- Kannada News Photo gallery Health Tips: Those who sleep with mobile phones near the bed, beware! kannada News
Health Tips: ಹಾಸಿಗೆ ಬಳಿ ಮೊಬೈಲ್ ಇಟ್ಟುಕೊಂಡು ಮಲಗುವವರೇ ಎಚ್ಚರ!
ಮೊಬೈಲ್ ಪಕ್ಕದಲ್ಲಿ ಇಟ್ಟುಕೊಂಡು ಮಲಗುವ ಅಭ್ಯಾಸವಿದ್ದರೆ ಮೊದಲು ಇದನ್ನು ಬಿಟ್ಟುಬಿಡಿ. ಏಕೆಂದರೆ ಈ ಅಭ್ಯಾಸ ಒಳ್ಳೆಯದಲ್ಲ. ಇದರಿಂದ ಅನೇಕ ರೀತಿಯ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಎಂದು ಸಂಶೋಧನೆಗಳು ಎಚ್ಚರಿಕೆ ನೀಡಿದೆ.
Updated on: Jul 20, 2024 | 3:36 PM

ಮೊಬೈಲ್ ಪಕ್ಕದಲ್ಲಿ ಇಟ್ಟುಕೊಂಡು ಮಲಗುವ ಅಭ್ಯಾಸವಿದ್ದರೆ ಮೊದಲು ಇದನ್ನು ಬಿಟ್ಟುಬಿಡಿ. ಏಕೆಂದರೆ ಈ ಅಭ್ಯಾಸ ಒಳ್ಳೆಯದಲ್ಲ. ಇದರಿಂದ ಅನೇಕ ರೀತಿಯ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಎಂದು ಸಂಶೋಧನೆಗಳು ಎಚ್ಚರಿಕೆ ನೀಡಿದೆ.

ಇತ್ತೀಚಿನ ದಿನಗಳಲ್ಲಿ ಬಂಜೆತನ ಹೆಚ್ಚುತ್ತಿರುವುದಕ್ಕೆ ಮೊಬೈಲ್ ಪಕ್ಕದಲ್ಲಿ ಇಟ್ಟುಕೊಂಡು ಮಲಗುವ ಅಭ್ಯಾಸವೂ ಒಂದು ಕಾರಣವಾಗಿರಬಹುದು ಎಂದು ಸಂಶೋಧನೆಗಳು ಹೇಳುತ್ತವೆ. ರಾತ್ರಿ ಹೊತ್ತು ಹೆಚ್ಚು ಸಮಯದ ವರೆಗೆ ಮೊಬೈಲ್ ನೋಡುತ್ತಾ ಮಲಗುವುದು, ಪಕ್ಕದಲ್ಲಿಯೇ ಇಟ್ಟುಕೊಂಡು ನಿದ್ರೆ ಹೋಗುವುದು ಸಾಮಾನ್ಯವಾಗಿದ್ದು ಇದು ಸಂತಾನೋತ್ಪತ್ತಿಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ತಜ್ಞರು ಹೇಳುತ್ತಾರೆ.

ಇದರ ಜೊತೆಗೆ, ಈ ಅಭ್ಯಾಸಗಳು ಪುರುಷರಲ್ಲಿ ವೀರ್ಯದ ಗಣತಿಯನ್ನು ಕಡಿಮೆ ಮಾಡುವುದರೊಂದಿಗೆ ಅವುಗಳ ಗುಣಮಟ್ಟವನ್ನು ತಗ್ಗಿಸಬಹುದು, ಹಾಗಾಗಿ ಈ ಅಭ್ಯಾಸ ಪುರುಷರಲ್ಲಿನ ಬಂಜೆತನಕ್ಕೆ ಪ್ರಮುಖ ಕಾರಣವಾಗಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಹಾಗಾಗಿ ಮೊಬೈಲ್ ವಿಕಿರಣದಿಂದ ದೂರವಿರುವುದು ಒಳ್ಳೆಯದು.

ಇನ್ನು ಗರ್ಭಿಣಿಯರು ಮೊಬೈಲ್ ಅನ್ನು ಪಕ್ಕದಲ್ಲಿ ಇಟ್ಟುಕೊಂಡು ಮಲಗುವುದರಿಂದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಒತ್ತಡ, ಆತಂಕ ಜಾಸ್ತಿ ಆಗುತ್ತದೆ. ಜೊತೆಗೆ ನಿದ್ರಾಹೀನತೆಯ ತೊಂದರೆ ಕೂಡ ಉಂಟಾಗಬಹುದು. ಇದಲ್ಲದೆ ಇದು ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು.

ಮೊಬೈಲ್ ಪಕ್ಕದಲ್ಲಿ ಇಟ್ಟುಕೊಂಡು ಮಲಗುವುದರಿಂದ ತಲೆಗೆ ಸಂಬಂಧಪಟ್ಟ ಕ್ಯಾನ್ಸರ್ ಬೆಳವಣಿಗೆ ಆಗುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ. ಹಾಗಾಗಿ ನೀವು ಮಲಗುವಾಗ ಮೊಬೈಲ್ ಅನ್ನು ಸ್ವಲ್ಪ ದೂರದಲ್ಲಿ ಇರಿಸಿ ಮಲಗುವುದು ಒಳ್ಳೆಯದು. ಇದರ ಬದಲು ರಾತ್ರಿ ಸಮಯದಲ್ಲಿ ಒಂದು ಒಳ್ಳೆಯ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ. ಇದರಿಂದ ನಿದ್ರೆಯೂ ಚೆನ್ನಾಗಿ ಬರುತ್ತದೆ ಜೊತೆಗೆ ಒಂದು ಒಳ್ಳೆಯ ಅಭ್ಯಾಸ ರೂಢಿಯಾಗುತ್ತದೆ.



















