- Kannada News Photo gallery Election Commission Officers sized 5 crore amount, gold and silver in Ballari
ಲೋಕಸಭಾ ಚುನಾವಣೆ 2024: ಬಳ್ಳಾರಿಯಲ್ಲಿ 5 ಕೋಟಿ ಹಣ, ಕೆಜಿಗಟ್ಟಲೆ ಚಿನ್ನ, ಮೂಟೆಗಟ್ಟಲೆ ಬೆಳ್ಳಿ ಜಪ್ತಿ
Election Commission Officers sized 5 crore amount, gold and silver ಬಳ್ಳಾರಿ ನಗರದ ಕಂಬಳಿ ಬಜಾರ್‌ನಲ್ಲಿ ಚುನಾವಣಾಧಿಕಾರಿಗಳು ದಾಖಲೆ ಇಲ್ಲದೆ ಸಾಗಿಸುತ್ತಿದ್ದ 5 ಕೋಟಿ 60 ಲಕ್ಷ ನಗದು ಮತ್ತು ಕೆಜಿಗಟ್ಟಲೆ ಚಿನ್ನದ ಆಭರಣ ಮತ್ತು ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಹಣ ಸಾಗಿಸುತ್ತಿದ್ದವರನ್ನು ಬ್ರೂಸ್‌ಪೇಟೆ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
Updated on:Apr 07, 2024 | 6:36 PM

ಲೋಕಸಭಾ ಚುನಾವಣೆ 2024: ಚುನಾವಣಾ ಸಮಯದಲ್ಲಿ ನಡೆಯುವ ಅಕ್ರಮಗಳ ಪತ್ತೆಗೆ ಹಾಗೂ ಚುನಾವಣಾ ಆಯೋಗವು ಹಲವು ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ಮತದಾರರಿಗೆ ಆಮಿಷ ವಡ್ಡಲು ಅಕ್ರಮವಾಗಿ ಸಾಗಿಸುವ ಹಣ ಅಥವಾ ವಸ್ತುಗಳ ಮೇಲೆ ಆಯೋಗ ಕಣ್ಣಿಟ್ಟಿದೆ.

ಬಳ್ಳಾರಿ ನಗರದ ಕಂಬಳಿ ಬಜಾರ್‌ನಲ್ಲಿ ಚುನಾವಣಾಧಿಕಾರಿಗಳು ಅಕ್ರಮವಾಗಿ ಸಾಗಿಸುತ್ತಿದ್ದ ಹಣ, ಚಿನ್ನದ ಆಭರಣ ಮತ್ತು ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಹೇಮಾ ಜ್ಯುವೆಲರ್ಸ್ ಮಾಲೀಕ ನರೇಶ್ ಸೋನಿಗೆ ಎಂಬುವರಿಗೆ ಸೇರಿದ ಹಣ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 5 ಕೋಟಿ 60 ಲಕ್ಷ ನಗದನ್ನು ಚುನಾವಣಾ ಆಯೋಗದ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ.

ಅಧಿಕಾರಿಗಳ ತಪಾಸಣೆ ವೇಳೆ ನಗದು ಮಾತ್ರವಲ್ಲದೆ 3 ಕೆ.ಜಿ ಚಿನ್ನ, 68 ಕೆ.ಜಿ ಬೆಳ್ಳಿ ಗಟ್ಟಿ, 103 ಕೆ.ಜಿ ಬೆಳ್ಳಿ ಆಭರಣಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಇನ್ನು ಹಣ ಸಾಗಿಸುತ್ತಿದ್ದವರನ್ನು ಬ್ರೂಸ್‌ಪೇಟೆ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ರಾಜ್ಯದಲ್ಲಿ ಮಾ.16 ರಿಂದ ಶನಿವಾರ (ಏ.06)ರ ವರೆಗೆ 20 ದಿನಗಳಲ್ಲಿ ಈವರೆಗೆ 187.85 ಕೋಟಿ ಮೌಲ್ಯದ ವಸ್ತುಗಳುನ್ನು ಜಪ್ತಿ ಮಾಡಲಾಗಿದೆ.

ರಾಜ್ಯದಲ್ಲಿ ಮಾ.16 ರಿಂದ ಶನಿವಾರ (ಏ.06)ರ ವರೆಗೆ 30.19 ಕೋಟಿ ನಗದು, 9.43 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ, 132.92 ಲಕ್ಷ ಲೀಟರ್ ಮದ್ಯ ಜಪ್ತಿ ಮಾಡಲಾಗಿದೆ.

ಚುನಾವಣೆ ಘೋಷಣೆ ಬಳಿಕ ರಾಜ್ಯದಲ್ಲಿ ಈವರೆಗೆ 1,240 ಎಫ್ಐಆರ್ ದಾಖಲಾಗಿವೆ.
Published On - 6:28 pm, Sun, 7 April 24




