FIFA World Cup 2022: ಫಿಫಾ ವಿಶ್ವಕಪ್ನ ನಾಕೌಟ್ ಹಂತಕ್ಕೇರಿದ 3 ತಂಡಗಳು..!
FIFA World Cup 2022: ಇದರೊಂದಿಗೆ 32 ತಂಡಗಳಲ್ಲಿ ಮೂರು ತಂಡಗಳು 16ರ ಘಟ್ಟದಲ್ಲಿ ಆಡುವುದನ್ನು ಖಚಿತಪಡಿಸಿಕೊಂಡಿದೆ. ಆ ತಂಡಗಳು ಯಾವುದೆಂದರೆ...
Updated on: Nov 29, 2022 | 3:58 PM

ಖತರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ನ ಮೊದಲ ಸುತ್ತಿನಿಂದ ಮೂರು ತಂಡಗಳು ನಾಕೌಟ್ (ಪ್ರೀ ಕ್ವಾರ್ಟರ್ ಫೈನಲ್) ಹಂತಕ್ಕೇರಿದೆ. ಸೋಮವಾರ ನಡೆದ ಪಂದ್ಯದಲ್ಲಿ ಉರುಗ್ವೆ ವಿರುದ್ಧ 2 ಗೋಲುಗಳಿಂದ ಗೆಲುವು ದಾಖಲಿಸುವ ಮೂಲಕ ಪೋರ್ಚುಗಲ್ ಮುಂದಿನ ಹಂತಕ್ಕೇರುವುದನ್ನು ಖಚಿತಪಡಿಸಿಕೊಂಡಿತು.

ಅದಕ್ಕೂ ಮುನ್ನ ಸ್ವಿಟ್ಜರ್ಲ್ಯಾಂಡ್ ತಂಡವನ್ನು 1 ಗೋಲುಗಳ ಅಂತದಿಂದ ಮಣಿಸಿದ ಬ್ರೆಝಿಲ್ ನಾಕೌಟ್ ಹಂತಕ್ಕೆ ದಾಪುಗಾಲಿಟ್ಟಿತು. ಇನ್ನು ಈ ಬಾರಿಯ ವಿಶ್ವಕಪ್ನಲ್ಲಿ ಪ್ರೀ ಕ್ವಾರ್ಟರ್ ಫೈನಲ್ ಹಂತಕ್ಕೇರಿದ ಮೊದಲ ತಂಡವೆಂದರೆ ಫ್ರಾನ್ಸ್.

ಇದರೊಂದಿಗೆ 32 ತಂಡಗಳಲ್ಲಿ ಮೂರು ತಂಡಗಳು 16ರ ಘಟ್ಟದಲ್ಲಿ ಆಡುವುದನ್ನು ಖಚಿತಪಡಿಸಿಕೊಂಡಿದೆ. ಆ ತಂಡಗಳು ಯಾವುದೆಂದರೆ...

ಬ್ರೆಝಿಲ್ (ಗ್ರೂಪ್-Group G)

ಪೋರ್ಚುಗಲ್ (ಗ್ರೂಪ್-H)

ಫ್ರಾನ್ಸ್ (ಗ್ರೂಪ್- D)

ಆಡಿರುವ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಹಾಗೂ ಡೆನ್ಮಾರ್ಕ್ ತಂಡಗಳನ್ನು ಮಣಿಸಿರುವ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡವು ಮುಂದಿನ ಹಂತಕ್ಕೇರಿದೆ.

ಇನ್ನು ಘಾನಾ ಹಾಗೂ ಉರುಗ್ವೆ ವಿರುದ್ಧ ಕಣಕ್ಕಿಳಿದ ಪೋರ್ಚುಗಲ್ ತಂಡವು 2 ಭರ್ಜರಿ ಜಯದೊಂದಿಗೆ ಪ್ರೀ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದೆ.

ಇನ್ನು 5 ಬಾರಿಯ ಚಾಂಪಿಯನ್ ಬ್ರೆಝಿಲ್ ತಂಡವು ಆಡಿದ 2 ಪಂದ್ಯಗಳಲ್ಲಿ ಸರ್ಬಿಯಾ ಹಾಗೂ ಸ್ವಿಟ್ಜರ್ಲ್ಯಾಂಡ್ ಜಯ ಸಾಧಿಸಿ ಮುಂದಿನ ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ. ಇನ್ನು ಎಲ್ಲಾ 32 ತಂಡಗಳಿಗೆ ಒಂದೊಂದು ಪಂದ್ಯ ಉಳಿದಿದ್ದು, ಇದರಲ್ಲಿ ಗೆದ್ದು ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಲಿರುವ 13 ತಂಡಗಳಾವುವು ಕಾದು ನೋಡಬೇಕಿದೆ.

TV9 Kannada
Read More



