- Kannada News Photo gallery Food Fair at Chanakya College Davangere Unveiling of different foods, here are the photos
ದಾವಣಗೆರೆ ಚಾಣಕ್ಯ ಕಾಲೇಜಿನಲ್ಲಿ ಆಹಾರ ಮೇಳ; ಡಿಫರೆಂಟ್ ಫುಡ್ಗಳ ಅನಾವರಣ, ಇಲ್ಲಿದೆ ಫೋಟೋಸ್
ನಿಮಗೆ ದಾವಣಗೆರೆ ಅಂದ್ರೆ ಥಟ್ ಎಂದು ನೆನಪಿಗೆ ಬರುವುದು ಬೆಣ್ಣೆ ದೋಸೆ, ಖಾರಾ ಮಂಡಕ್ಕಿ. ಇವುಗಳ ಹೆಸರು ಕೇಳಿದ್ರೆ ಬಹುತೇಕರಿಗೆ ಬಾಯಲ್ಲಿ ನೀರು ಬರುವುದು ಮಾಮೂಲು. ಹೀಗೆ ಬೆಣ್ಣೆ ದೋಸೆ, ಖಾರಾ ಮಂಡಕ್ಕಿ ತಿಂದು ದಾವಣಗೆರೆ ಜನರ ನಾಲಿಗೆ ಋಚಿ ಕಳೆದುಕೊಳ್ಳುತ್ತಿದೆ. ಹೀಗಾಗಿ ಸ್ವಲ್ಪ ಡಿಫರೆಂಟಾದ ಟೇಸ್ಟ್ ನೋಡೋಣವೆಂದು ಇಲ್ಲೊಂದಿಷ್ಟು ವಿದ್ಯಾರ್ಥಿನಿಯರು ಪ್ರಯತ್ನಿಸಿದ್ದಾರೆ.
Updated on: Oct 22, 2023 | 1:31 PM

ಶುರುವಲ್ಲಿಯೇ ನಿಮಗೆ ಸಿಗುವುದು ಬಾಯಲ್ಲಿಟ್ಟಿರೇ ಕರಗುವ ಪಾನ್, ಸ್ವಲ್ಪ ಮುಂದೆ ಹೋದರೆ ಹಲ್ವಾ, ದೇಶಿಯ ಜ್ಯೂಸ್, ಹೊಟ್ಟೆ ತುಂಬಲಿ ಎಂದು ಮಸಾಲಾ ರೈಸ್, ಇನ್ನೊಂದು ಕಡೆ ಸ್ಥಳದಲ್ಲಿಯೇ ಬಿಸಿ ಬಿಸಿಯಾಗಿ ರೆಡಿ ಆಗುತ್ತಿರುವ ಆಂಧ್ರಪ್ರದೇಶ ಕಚ್ಚಾ ಕಲ್ವಾ. ಇದರ ನಡುವೆ ನಾನು ಸ್ಥಳೀಯ ನನ್ನ ಮರೆಯಬೇಡಿ ಎಂದು ಹಾಜರಿ ಹಾಕಿದ ಮೆಣಸಿನಕಾಯಿ ಬಜ್ಜಿ. ಹೀಗೆ ಹತ್ತು ಹಲವಾರು ದೇಶ-ವಿದೇಶದ ವಿಭಿನ್ನ ರೀತಿಯ ತಿಂಡಿ ತಿನಿಸುಗಳು ಇಲ್ಲಿದ್ದವು.

ದಾವಣಗೆರೆ ನಗರದ ಚಾಣಕ್ಯ ಕಾಲೇಜ್ ಆಯೋಜಿಸಿದ ಆಹಾರ ಮೇಳ ಇದಾಗಿದ್ದು, ಇಡೀ ದಿನ ನಡೆದ ಈ ಮೇಳಕ್ಕೆ ತುಂತುರು ಮಳೆಯಲ್ಲಿ ಜನ ಸಾಗರವೇ ಹರಿದು ಬಂದಿತ್ತು. ಇನ್ನೊಂದು ವಿಶೇಷ ಅಂದರೆ, ಆಹಾರ ಮೇಳ ಕಮ್ ಮಾರಾಟ ಎಂದು ಮಾಡಿದ್ದರು. ಇಲ್ಲಿದ್ದ ಐಟಂಗಳನ್ನು ಕೇವಲ ನೋಡಿ ಹೋಗುವುದು ಅಷ್ಟೇ ಅಲ್ಲ, ಜೇಬಿನಲ್ಲಿ ದುಡ್ಡಿದ್ದರೇ ಅಲ್ಲಿಯೇ ತಿನ್ನಲು ಬಹುದು. ಹೀಗಾಗಿ ಜನರ ಪ್ರತಿಕ್ರಿಯೆ ಮಾತ್ರ ಸಖತ್ ಆಗಿತ್ತು.

ಇದನ್ನೆಲ್ಲ ಮಾಡಿದ್ದು ಸ್ಥಳೀಯ ಮಹಿಳೆಯರು. ಅದರಲ್ಲಿಯೂ ಮನೆಯಲ್ಲಿ ಮಾಡಿದ ಪಾನಿಪುರಿಗೆ ಜನ. ನಾ ಮುಂದು ತಾಮುಂದು ಎಂದು ಸವಿದರು. ಚಟ್ನಿ ಪುಡಿ, ಪಲಾವ್, ಪರೋಟಾ, ತಿಳಿ ಸಾರ್, ಅಕ್ಕಿ ಹುಗ್ಗಿ, ಸಾಂಬರ್ ಹೀಗೆ ಒಂದಾದ ಮೇಲೆ ಒಂದರಂತೆ ನೂರಾರು ಪ್ರಕಾರದ ತಿಂಡಿ ತಿನಿಸುಗಳು ಇಲ್ಲಿದ್ದವು.

ಇನ್ನು ಇದು ಹೇಳಿ -ಕೇಳಿ ವಿದ್ಯಾರ್ಥಿಯರು ತಯಾರಿಸಿ ಯೋಜಿಸಿರುವ ಮೇಳ. ಹೀಗಾಗಿ ವಿದ್ಯಾರ್ಥಿನಿಯರು ಹೆಚ್ಚು ಇಷ್ಟವಾಗುವುದು ತಾನು ಸುಂದರವಾಗಿ ಕಾಣಬೇಕು ಎಂದು. ಇದಕ್ಕೂ ಕೂಡ ಇಲ್ಲಿ ಪ್ರದರ್ಶನದಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ಇನ್ನು ಇದು ಹೇಳಿ -ಕೇಳಿ ವಿದ್ಯಾರ್ಥಿಯರು ತಯಾರಿಸಿ ಯೋಜಿಸಿರುವ ಮೇಳ. ಹೀಗಾಗಿ ವಿದ್ಯಾರ್ಥಿನಿಯರು ಹೆಚ್ಚು ಇಷ್ಟವಾಗುವುದು ತಾನು ಸುಂದರವಾಗಿ ಕಾಣಬೇಕು ಎಂದು. ಇದಕ್ಕೂ ಕೂಡ ಇಲ್ಲಿ ಪ್ರದರ್ಶನದಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ಹೀಗೆ ಬರೀ ಬೆಣ್ಣೆದೋಸೆ ಖಾರಾ ಮಂಡಕ್ಕಿ ತಿಂದು ತಿಂದು ಸುಸ್ತಾಗಿದ್ದ ದಾವಣಗೆರೆ ಜನರಿಗೆ ಹೊಸ ಟೇಸ್ಟ್ ಸಿಕ್ಕಂತಾಗಿತ್ತು. ಮೇಲಾಗಿ ಇಲ್ಲಿ ಮಹಿಳೆಯ ಆತ್ಮ ವಿಶ್ವಾಸ ಹೆಚ್ಚಿಸುವ ಕೆಲಸ ಕೂಡ ಪರೋಕ್ಷವವಾಗಿ ನಡೆಯಿತು. ಅದು ಹೇಗೆ? ಇದು ಹೇಗೆ ಎಂದು ಅವರಿಂದ ಮಾಹಿತಿ ಪಡೆಯುವ ಜನರ ಸಂಖ್ಯೆ ಜಾಸ್ತಿ ಇತ್ತು. ಹೀಗಾಗಿ ಆಹಾರ ಮೇಳಾ ಸಖತ್ ಆಗಿ ಯಶಸ್ವಿ ಆಯಿತು.



















