- Kannada News Photo gallery 'He Didn't sit next to me': Sachin Tendulkar revealed an interesting fact about MS Dhoni
‘ಅವರು ನನ್ನ ಪಕ್ಕ ಕುಳಿತುಕೊಳ್ಳುತ್ತಿರಲಿಲ್ಲ’: ಧೋನಿ ಬಗ್ಗೆ ಕುತೂಹಲಕಾರಿ ಸಂಗತಿ ಬಿಚ್ಚಿಟ್ಟ ಸಚಿನ್ ತೆಂಡೂಲ್ಕರ್
ಐಪಿಎಲ್ 2024 ರ ಮೊದಲ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಿತು. ಧೋನಿ ಮತ್ತು ಕೊಹ್ಲಿ ತಂಡ ಮುಖಾಮುಖಿಯಾಗಿದೆ. ಆದರೆ ಪಂದ್ಯಕ್ಕೂ ಮುನ್ನ ಸಚಿನ್ ತೆಂಡೂಲ್ಕರ್ ಐಪಿಎಲ್ ಪಂದ್ಯ ಆಯೋಜಕರೊಂದಿಗೆ ಮಾತನಾಡಿದ್ದು, ಎಂಎಸ್ ಧೋನಿ ಬಗ್ಗೆ ಕೆಲ ಕುತೂಹಲಕಾರಿ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.
Updated on:Mar 22, 2024 | 11:09 PM

ಐಪಿಎಲ್ ಪಂದ್ಯ ಆರಂಭಕ್ಕೂ ಮುನ್ನ ಜಿಯೋ ಸಿನಿಮಾ ಆಯೋಜಕರೊಂದಿಗೆ ಮಾತನಾಡಿದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಎಂಎಸ್ ಧೋನಿ ಅವರೊಂದಿಗಿನ ಆರಂಭಿಕ ದಿನಗಳನ್ನು ಹಂಚಿಕೊಂಡಿದ್ದಾರೆ.

ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರು ಅತ್ಯಂತ ನಾಚಿಕೆ ಸ್ವಭಾವದವರಾಗಿದ್ದರು. ಹೀಗಾಗಿ ಅವರು ಆರಂಭಿಕ ದಿನಗಳಲ್ಲಿ ನನ್ನೊಂದಿಗೆ ಹೆಚ್ಚಾಗಿ ಮಾತನಾಡುತ್ತಿರಲ್ಲಿ ಎಂಬ ಕುತೂಹಕಾರಿ ವಿಚಾರಗಳನ್ನು ಸಚಿನ್ ತೆಂಡೂಲ್ಕರ್ ಬಿಚ್ಚಿಟ್ಟಿದ್ದಾರೆ.

ಧೋನಿ ಅವರು ಇತರೆ ಕ್ರಿಕೆಟಿಗರಿಗೆ ತಮ್ಮ ಬೋರ್ಡಿಂಗ್ ಪಾಸ್ ಅನ್ನು ನೀಡುತ್ತಿದ್ದರು. ಹಾಗಾಗಿ ಅವರು ನನ್ನ ಪಕ್ಕದಲ್ಲಿ ಕುಳಿತುಕೊಂಡಿಲ್ಲ ಎಂದು ಹೇಳಿದ್ದಾರೆ.

ಈ ವಿಚಾರ ಸಚಿನ್ ತೆಂಡೂಲ್ಕರ್ ಅವರಿಗೆ ಕೆಲ ವರ್ಷಗಳ ಬಳಿಕ ಗೊತ್ತಾಗಿದೆ. ಅನೇಕ ಆಟಗಾರರು ನನಗೆ 'ಅವರು (ಧೋನಿ) ನಿಮ್ಮ ಪಕ್ಕದಲ್ಲಿ ಆಸನವನ್ನು ಪಡೆಯುತ್ತಾರೆ, ಆದರೆ ಅವರು ಸದ್ದಿಲ್ಲದೆ ಇತರೆ ಆಟಗಾರರಿಗೆ ಬೋರ್ಡಿಂಗ್ ಪಾಸ್ ನೀಡುವುದರೊಂದಿಗೆ ತಮ್ಮ ಜಾಗವನ್ನು ಬದಲಾಯಿತ್ತಾರೆ ಎಂದು ಹೇಳಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಾಯಕತ್ವದಿಂದ ಕೆಳಗಿಳಿಯುವ ಎಂಎಸ್ ಧೋನಿ ನಿರ್ಧಾರದ ಬಗ್ಗೆ ಭಾರತದ ದಂತಕಥೆ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಸಹ ಮಾತನಾಡಿದ್ದಾರೆ.
Published On - 11:07 pm, Fri, 22 March 24
























