ಹಾಟ್ ಆಗಿ ಬಟ್ಟೆ ಧರಿಸುವ ಮೂಲಕ ನಟಿ ಉರ್ಫಿ ಜಾವೇದ್ ಅವರು ಸುದ್ದಿ ಆಗುತ್ತಾರೆ. ಅನೇಕ ಬಾರಿ ಅವರು ಟ್ರೋಲ್ ಆಗಿದ್ದುಂಟು. ಆದರೂ ಉರ್ಫಿ ಹಾಟ್ನೆಸ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.
ಇತ್ತೀಚೆಗೆ ಉರ್ಫಿ ಜಾವೇದ್ ಅವರು ಒಂದು ಮ್ಯೂಸಿಕ್ ವೀಡಿಯೋದಲ್ಲಿ ನಟಿಸಿದ್ದಾರೆ. ‘ಹಾಯ್ ಹಾಯ್ ಯೇ ಮಜ್ಬೂರಿ..’ ಗೀತೆಯ ರಿಮಿಕ್ಸ್ ಆಗಿರುವ ಈ ಹಾಡಿನಲ್ಲಿ ಅವರು ಹಾಟ್ ಆಗಿ ಸೀರೆ ಉಟ್ಟಿದ್ದಾರೆ.
ಉರ್ಫಿ ಜಾವೇದ್ ಅವರು ಈ ರೀತಿ ಬಟ್ಟೆ ಧರಿಸುವ ಮೂಲಕ ಅಶ್ಲೀಲವಾಗಿ ನಡೆದುಕೊಂಡಿದ್ದಾರೆ ಎಂದು ಕೇಸ್ ಹಾಕಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಉರ್ಫಿ ಜಾವೇದ್ ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ.
ಯಾರು ಎಷ್ಟೋ ಟ್ರೋಲ್ ಮಾಡಿದರೂ ಉರ್ಫಿ ಜಾವೇದ್ ಅವರು ತಲೆ ಕೆಡಿಸಿಕೊಂಡವರಲ್ಲ. ಪ್ರತಿ ದಿನ ಅವರು ಚಿತ್ರ-ವಿಚಿತ್ರವಾದ ಬಟ್ಟೆಗಳನ್ನು ಧರಿಸಿ ಪೋಸ್ ನೀಡುತ್ತಾರೆ. ಅವರ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತದೆ.
ಬಿಗ್ ಬಾಸ್ ಒಟಿಟಿಯಲ್ಲಿ ಸ್ಪರ್ಧಿಸಿದ ಬಳಿಕ ಉರ್ಫಿ ಜಾವೇದ್ ಅವರ ಖ್ಯಾತಿ ಹೆಚ್ಚಿತು. ಈಗ ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ‘ಹಾಯ್ ಹಾಯ್ ಏ ಮಜ್ಬೂರಿ..’ ಹಾಡು 85 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ.