ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಚಿತ್ರವನ್ನು ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶಿಸಿದ್ದಾರೆ. ಈ ಚಿತ್ರ ಸಂಕ್ರಾಂತಿ ಪ್ರಯುಕ್ತ ಜನವರಿ 12ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ಗುಂಟೂರಿನಲ್ಲಿ ನಡೆಯಿತು.
ಈ ಚಿತ್ರದಲ್ಲಿ ಮಹೇಶ್ ಬಾಬುಗೆ ಜೊತೆಯಾಗಿ ಶ್ರೀಲೀಲಾ ಹಾಗೂ ಮೀನಾಕ್ಷಿ ಚೌಧರಿ ನಟಿಸಿದ್ದಾರೆ.ಈ ಚಿತ್ರಕ್ಕೆ ಎಸ್ ಥಮನ್ ಸಂಗೀತ ನೀಡಿದ್ದಾರೆ. ಈಗಾಗಲೇ ಬಿಡುಗಡೆಯಾದ ಹಾಡು ಹಾಗೂ ಟ್ರೇಲರ್ ಗಮನ ಸೆಳೆದಿದೆ.
ಈ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಗುಂಟೂರಿನಲ್ಲಿ ನಡೆಯಿತು. ಟಾಲಿವುಡ್ ನಿರ್ಮಾಪಕ ದಿಲ್ ರಾಜು ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿದ್ದರು. ಇಡೀ ತಂಡ ಕಾರ್ಯಕ್ರಮದಲ್ಲಿ ಹಾಜರಿ ಹಾಕಿತ್ತು.
‘ಗುಂಟೂರು ಖಾರಂ’ ಪ್ರೀ ರಿಲೀಸ್ ಈವೆಂಟ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಮಹೇಶ್ ತುಂಬಾ ಸಿಂಪಲ್ ಆಗಿ ಈ ಸಮಾರಂಭಕ್ಕೆ ಬಂದಿದ್ದರು. ಈ ಮೂಲಕ ಅವರು ಸಖತ್ ಇಷ್ಟ ಆದರು.
ಮಹೇಶ್ ಅವರ ಸರಳತೆ ಮತ್ತೊಮ್ಮೆ ಅಭಿಮಾನಿಗಳನ್ನು ಹುಬ್ಬೇರಿಸುವಂತೆ ಮಾಡಿದೆ. ಈ ಸಮಾರಂಭದಲ್ಲಿ ತಂದೆಯನ್ನು ನೆನೆದು ಮಹೇಶ್ ಬಾಬು ಭಾವುಕರಾದರು. ಈ ಸಿನಿಮಾ ಗೆಲ್ಲಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
Published On - 10:31 am, Wed, 10 January 24