ತೋಟಗಾರಿಕೆ ಮೇಳದಲ್ಲಿ ಕಣ್ಮನ ಸೆಳೆದ ಫಲಪುಷ್ಪ ಪ್ರದರ್ಶನ; ಸುಂದರ ಹೂಗಳು ನೋಡಿ ಮನಸೋತ ಹೆಂಗಳೆಯರು

ಬಾಗಲಕೋಟೆ ತೋಟಗಾರಿಕೆ ಮೇಳದ ಫಲಪುಷ್ಪ ಪ್ರದರ್ಶನದಲ್ಲಿ ಕಾಲಿಟ್ಟರೆ ಹೂಗಳ ಅದ್ಬುತ ಲೋಕವೇ ದರೆಗಿಳಿದಂತಿತ್ತು. ಹಚ್ಚಹಸಿರಿನ ವಿಧ ವಿಧದ ಹಣ್ಣುಗಳ ಸಾಲು ಕಣ್ಮನ ಸೆಳೆಯುತ್ತಿತ್ತು. ಮನಸೂರೆಗೊಳ್ಳುವ ಸುಂದರ ಹೂಗಳಲ್ಲಿ ಅನುಭವ ಮಂಟಪ ಅರಳಿ ನಿಂತಿತ್ತು. ಸಿರಿದಾನ್ಯದಲ್ಲಿ ಬಸವಣ್ಣ‌ನ ಮಂದಹಾಸ ಎಲ್ಲರನ್ನು ಸೆಳೆದಿತ್ತು. ಎಲ್ಲ ಸುಂದರ ದೃಶ್ಯದ ಮುಂದೆ‌ ಹೆಂಗಳೆಯರ ಸೆಲ್ಫಿ ಆಟ ಜೋರಾಗಿತ್ತು. ತೋಟಗಾರಿಕೆ ಮೇಳದಲ್ಲಿ ‌ಕಂಡು‌ಬಂದ ಝಲಕ್ ಇಲ್ಲಿದೆ.

ರವಿ ಹೆಚ್ ಮೂಕಿ, ಕಲಘಟಗಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 11, 2024 | 5:13 PM

 ವಿಧ ವಿಧದ ಹಣ್ಣು, ತರಕಾರಿಗಳ ಸಾಲು. ನೋಡಿದರೆ ಬರಿ ನೋಡುತ್ತಾ ನಿಲ್ಲಲಾ ಎನ್ನುವಂತಹ ಹೂಗಳ ರಾಶಿ. ಹೂಗಳಲ್ಲಿ ಅರಳಿದ ಅನುಭವ ಮಂಟಪ, ಎತ್ತಿನ ಬಂಡಿಗೆ ಹೂಗಳ ಅಲಂಕಾರ, ಹೂಗಳಲ್ಲೇ ಕರ್ನಾಟಕ ನಕ್ಷೆ. ಫಲ ಪುಷ್ಪಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳತ್ತಿರುವ ತರುಣಿಯರು ಮಹಿಳೆಯರು. ಈ ದೃಶ್ಯಗಳು ಕಂಡುಬಂದಿದ್ದು ಬಾಗಲಕೋಟೆ ತೋಟಗಾರಿಕೆ ಮೇಳದ ಫಲಪುಷ್ಪ ಪ್ರದರ್ಶನದಲ್ಲಿ.

1 / 8
ನಿನ್ನೆಯಿಂದ ಬಾಗಲಕೋಟೆ ತೋಟಗಾರಿಕೆ ವಿವಿ ವತಿಯಿಂದ ಮೂರು ದಿನಗಳ‌ ಕಾಲ ತೋಟಗಾರಿಕೆ ಮೇಳ ಹಮ್ಮಿಕೊಳ್ಳಲಾಗಿದೆ. ತೋಟಗಾರಿಕೆ ಮೇಳದಲ್ಲಿ ಎಲ್ಲರ ಗಮನ ಸೆಳೆಯುತ್ತಿರೋದು ಫಲಪುಷ್ಪ ಪ್ರದರ್ಶನ. ಈ ಫಲಪುಷ್ಪ ಪ್ರದರ್ಶನವನ್ನು ಬಾಗಲಕೋಟೆ ಶಾಸಕ ಹೆಚ್ ವೈ ಮೇಟಿ ಉದ್ಘಾಟನೆ ಮಾಡಿದರು.

2 / 8
ಮೇಳದಲ್ಲಿ ತರಹೇವಾರಿ ಪುಷ್ಪಗಳು ಹಣ್ಣು ತರಕಾರಿ ಎಲ್ಲರ ಕಣ್ಮನ ಸೆಳೆಯುತ್ತಿದ್ದವು. ಗುಲಾಬಿ ಹೂಗಳಲ್ಲೇ ಬಸವಣ್ಣನವರ ಕಾಲದ ಅನುಭವ ಮಂಟಪ ತಯಾರಿಸಲಾಗಿತ್ತು. ಜೊತೆಗೆ ಸಿರಿದಾನ್ಯದಲ್ಲಿ ಬಸವಣ್ಣನ ವರ ಮೂರ್ತಿ,ಹೂಗಳಲ್ಲಿ ಅಲಂಕಾರ‌ಮಾಡಿದ ಎತ್ತಿನ ಬಂಡಿ ,ಗುಲಾಬಿ ಹೂನಲ್ಲೇ ಅರಳಿದ ಕರ್ನಾಟಕ ನಕ್ಷರ ಫಲಪುಷ್ಪ‌ ಪ್ರದರ್ಶನದ ಆಕರ್ಷಣೀಯ ಚಿತ್ರಗಳಾಗಿದ್ದವು.

3 / 8
ತೋಟಗಾರಿಕೆ ವಿಶ್ವ ವಿದ್ಯಾಲಯ ಹಾಗೂ ಬಾಗಲಕೋಟೆ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿತ್ತು. ಹೂ ಹಣ್ಣುಗಳು, ತರಕಾರಿಗಳು, ಸಿರಿದಾನ್ಯ ಕೃಷಿ ಬಗ್ಗೆ ಜಾಗೃತಿ ಪರಿಚಯ ಉದ್ದೇಶದಿಂದ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

4 / 8
ಮೇಳದಲ್ಲಿ ಜರ್ಬೆರಾ, ಅಂತೋರಿಯಮ್, ಕಾರ್ನೆಶನ್, ಚೈನಾ ಎಸ್ಟರ್ , ಬರ್ಡರ್ ಪ್ಯಾರಾಡೈಸ್, ಆರ್ಕಿಡ್ಸ್, ಚೆಂಡು ಹೂ, ಗುಲಾಬಿ ಹೀಗೆ ಹತ್ತಾರೂ ವಿಧದ ಅಲಂಕಾರಿಕ ಹೂಗಳು ಫಲಪುಷ್ಪ ಪ್ರದರ್ಶನದಲ್ಲಿ ಸಮ್ಮಿಲನಗೊಂಡಿದ್ದವು. ಮಹಿಳೆಯರು ವಿದ್ಯಾರ್ಥಿನಿಯರು, ಹೂಗಳಿಂದ ನಿರ್ಮಾಣವಾದ ಕಲಾಕೃತಿಗಳ ಮುಂದರ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡಿದ್ರು.

5 / 8
ಕಲರ್ ಫುಲ್ ರಂಗು ರಂಗಿನ ಹೂಗಳು ನೋಡುಗರನ್ನು ಆಕರ್ಷಿಸಿದರೆ, ಮಹಿಳೆಯರು ಯುವತಿಯರು ಹೂಗಳ ಅಂದ ನೋಡಿ ಸಂಭ್ರಮಪಟ್ಟರು. 50 ಸಾವಿರ ಗುಲಾಬಿ ಹೂಗಳಿಂದ ಅರಳಿದ ಅನುಭವ ಮಂಟಪ, ಸಿರಿದಾನ್ಯದಲ್ಲಿ ತಯಾರಾದ ಬಸವಣ್ಣನ ಮೂರ್ತಿ‌ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿ ಪಟ್ರು.

6 / 8
 ಇದಲ್ಲದೇ ಫಲ ಪುಷ್ಪ ಪ್ರದರ್ಶನದಲ್ಲಿ, ಪಪ್ಪಾಯಿ, ಪೇರು,ಚಿಕ್ಕು,ಪೈನಾಪಲ್, ರಾಮ್ ಫಲ, ಕಲ್ಲಂಗಡಿ, ಬಾಳೆ ಹಣ್ಣು,ದ್ರಾಕ್ಷಿ ಸೇರಿ ಹಲವು ವಿಧದ ಹಣ್ಣುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಜೊತೆಗೆ ಹೀರೆಕಾಯಿ, ನುಗ್ಗೆ, ಮೆಣಸು,ಟಮೋಟೊ, ಸೇರಿದಂತೆ ವಿವಿಧ ತರಕಾರಿ ಬೆಳೆಗಳ ಪ್ರದರ್ಶನ, ಎಲ್ಲವನ್ನು ನೋಡೋದಕ್ಕೆ ಜನರು ,ರೈತರು, ವಿದ್ಯಾರ್ಥಿಗಳು,ಸಾರ್ವಜನಿಕರು ಬೆಳಿಗ್ಗೆಯಿಂದ ಆಗಮಿಸಿದ್ದರು.

7 / 8
ವಿವಿ ಸಿಬ್ಬಂಧಿಯಿಂದ ಉಪಯುಕ್ತ ಮಾಹಿತಿ ಪಡೆದುಕೊಂಡ್ರು. ಇನ್ನು ಈ ತೋಟಗಾರಿಕೆ ಮೇಳ ಕೇವಲ ನೋಡೋದಕ್ಕೆ ಮಾತ್ರ ಸೀಮಿತವಾಗದೆ ತೋಟಗಾರಿಕೆ ಬೆಳೆ ಹಾಗೂ ಹೂ ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದಾಗಿ ಫಲಪುಷ್ಪ ಪ್ರದರ್ಶನ ಹಮ್ಮಿಕೊಂಡಿದ್ದರಿಂದ ವಿದ್ಯಾರ್ಥಿಗಳು, ರೈತರು ಎಲ್ಲರೂ ಬಂದು ವೀಕ್ಷಿಸಿ ಎಂಜಾಯ್ ಮಾಡೋದರ ಜೊತೆಗೆ ಉಪಯುಕ್ತ ಮಾಹಿತಿ ಪಡೆದುಕೊಂಡರು. ಒಟ್ಟಿನಲ್ಲಿ ತೋಟಗಾರಿಕಾ ಮೇಳದಲ್ಲಿ ಫಲಪುಷ್ಪ ಪ್ರದರ್ಶನ ಎಲ್ಲರನ್ನು ಸೆಳೆಯುತ್ತಿದ್ದು ಮೇಳಕ್ಕೆ ವಿಶೇಷ ಮೆರುಗು ನೀಡಿದೆ.

8 / 8
Follow us