Shriya Saran: ‘ಕಬ್ಜ’ ನಾಯಕಿ ಶ್ರೀಯಾ ಶರಣ್ ಕುಟುಂಬ ಹಾಗೂ ಅವರ ಬಗೆಗಿನ ಅಪರೂಪದ ವಿಚಾರಗಳ ಬಗ್ಗೆ ಇಲ್ಲಿದೆ ಮಾಹಿತಿ

Rajesh Duggumane

|

Updated on: Mar 17, 2023 | 10:09 AM

ಶ್ರೀಯಾ ಶರಣ್ ಜನಿಸಿದ್ದು ಉತ್ತರ ಪ್ರದೇಶದ ಹರಿದ್ವಾರದಲ್ಲಿ. 2001ರಲ್ಲಿ ತೆರೆಗೆ ಬಂದ ತೆಲುಗಿನ ‘ಇಷ್ಟಂ’ ಅವರ ಮೊದಲ ಸಿನಿಮಾ.

Mar 17, 2023 | 10:09 AM
‘ಕಬ್ಜ’ ಚಿತ್ರದ ನಾಯಕಿ ಶ್ರೀಯಾ ಶರಣ್ ಅವರು ಮಧುಮತಿ ಹೆಸರಿನ ಪಾತ್ರ ಮಾಡಿದ್ದಾರೆ. ಈ ಚಿತ್ರ ಕನ್ನಡ ಸೇರಿ ಐದು ಭಾಷೆಗಳಲ್ಲಿ ತೆರೆಗೆ ಬಂದಿದೆ. ಶ್ರೀಯಾ ಶರಣ್ ಖಾಸಗಿ ಬದುಕಿನ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ಅವರ ಬಗ್ಗೆ ಗೊತ್ತಿರದ ವಿಚಾರಗಳು ಸಾಕಷ್ಟಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

1 / 6
ಶ್ರೀಯಾ ಶರಣ್​ಗೆ ಈಗ 40 ವರ್ಷ ವಯಸ್ಸು. ಈ ವಯಸ್ಸಿನಲ್ಲಿ ಅವರು ಯುವ ನಟಿಯರನ್ನೂ ನಾಚಿಸುವಂತಿದ್ದಾರೆ. ಅವರು ಜನಿಸಿದ್ದು ಉತ್ತರ ಪ್ರದೇಶದ ಹರಿದ್ವಾರದಲ್ಲಿ. 2001ರಲ್ಲಿ ತೆರೆಗೆ ಬಂದ ತೆಲುಗಿನ ‘ಇಷ್ಟಂ’ ಅವರ ಮೊದಲ ಸಿನಿಮಾ. ನಂತರ ಅವರು ಸಾಲು ಸಾಲು ತೆಲುಗು ಸಿನಿಮಾಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡರು.

2 / 6
ನಂತರ ಶ್ರೀಯಾಗೆ ಹಿಂದಿ, ತಮಿಳು ಸಿನಿಮಾಗಳಿಂದಲೂ ಆಫರ್​ಗಳು ಬರೋಕೆ ಆರಂಭ ಆದವು. ಶ್ರೀಯಾ ಹೆಚ್ಚು ಕಾಣಿಸಿಕೊಂಡಿದ್ದು ಟಾಲಿವುಡ್​ನಲ್ಲಿ. ಕನ್ನಡದಲ್ಲಿ ಪುನೀತ್ ರಾಜ್​ಕುಮಾರ್ ನಟನೆಯ ‘ಅರಸು’ ಸಿನಿಮಾದಲ್ಲಿ ಶ್ರೀಯಾ ಅವರು ಅತಿಥಿ ಪಾತ್ರ ಮಾಡಿ ಗಮನ ಸೆಳೆದಿದ್ದರು. ಇದು ಅವರ ಮೊದಲ ಕನ್ನಡ ಸಿನಿಮಾ. ನಂತರ ಒಂದು ಕನ್ನಡ ಸಿನಿಮಾದಲ್ಲಿ ಅವರು ನಟಿಸಿದ್ದರು.  ‘ಕಬ್ಜ’ ಮೂಲಕ ಮತ್ತೆ ಕನ್ನಡಕ್ಕೆ ಬಂದಿದ್ದಾರೆ.

3 / 6
ಶ್ರೀಯಾ ಅವರು ವೈಯಕ್ತಿಕ ಜೀವನದ ಬಗ್ಗೆ ಯಾವುದೇ ವಿಚಾರಗಳನ್ನು ಹೇಳಿಕೊಳ್ಳಲು ಇಷ್ಟಪಡುವುದಿಲ್ಲ.  ಶ್ರೀಯಾ ಅವರು ರಷ್ಯಾ ಮೂಲದ ಆ್ಯಂಡ್ರೇ ಕೊಸ್ಚೆವ್ ಅವರ ಜತೆ ಡೇಟಿಂಗ್ ಮಾಡುತ್ತಿದ್ದರು. ಆದರೆ, ಇದನ್ನು ಅವರು ಅಲ್ಲಗಳೆದಿದ್ದರು.

4 / 6
2018ರಲ್ಲಿ ಇಬ್ಬರೂ ಮದುವೆ ಆದರು. ಶ್ರೀಯಾ ಶರಣ್​ಗೆ 2021ರ ಜನವರಿ 10ರಂದು ಹೆಣ್ಣು ಮಗು ಜನಿಸಿತ್ತು. ಅದೇ ವರ್ಷ ಅಕ್ಟೋಬರ್ 12ರಂದು ಈ ವಿಚಾರವನ್ನು ಶ್ರೀಯಾ ರಿವೀಲ್ ಮಾಡಿದ್ದರು.

5 / 6
‘ಕೆಜಿಎಫ್​’ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾದಿಂದ ನಟಿ ಶ್ರೀನಿಧಿ ಶೆಟ್ಟಿ ಖ್ಯಾತಿ ಹೆಚ್ಚಿದೆ. ‘ಕಬ್ಜ’ ಚಿತ್ರ ಕೂಡ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಿದ್ದು, ಈ ಸಿನಿಮಾದಿಂದ ಶ್ರೀಯಾ ಖ್ಯಾತಿ ಹೆಚ್ಚುವ ಸಾಧ್ಯತೆ ದಟ್ಟವಾಗಿದೆ.

6 / 6

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada