Updated on: Nov 19, 2022 | 5:50 PM
'ಕನ್ನಡತಿ' ಧಾರಾವಾಹಿ ಖ್ಯಾತಿಯ ನಟಿ ರಂಜನಿ ರಾಘವನ್ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ತಾವು ಭೇಟಿ ನೀಡುವ ಬೇರೆ ಬೇರೆ ಸ್ಥಳಗಳ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ.
ಈಗ ಅದೇ ರೀತಿಯಾಗಿ ಕೆಲ ಫೋಟೋಗಳನ್ನು ಶೇರ್ ಮಾಡಿದ್ದು, 'ಬಂಗಾರದೊಡವೆ ಬೇಕೇ ನೀರೇ' ಎಂದು ಬರೆದುಕೊಂಡಿದ್ದಾರೆ.
ಮತ್ತೊಂದು ಚಿತ್ರಕ್ಕೆ ಕೇವಲ ಸೂರ್ಯಕಾಂತಿ ಹೂವನ್ನು ಕ್ಯಾಪ್ಷನ್ನಲ್ಲಿ ಹಾಕಿದ್ದು, ಇದಕ್ಕೆ ಅಭಿಮಾನಿಗಳು, 'ಕ್ಯಾಪ್ಷನ್ ಜಾಗದಲ್ಲಿ ನೀವು ಈ ರೀತಿ ಸೂರ್ಯಕಾಂತಿ ಹೂ ಹಾಕಿದರೆ ಹೇಗೆ? ನೀವು ಬರೆಯುವ ಕ್ಯಾಪ್ಷನ್ಗಾಗಿ ನಾವು ಕಾಯುತ್ತಿರುತ್ತೇವೆ' ಎಂದು ಕಮೆಂಟ್ ಮಾಡಿದ್ದಾರೆ.
ಮತ್ತೊಬ್ಬ ಅಭಿಮಾನಿ 'ಭುವನ ಸುಂದರಿ, ನಗು ಮುಖದ ಒಡತಿ' ಎಂದೆಲ್ಲಾ ಹೊಗಳಿದ್ದಾರೆ.
ನಟಿ ರಂಜನಿ ರಾಘವನ್ ಕೇವಲ ಧಾರಾವಾಹಿಯಲ್ಲಿ ಮಾತ್ರವಲ್ಲದೆ, ಕೆಲ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಜೊತೆಗೆ ನಟನೆ ಹೊರತಾಗಿ ಕಥೆಗಳನ್ನು ಸಹ ಬರೆಯುತ್ತಾರೆ. ಇವರು ಇತ್ತೀಚೆಗೆ ಕತೆ ಡಬ್ಬಿ ಪುಸ್ತಕವನ್ನು ಬರೆದಿದ್ದರು.