ಬೇಸಿಗೆ ಆರಂಭವಾಗಿದೆ. ಬೇಸಿಗೆ ಸಮಯದಲ್ಲಿ ಹೆಚ್ಚಾಗಿ ಹಿಟ್ ಆಗುತ್ತದೆ. ಇದರಿಂದ ಆರೋಗ್ಯದಲ್ಲಿ ಏರುಪೇರಾಗುತ್ತದೆ.
ಇದಕ್ಕೆ ಪ್ರತಿ ದಿನ ಮೊಸರು ಸೇವಿಸುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು.
Mar 17, 2023 | 7:00 AM
ಮೊಸರಿನಲ್ಲಿ ಆರೋಗ್ಯಕರ ಪೋಷಕಾಂಶಗಳು ಅಡಗಿವೆ. ಪ್ರತಿನಿತ್ಯ ಮೊಸರು ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲಿಯೂ
ಬೇಸಿಗೆಯಲ್ಲಿ ಪ್ರತಿದಿನ ಮೊಸರು ಸೇವಿಸಿದರೆ ದೇಹಕ್ಕೆ ಔಷಧೀಯ ಗುಣಗಳು ಲಭಿಸುತ್ತವೆ.
ಮೊಸರು ತಿನ್ನುವುದರಿಂದ ಆರೋಗ್ಯ ಸುಧಾರಿಸುವುದರ ಜೊತೆಗೆ ಅನೇಕ ಪ್ರಯೋಜನಗಳಿವೆ.
1 / 5
ಪ್ರತಿನಿತ್ಯ ಮೊಸರು ಸೇವಿಸುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಏಕೆಂದರೆ ಇದರಲ್ಲಿರುವ
ಫಾಸ್ಫರಸ್ ಮತ್ತು ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸಲು ಸಹಕಾರಿಯಾಗಿದೆ.
2 / 5
ಮೊಸರಿನಲ್ಲಿ ಸತು ಮತ್ತು ವಿಟಮಿನ್-ಇ ಇರುವುದರಿಂದ ಇದು ತ್ವಚೆಯನ್ನು ಹೊಳೆಯುವಂತೆ
ಮಾಡುತ್ತದೆ. ಪ್ರತಿನಿತ್ಯ ಮೊಸರು ತಿನ್ನುವುದರಿಂದ ತ್ವಚೆಯು ಸುಂದರವಾಗಿ ಕಾಣುತ್ತದೆ.
3 / 5
ಮೊಸರು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುವ ಅನೇಕ ಗುಣಗಳನ್ನು ಹೊಂದಿದೆ.
ಹಾಗಾಗಿ ಮೊಸರು ತಿನ್ನವವರಿಗೆ ಹೊಟ್ಟೆ ಸಂಬಂಧಿಸಿದ ಸಮಸ್ಯೆಗಳು ಬರುವುದಿಲ್ಲ.
4 / 5
ಸ್ಥೂಲಕಾಯದಿಂದ ಬಳಲುತ್ತಿರುವವರು ಮೊಸರು ಸೇವಿಸುವಂತೆ ತಜ್ಞರು ಸಲಹೆ ನೀಡುತ್ತಾರೆ.
ದಿನನಿತ್ಯ ಮೊಸರು ತಿನ್ನುವುದರಿಂದ ತೂಕವನ್ನು ಕಳೆದುಕೊಳ್ಳಬಹುದಾಗಿದೆ.