ಆಲೂಗಡ್ಡೆ ಪ್ರೀಯರಿಗೆ ಶಾಕಿಂಗ್ ನ್ಯೂಸ್! ಜಾಸ್ತಿ ತಿಂದರೆ ಸಮಸ್ಯೆ ತಪ್ಪಿದ್ದಲ್ಲ

Edited By:

Updated on: Mar 27, 2025 | 12:40 PM

ಸಾಮಾನ್ಯವಾಗಿ ಎಲ್ಲಾ ಋತುಗಳಲ್ಲಿ ಲಭ್ಯವಿರುವ ಆಲೂಗಡ್ಡೆಯನ್ನು ಜನರು ಹೆಚ್ಚಾಗಿ ತಿನ್ನುತ್ತಾರೆ. ಅದರಲ್ಲಿಯೂ ಕೆಲವರು ಆಲೂಗಡ್ಡೆಯನ್ನು ಬಹಳ ಇಷ್ಟ ಪಟ್ಟು ತಿನ್ನುತ್ತಾರೆ. ಇದು ಕೇವಲ ನಾಲಿಗೆಗೆ ರುಚಿ ನೀಡುವುದು ಮಾತ್ರವಲ್ಲ, ಪೋಷಕಾಂಶಗಳಿಂದ ಸಮೃದ್ಧವಾಗಿದ್ದು ಆರೋಗ್ಯಕರ ಎಂದು ನಂಬಲಾಗಿದೆ. ಆದರೆ ಆಲೂಗಡ್ಡೆಯನ್ನು ಅತಿಯಾಗಿ ತಿನ್ನುವುದು ಹಲವಾರು ರೀತಿಯಲ್ಲಿ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಇದರಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಬರುತ್ತದೆ ಎಂಬುದನ್ನು ತಿಳಿದುಕೊಳ್ಳಿ.

1 / 5
ಆಲೂಗಡ್ಡೆಯನ್ನು ತರಕಾರಿಗಳ ರಾಜ ಎಂದು ಕರೆಯಲಾಗುತ್ತದೆ. ಏಕೆಂದರೆ ಸಾಮಾನ್ಯವಾಗಿ ಈ ತರಕಾರಿ ಎಲ್ಲಾ ಋತುಗಳಲ್ಲಿ ಲಭ್ಯವಿರುವುದರಿಂದ ಜನರು ಇದನ್ನು ಹೆಚ್ಚಾಗಿ ತಿನ್ನುತ್ತಾರೆ. ಅದರಲ್ಲಿಯೂ ಕೆಲವರು  ಆಲೂಗಡ್ಡೆಯನ್ನು ಬಹಳ ಇಷ್ಟ ಪಟ್ಟು ತಿನ್ನುತ್ತಾರೆ. ಇದು ಕೇವಲ ನಾಲಿಗೆಗೆ ರುಚಿ ನೀಡುವುದು ಮಾತ್ರವಲ್ಲ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು ಆರೋಗ್ಯಕರ ಎಂದು ನಂಬಲಾಗಿದೆ. ಆದರೆ ಆಲೂಗಡ್ಡೆಯನ್ನು ಅತಿಯಾಗಿ ತಿನ್ನುವುದು ಆರೋಗ್ಯದ ಮೇಲೆ ಹಲವಾರು ರೀತಿಯಲ್ಲಿ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ ಎಂದು ಆರೋಗ್ಯ ತಜ್ಞರು  ಹೇಳುತ್ತಾರೆ. ಹಾಗಾದರೆ ಇದರಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಬರುತ್ತದೆ ಎಂಬುದನ್ನು ತಿಳಿದುಕೊಳ್ಳಿ.

2 / 5
ಆಲೂಗಡ್ಡೆ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿವೆ. ಇದು ಫೈಬರ್, ಮೆಗ್ನೀಸಿಯಮ್, ಪೊಟ್ಯಾಸಿಯಮ್, ವಿಟಮಿನ್ ಬಿ 6 ನಂತಹ ಇತರ ಪ್ರಮುಖ ಪೋಷಕಾಂಶಗಳನ್ನು ಸಹ ಒಳಗೊಂಡಿದೆ. ಆದರೆ ಇವುಗಳ ಅತಿಯಾದ ಸೇವನೆಯು ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳಲಾಗುತ್ತದೆ. ಹೆಚ್ಚು ಆಲೂ ಅಥವಾ ಬಟಾಟೆ ತಿನ್ನುವುದರಿಂದ ದೇಹದಲ್ಲಿ ನೋವಿನ ಜೊತೆಗೆ ಕಾಲು ನೋವು ಕೂಡ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.

3 / 5
ಮಧುಮೇಹ ಇರುವವರು ಆಲೂಗಡ್ಡೆ ತಿನ್ನದಿರುವುದು ಉತ್ತಮ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಏಕೆಂದರೆ ಆಲೂಗಡ್ಡೆಯಲ್ಲಿ ಹೆಚ್ಚಿನ ಕಾರ್ಬೋಹೈಡ್ರೇಟ್ ಅಂಶದಿಂದಾಗಿ, ಸಕ್ಕರೆ ಮಟ್ಟವು ವೇಗವಾಗಿ ಹೆಚ್ಚಾಗುತ್ತದೆ. ಅದಕ್ಕಾಗಿಯೇ ಮಧುಮೇಹ ಹೊಂದಿರುವವರು ಆಲೂಗಡ್ಡೆ ತಿನ್ನದಂತೆ ಸಲಹೆ ನೀಡಲಾಗುತ್ತದೆ.

4 / 5
ಆಲೂ ಅತಿಯಾಗಿ ತಿನ್ನುವುದು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ. ಆಲೂಗಡ್ಡೆಯಲ್ಲಿ ಹೆಚ್ಚಿನ ಕ್ಯಾಲೊರಿಗಳಿವೆ. ಇವುಗಳನ್ನು ಪದೇ ಪದೇ ಸೇವನೆ ಮಾಡುವುದು ದೇಹದ ತೂಕ ಹೆಚ್ಚಾಗಲು ಕಾರಣವಾಗಬಹುದು. ವಿಶೇಷವಾಗಿ ಹುರಿದು ಅಥವಾ ಚೀಸ್ ಮತ್ತು ಇತರ ಪದಾರ್ಥಗಳ ಜೊತೆಗೆ ಸೇವನೆ ಮಾಡಿದರೆ ತೂಕ ಹೆಚ್ಚಾಗುವ ಅಪಾಯ ಹೆಚ್ಚಾಗಿರುತ್ತದೆ.

5 / 5
ಆಲೂಗಡ್ಡೆಯನ್ನು ಅತಿಯಾಗಿ ತಿನ್ನುವುದು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು. ಹೊಟ್ಟೆ ಉಬ್ಬರ, ಗ್ಯಾಸ್  ಹೆಚ್ಚಾಗಲು ಕಾರಣವಾಗಬಹುದು. ಜೊತೆಗೆ ಇದರ ಅತಿಯಾದ ಸೇವನೆ ಪೌಷ್ಠಿಕಾಂಶದ ಅಸಮತೋಲನಕ್ಕೆ ಕಾರಣವಾಗುತ್ತದೆ. ಹಾಗಾಗಿ ಆಲೂಗಡ್ಡೆಯನ್ನು ಹುರಿದು ಅಥವಾ ಅದರಿಂದ ಮಾಡಿದ ಚಿಪ್ಸ್ ತಿನ್ನುವುದು ಒಳ್ಳೆಯದಲ್ಲ. ಇವು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಜೊತೆಗೆ ಮಧುಮೇಹ ಮತ್ತು ಬಿಪಿಯಂತಹ ಆರೋಗ್ಯ ಸಮಸ್ಯೆ ಇರುವವರು ಆಲೂಗಡ್ಡೆಯನ್ನು ತಿನ್ನದಿರುವುದು ಬಹಳ ಒಳ್ಳೆಯದು. ಅಲ್ಲದೆ ಹೊಟ್ಟೆಯ ಸುತ್ತಲೂ ಕೊಬ್ಬು ಸಂಗ್ರಹವಾಗಿರುವವರು ಕೂಡ ಆಲೂಗಡ್ಡೆಯಿಂದ ದೂರವಿರುವುದು ಒಳ್ಳೆಯದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

Published On - 12:09 pm, Thu, 27 March 25

Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Follow Us