ಕೆಫೀನ್ ತ್ಯಜಿಸುವುದು: ಪ್ರಪಂಚದಾದ್ಯಂತದ ಕೋಟ್ಯಾಂತರ ಜನರು ಬೆಳಿಗ್ಗೆ ಒಂದು ಕಪ್ ಚಹಾ ಅಥವಾ ಕಾಫಿಯೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಈ ಬಿಸಿ ಬಿಸಿ ಪಾನೀಯವನ್ನು ಇಷ್ಟಪಡದವರೇ ಇಲ್ಲ. ಕಿರಿಕಿರಿಯೆನಿಸಿದರೆ... ಸಿಟ್ಟು ಬಂದರೂ.. ಬೇಸರವಾದರೆ..? ನೋವು ಅನುಭವಿಸಿದರೆ... ತಲೆನೋವು, ಸುಸ್ತು ಇದ್ದರೆ ಚಿಂತಿಸಬೇಕಾಗಿಲ್ಲ ಅದರಿಂದ ಪರಿಹಾರ ಪಡೆಯಲು ಜನ ಒಂದು ಕಪ್ ಕಾಫಿ/ ಚಹಾ ಕುಡಿದು ಹಾಯ್ ಆಗಿದೆ ಅಂತಾರೆ. ದಿನಕ್ಕೆ ಹಲವಾರು ಬಾರಿ ತೆಗೆದುಕೊಳ್ಳುವವರೂ ಇದಾರೆ. ಇದು ಮನಸ್ಸನ್ನು ಉಲ್ಲಾಸಗೊಳಿಸುತ್ತದೆ ಮತ್ತು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ ಎನ್ನುತ್ತಾರೆ.