- Kannada News Photo gallery Good news for Shivamogga citizens: Another Chennai, Hyderabad flight starts from today, Karnataka news in kannada
ಇಂದಿನಿಂದ ಶಿವಮೊಗ್ಗ ಏರ್ಪೋರ್ಟ್ನಿಂದ ಮತ್ತೊಂದು ವಿಮಾನ ಹಾರಾಟ: ಎಲ್ಲಿಗೆ?
ಶಿವಮೊಗ್ಗ ವಿಮಾನ ನಿಲ್ದಾಣದಿಂದ ಇಂದಿನಿಂದ ಮತ್ತೊಂದು ವಿಮಾನ ಹಾರಾಟ ಆರಂಭವಾಗಿದೆ. ಶಿವಮೊಗ್ಗ-ಚೆನ್ನೈ ಹಾಗೂ ಶಿವಮೊಗ್ಗ-ಹೈದರಾಬಾದ್‌ಗೆ ನೂತನ ವಿಮಾನ ಹಾರಾಟಕ್ಕೆ ಸಂಸದ ಬಿ.ವೈ.ರಾಘವೇಂದ್ರ ಹಸಿರು ನಿಶಾನೆ ತೋರಿದ್ದಾರೆ. ಆ ಮೂಲಕ ಶಿವಮೊಗ್ಗ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದ್ದಾರೆ.
Updated on: Oct 10, 2024 | 4:54 PM

ಶಿವಮೊಗ್ಗ ವಿಮಾನ ನಿಲ್ದಾಣದಿಂದ ಮತ್ತೊಂದು ನೂತನ ವಿಮಾನ ಹಾರಾಟ ಆರಂಭಿಸಲಿದೆ. ಆ ಮೂಲಕ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ.

ಇಂದಿನಿಂದ ಶಿವಮೊಗ್ಗ ಏರ್ಪೋರ್ಟ್ನಿಂದ ಸ್ಪೈಸ್ಜೆಟ್ ವಿಮಾನ ಶಿವಮೊಗ್ಗ-ಚೆನ್ನೈ ಹಾಗೂ ಶಿವಮೊಗ್ಗ-ಹೈದರಾಬಾದ್‌ಗೆ ಹಾರಾಟ ನಡೆಸಲಿದೆ.

ಈ ನೂತನ ವಿಮಾನ ಹಾರಾಟಕ್ಕೆ ಸಂಸದ ಬಿ.ವೈ.ರಾಘವೇಂದ್ರ ಇಂದು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಿದ್ದಾರೆ. ಜೊತೆಗೆ ಸಂಸ್ಥೆ ಸಿಬ್ಬಂದಿಗಳಿಗೆ ಮತ್ತು ಪ್ರಯಾಣಿಕರಿಗೆ ಶುಭ ಹಾರೈಸಿದ್ದಾರೆ.

ಉಡಾನ್ ಯೋಜನೆಯಡಿ ಈ ವಿಮಾನಯಾನ ಆರಂಭವಾಗಿದೆ. ನೂತನ ವಿಮಾನ ಹಾರಾಟ ಉದ್ಘಾಟಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ಈ ಹೊಸ ನೇರ ಮಾರ್ಗವು ಪ್ರಾದೇಶಿಕ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಕಡಿಮೆ ಸಮಯದಲ್ಲಿ ಎರಡು ನಗರಗಳಿಗೆ ತಲುಪಲು ಅನುಕೂಲಕರವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.

ಇನ್ನು ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಸಚಿವ ಕಿಂಜರಾಪು ರಾಮ್ ಮೋಹನ್ ನಾಯ್ಡು ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಚೆನ್ನೈನಿಂದ ಪ್ರತಿದಿನ ಬೆಳಿಗ್ಗೆ 10.40ಕ್ಕೆ ಹೊರಡುವ ವಿವಾನ ಮಧ್ಯಾಹ್ನ 12.10ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತದೆ. ಶಿವಮೊಗ್ಗದಿಂದ ಹೈದರಾಬಾದ್‌ಗೆ ತೆರಳುವ ವಿಮಾನಗಳು ಮಧ್ಯಾಹ್ನ 12.35ಕ್ಕೆ ಹೊರಡಲಿದ್ದು, 2.05 ಕ್ಕೆ ಹೈದರಾಬಾದ್ ತಲುಪಲಿದೆ. ಹೈದರಾಬಾದ್‌ನಿಂದ ಹಿಂತಿರುಗುವ ವಿಮಾನ ಮಧ್ಯಾಹ್ನ 2.40ಕ್ಕೆ ಹೊರಟು, ಸಂಜೆ 4.10ಕ್ಕೆ ಶಿವಮೊಗ್ಗ ತಲುಪುತ್ತದೆ. ಚೆನ್ನೈಗೆ ತೆರಳುವ ವಿಮಾನ ಶಿವಮೊಗ್ಗದಿಂದ ಸಂಜೆ 4.25ಕ್ಕೆ ಹೊರಟು 5.55ಕ್ಕೆ ತಲುಪುತ್ತದೆ.



