗಳಿಗೆ ಹೆಚ್ಚು ಆದ್ಯತೆಯನ್ನು ನೀಡಬೇಕು. ನಿಮ್ಮ ಮೈಬಣ್ಣಕ್ಕೆ ಹೊಂದುವಂತಹ ಬಟ್ಟೆಗಳ ಆಯ್ಕೆ ಮಾಡಿಕೊಳ್ಳುವುದುಅಷ್ಟೇ ಅಗತ್ಯ.

ವಿ ನೆಕ್ ಇರುವ ಟೀ ಶರ್ಟ್ ಧರಿಸಿ : ಟೀ ಶರ್ಟ್ ಗಳನ್ನು ಖರೀದಿಸುವಾಗ ಅಥವಾ ಧರಿಸುವಾಗ ವಿ ನೆಕ್ ಡ್ರೆಸ್ ಗಳನ್ನು ಹೆಚ್ಚು ಆಯ್ಕೆ ಮಾಡಿ. ಈ ರೀತಿಯ ವಿನ್ಯಾಸ ಟೀ ಶರ್ಟ್ ಗಳು ಸ್ಲಿಮ್ ಆಗಿ ಕಾಣಲು ಸಹಾಯ ಮಾಡುತ್ತವೆ. ಟಿ-ಶರ್ಟ್ ಉದ್ದವಿದ್ದರೆ ನೀವು ದಪ್ಪವಾಗಿ ಕಾಣಿಸುವ ಸಾಧ್ಯತೆಯೇ ಹೆಚ್ಚು, ಹೀಗಾಗಿ ಈ ಬಗ್ಗೆಯೂ ಗಮನ ಕೊಡುವುದು ಮುಖ್ಯ.

ಫಿಟ್ ಆಗಿರುವ ಬಟ್ಟೆಗಳಿರಲಿ : ದೇಹಕ್ಕೆ ಹೊಂದುವ ಸರಿಯಾದ ಗಾತ್ರದ ಬಟ್ಟೆಗಳನ್ನು ಧರಿಸುವುದು ನಿಮ್ಮ ನೋಟವನ್ನು ಬದಲಾಯಿಸುತ್ತದೆ. ಸಡಿಲವಾದ ಬಟ್ಟೆಯಲ್ಲಿ ದಪ್ಪವಾಗಿ ಕಾಣುವ ಕಾರಣ, ಫಿಟ್ ಆಗಿರುವ ಉಡುಪನ್ನು ಧರಿಸುವ ಮೂಲಕ ಯಂಗ್ ಆಗಿ ಕಾಣಿಸಿಕೊಳ್ಳಬಹುದು.

ಬಟ್ಟೆಗೆ ಹೊಂದುವ ಶೂ ಆಯ್ಕೆಯಿರಲಿ : ನೀವು ಧರಿಸುವ ಉಡುಪಿಗೆ ಸರಿಹೊಂದುವ ಶೂ ಆಯ್ಕೆಯನ್ನು ಮಾಡಿಕೊಳ್ಳಿ. ಇದು ನಿಮ್ಮ ನೋಟವನ್ನು ಬದಲಾಯಿಸಿ ಸುಂದರವಾಗಿ ಕಾಣುವಂತೆ ಮಾಡುತ್ತದೆ. ಆಫೀಸಿಗೆ ಫಾರ್ಮಲ್ ಉಡುಗೆ ಧರಿಸುತ್ತಿದ್ದರೆ ಅದೇ ರೀತಿಯ ಫಾರ್ಮಲ್ ಶೂಗಳತ್ತ ಗಮನ ಕೊಡಿ. ಇಲ್ಲದಿದ್ದರೆ ಸ್ಟೈಲಿಶ್ ಉಡುಗೆಗೆ ವಿವಿಧ ವಿನ್ಯಾಸದ ಸ್ಟೈಲಿಶ್ ಶೂಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಹೇರ್ ಸ್ಟೈಲ್, ಗಡ್ಡವು ನೀಟ್ ಆಗಿರಲಿ : ನೀವು ಸ್ಟೈಲಿಶ್ ಆಗಿ ಕಾಣಲು ಎಷ್ಟೇ ದುಬಾರಿ ಬೆಲೆಯ ಉಡುಗೆ ಧರಿಸಿದರೂ ಕೂಡ ಹೇರ್ ಸ್ಟೈಲ್ ಹಾಗೂ ಗಡ್ಡ ಸರಿಯಾಗಿಲ್ಲದಿದ್ದರೆ ನಿಮ್ಮ ನೋಟವೇ ಹಾಳಾಗುತ್ತದೆ. ಹೀಗಾಗಿ ಟ್ರೆಂಡ್ ಗೆ ತಕ್ಕಂತೆ ಹೇರ್ ಸ್ಟೈಲ್ ಹಾಗೂ ಗಡ್ಡವಿರಲಿ. ಇದರಿಂದ ನೀವು ಉತ್ತಮ ವ್ಯಕ್ತಿತ್ವ ಹಾಗೂ ಆತ್ಮವಿಶ್ವಾಸವನ್ನು ಹೊಂದಲು ಸಾಧ್ಯವಾಗುತ್ತದೆ.




