ಖ್ಯಾತ ನಟ ‘ಗೋಲ್ಡನ್ ಸ್ಟಾರ್’ ಗಣೇಶ್ ಮತ್ತು ಶಿಲ್ಪಾ ಗಣೇಶ್ ದಂಪತಿಯ ಪುತ್ರಿ ಚಾರಿತ್ರ್ಯಗೆ ಇಂದು (ಮಾ.27) ಜನ್ಮದಿನದ ಸಂಭ್ರಮ. ಮಗಳ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಗಣೇಶ್ ಮತ್ತು ಶಿಲ್ಪಾ ಅವರು ಶುಭಾಶಯ ಕೋರಿದ್ದಾರೆ. ಈ ಫೋಟೋಗಳಿಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.
ಗಣೇಶ್ ಪುತ್ರಿ ಚಾರಿತ್ರ್ಯ ಹುಟ್ಟುಹಬ್ಬವನ್ನು ಕಲರ್ಫುಲ್ ಆಗಿ ಆಚರಿಸಲಾಗಿದೆ. ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಈ ಪಾರ್ಟಿಯಲ್ಲಿ ಪಾಲ್ಗೊಂಡಿದ್ದಾರೆ. ಚಾರಿತ್ರ್ಯ ಫ್ರೆಂಡ್ಸ್ ಕೂಡ ಈ ಖುಷಿಯ ಕ್ಷಣದಲ್ಲಿ ಭಾಗಿ ಆಗಿದ್ದಾರೆ.
ಹಸಿರು ಬಣ್ಣದ ಮಿರಿಮಿರಿ ಮಿಂಚುವ ಗೌನ್ ಅನ್ನು ಚಾರಿತ್ರ್ಯ ಧರಿಸಿದ್ದಾಳೆ. ಬಣ್ಣಬಣ್ಣದ ಬಲೂನ್, ಬಗೆಬಗೆಯ ಲೈಟಿಂಗ್ಗಳಿಂದ ವಾತಾವರಣದ ರಂಗೇರಿಸಿ ಈ ಪಾರ್ಟಿ ಮಾಡಲಾಗಿದೆ. ನಟಿ ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈ ಪಾರ್ಟಿಯಲ್ಲಿ ಹಾಜರಿ ಹಾಕಿದ್ದಾರೆ.