Kannada News Photo gallery Ganesh Chaturthi Celebration at Idagunji Mahaganapati Temple, Devotees rushed to pray Lord Ganapathi, Kannada news
ಗಣೇಶ ಚತುರ್ಥಿ: ಇಡಗುಂಜಿಯಲ್ಲಿ ಭಕ್ತ ಸಾಗರ, ಗಣಪನಿಗೆ ತೆಂಗು, ಬಾಳೆ, ಅಡಿಕೆ ಅರ್ಪಿಸಿದ ಅನ್ನದಾತರು
ಕರ್ನಾಟಕದೆಲ್ಲೆಡೆ ಸಂಭ್ರಮದಿಂದ ಗಣೇಶ ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಇತ್ತ ರಾಜ್ಯದ ಪುರಾಣ ಪ್ರಸಿದ್ಧ ಇಡಗುಂಜಿ ಗಣೇಶ ದೇವಸ್ಥಾನಕ್ಕೆ ಶುಕ್ರವಾರ ರಾತ್ರಿಯಿಂದಲೇ ಭಕ್ತರ ದಂಡು ಹರಿದು ಬಂದಿತ್ತು. ರೈತರು ತಮ್ಮ ಜಮಿನಿನಲ್ಲಿ ಬೆಳೆದ ಬೆಳೆಯನ್ನು ವಿಘ್ನ ವಿನಾಶಕನಿಗೆ ಅರ್ಪಿಸಿದರೆ, ರಾಜ್ಯದ ಮೂಲೆ ಮೂಲೆಯಿಂದ ಬಂದ ಜನ ಹರಕೆ ಹೊತ್ತು ವಿಶೇಷ ಪೂಜೆ ಸಲ್ಲಿಸಿದರು.
1 / 5
ಗಣೇಶ ಚತುರ್ಥಿಯ ಪ್ರಯುಕ್ತ ರಾಜ್ಯದ ಬಹುತೇಕ ಮನೆಗಳಲ್ಲಿ ಇಂದು ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಇಡಗುಂಜಿಯಲ್ಲಿನ ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಪ್ರಸಿದ್ಧವಾದ ಗಣಪತಿ ದೇವಸ್ಥಾನ ಇದೆ. ಈ ದೇವಸ್ಥಾನಕ್ಕೆ ಭಕ್ತರೆ ದಂಡೇ ಹರಿದು ಬಂದಿದೆ.
2 / 5
ಇಡಗುಂಜಿ ಗಣಪತಿ ರಾಜ್ಯ ಅಷ್ಟೇ ಅಲ್ಲ ದೇಶ ವಿದೇಶಗಳಲ್ಲೂ ಬಹಳಷ್ಟು ಪ್ರಸಿದ್ಧಿ ಪಡೆದಿದೆ. ಗಣೇಶ ಚತುರ್ಥಿಯಂದು ಇಲ್ಲಿಗೆ ಬಂದು ವಿಶೇಷ ಪೂಜೆ ಸಲ್ಲಿಸಿದರೆ ಹರಕೆ ಈಡೆರುತ್ತದೆ ಎಂಬ ನಂಬಿಕೆ ಇದೆ.
3 / 5
ಹಾಗಾಗಿ ಮನೆಯಲ್ಲಿ ಹಬ್ಬ ಇದ್ದರೂ ಸಹಿತ ಬಹಳಷ್ಟು ಜನ ಇಲ್ಲಿಗೆ ಬಂದು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮನೆಯಲ್ಲಿ ಗಣೇಶನನ್ನ ಪ್ರತಿಷ್ಠಾಪನೆ ಮಾಡುತ್ತಾರೆ. ಹಾಗಾಗಿ ಬೆಳಿಗ್ಗೆ ಬೇಗ ದರ್ಶನ ಮಾಡಿಕೊಂಡು ಹೋಗಬೇಕೆಂದು ಶುಕ್ರವಾರ ರಾತ್ರಿಯಿಂದಲೇ ಭಕ್ತರ ದಂಡು ಇಡಗುಂಜಿಗೆ ಹರಿದು ಬಂದಿತ್ತು.
4 / 5
ಶರವಾತಿ ನದಿಯ ದಡದಲ್ಲಿನ ಫಲವತ್ತಾದ ಪ್ರದೇಶದಲ್ಲಿ ನೆಲೆಸಿರುವ ಇಡಗುಂಜಿಯ ಗಣಪತಿಗೆ ಈ ಭಾಗದಲ್ಲಿ ಬೆಳೆಯುವ ಬೆಳೆಯ ಮೊದಲ ಫಲವನ್ನು ಚೌತಿಯಂದು ಅರ್ಪಣೆ ಮಾಡಲಾಗುತ್ತದೆ. ಹಾಗಾಗಿ ತೆಂಗು, ಬಾಳೆ, ಅಡಕೆ, ಹಲಸು, ಹಾಗಲಕಾಯಿ, ಬೆಂಡೆಕಾಯಿ ಲಿಂಬೆ ಹಣ್ಣು ಹೀಗೆ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯನ್ನ ಚೌತಿಯ ಬೆಳಗಿನ ಜಾವ ಗಣಪನ ಮುಂದಿರುವ ಮಂಟಪದಲ್ಲಿ ಕಟ್ಟಿ, ವರ್ಷಪೂರ್ತಿ ನಮ್ಮ ಬೆಳೆ ರಕ್ಷಿಸುವಂತೆ ರೈತರು ಪ್ರಾರ್ಥನೆ ಮಾಡಿದರು.
5 / 5
ಒಟ್ಟಾರೆಯಾಗಿ ಎಲ್ಲೆಡೆ ಪ್ರತಿ ಮನೆ ಹಾಗೂ ಗಲ್ಲಿ ಗಲ್ಲಿಗಳಲ್ಲಿ ಗಣೇಶನ ಪ್ರತಿಷ್ಠಾಪಣೆ ಮಾಡಿದರೂ ಸಹಿತ, ಪುರಾಣ ಪ್ರಸಿದ್ಧ ದೇವಸ್ಥಾನಗಳಲ್ಲಿನ ಐತಿಹಾಸಿಕ ಪರಂಪರೆ ಎಂದಿನಂತೆ ಮುಂದುವರೆದಿದ್ದು, ಭಕ್ತರ ದಂಡು ವರ್ಷದಿಂದ ವರ್ಷಕ್ಕೆ ಜಾಸ್ತಿ ಆಗುತ್ತಲೇ ಇದೆ.