Kannada News » Photo gallery » Garden Hacks: Here are some super hacks for your home garden in kannada Tips
Garden Hacks: ನಿಮ್ಮ ಮನೆಯ ಗಾರ್ಡನ್ಗಾಗಿ ಇಲ್ಲಿವೆ ಸೂಪರ್ ಹ್ಯಾಕ್ಸ್
Akshatha Vorkady |
Updated on: Jan 22, 2023 | 12:08 PM
ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಾ ಇರುತ್ತದೆ. ಹಾಗೆಯೇ ಮನೆಯ ಗಾರ್ಡನಿಂಗ್ಗೆ ಸಂಬಂಧಪಟ್ಟ ಹಲವಾರು ಪೋಸ್ಟ್ಗಳನ್ನು ಕೂಡ ನೋಡಿರುತ್ತೀರಿ.
Jan 22, 2023 | 12:08 PM
ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಾ ಇರುತ್ತದೆ. ಹಾಗೆಯೇ ಮನೆಯ ಗಾರ್ಡನಿಂಗ್ಗೆ ಸಂಬಂಧಪಟ್ಟ ಹಲವಾರು ಪೋಸ್ಟ್ಗಳನ್ನು ಕೂಡ ನೋಡಿರುತ್ತೀರಿ.
1 / 6
ಮೊಟ್ಟೆ ಚಿಪ್ಪುನಲ್ಲಿ ಬೀಜ ಹಾಕಿ ಮೊಳಕೆ ಬರಿಸುವುದು. ಇಂತಹ ವಿಡಿಯೋಗಳನ್ನು ನೀವೂ ಸಾಮಾಜಿಕ ಜಾಲತಾಣದಲ್ಲಿ ನೋಡಿರುತ್ತೀರಿ. ಜೊತೆಗೆ ನೀವೂ ಕೂಡ ಮನೆಯಲ್ಲಿ ಪ್ರಯತ್ನಿಸಿ ಇರಬಹುದು. ಆದರೆ ಈ ಹ್ಯಾಕ್‌ನ ಹಿಂದಿನ ಕಲ್ಪನೆಯೆಂದರೆ, ಮೊಳಕೆಗೆ ಮಿಶ್ರಗೊಬ್ಬರವನ್ನು ಪಡೆಯಲು ನೀವು ಮೊಟ್ಟೆ ಚಿಪ್ಪನ್ನು ಮರುಬಳಕೆ ಮಾಡಬಹುದು. ಮೊಟ್ಟೆಯ ಚಿಪ್ಪು ಸಣ್ಣ ಸಸ್ಯಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಹೊಂದಿರುತ್ತದೆ.
2 / 6
ಬಾಳೆ ಸಿಪ್ಪೆಯ ರಸಗೊಬ್ಬರ: ಬಾಳೆಹಣ್ಣು ತಿಂದ ನಂತರ ಅದರ ಸಿಪ್ಪೆಯನ್ನು ಎಸೆಯುವ ಬದಲು ನೀವು ಬಾಳೆಹಣ್ಣಿನ ಸಿಪ್ಪೆಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಮತ್ತು ಒಂದು ಡಬ್ಬದಲ್ಲಿ ನೀರಿನಲ್ಲಿ ನೆನೆಸಿಡಿ. ಇದು ಸಸ್ಯಗಳ ಬೆಳವಣೆಗೆಗೆ ಬೇಕಾಗುವ ಸಾರಜನಕ, ರಂಜಕ ಮತ್ತು ಪೊಟ್ಯಾಸಿಯಮ್ ನೀಡುತ್ತದೆ.
3 / 6
ಕಾಫಿಯ ಜರಟಾ ಅಥವಾ ಜಗಟು: ನೀವು ಕಾಫಿ ಮಾಡಿಕೊಂಡ ನಂತರ ಅದನ್ನು ಪುಡಿ ಅಥವಾ ಜಗಟನ್ನು ನೀವು ಬಿಸಾಕುವ ಬದಲು, ಗಿಡಗಳಿಗೆ ಬಳಸಬಹುದು. ಇದು ನಿಮ್ಮ ಗಾರ್ಡನ್ನಲ್ಲಿ ಇರುವೆ, ಚಿಗಟೆ, ಸೊಳ್ಳೆಗಳು ಹಾಗೂ ಯಾವುದೇ ಕೀಟಗಳು ಬರದಂತೆ ನೋಡಿಕೊಳ್ಳುತ್ತದೆ.
4 / 6
ಆಲೂಗಡ್ಡೆಯಲ್ಲಿ ಗುಲಾಬಿ ಗಿಡ ನೆಡುವುದು: ಸಾಮಾಜಿಕ ಜಾಲತಾಣದಲ್ಲಿ ಇಂತಹ ವಿಡಿಯೋಗಳು ಸಾಕಷ್ಟು ಹರಿದಾಡುತ್ತಿರುತ್ತವೆ. ಇದು ನಿವಾಗಿಯೂ ಪ್ರಯೋಜನಕಾರಿಯೇ ಎಂಬುದು ಸಾಕಷ್ಟು ಜನರಿಗೆ ಕಾಡುವ ಪ್ರಶ್ನೆಯಾಗಿದೆ. ಆಲೂಗಡ್ಡೆಯಲ್ಲಿ ಎಥಿಲೀನ್ ಸಮೃದ್ದವಾಗಿದ್ದು, ಇದು ಗಿಡಗಳ ಬೆಳವಣಿಗೆಗೆ ಸಹಾಯಕವಾಗಿದೆ.
5 / 6
ಟೀಲೈಟ್ ಮೇಣದಬತ್ತಿ ಬಳಸುವುದು: ಇದು ಸಾಮಾನ್ಯವಾಗಿ ಗೊತ್ತೇ ಇರುವ ವಿಷಯ. ಹೈಸ್ಕೂಲ್ನ ಭೌತಶಾಸ್ತ್ರದಲ್ಲಿ ಹಸಿರು ಮನೆ ಪರಿಣಾಮಗಳ ಬಗ್ಗೆ ನೀವು ಕೇಳಿರುತ್ತೀರಿ. ಈ ರೀತಿಯಾಗಿ ಟೀಲೈಟ್ ಮೇಣದಬತ್ತಿಯನ್ನು ಬಳಸುವುದರಿಂದ ನಿಮ್ಮ ಹಸಿರುಮನೆಯ ಸುತ್ತಲೂ ಈ ಅದ್ಭುತವಾದ ಶಾಖವನ್ನು ಹೊರಸೂಸುತ್ತದೆ ಮತ್ತು ಸಸ್ಯಗಳನ್ನು ಬೆಚ್ಚಗಾಗಿಸುತ್ತದೆ ಎಂಬುದು ಕಲ್ಪನೆ.