Kannada News Photo gallery Heavy Rain in bengaluru Creates huge problem for market business and traffic jam in Bangalore City, Kannada News
Bengaluru Rain: ಬೆಂಗಳೂರು ಮಳೆ ನಿಂತರೂ ಅವಾಂತರ ನಿಂತಿಲ್ಲ, ಕರೆಯಂತಾದ ರಸ್ತೆಗಳು, ಹಲವೆಡೆ ಟ್ರಾಫಿಕ್
TV9 Web | Updated By: Digi Tech Desk
Updated on:
Aug 12, 2024 | 10:35 AM
ಬೆಂಗಳೂರಲ್ಲಿ ರಾತ್ರಿಯಿಡೀ ಸುರಿದ ಮಳೆ ಸರಣಿ ಅವಾಂತರಗಳನ್ನು ಸೃಷ್ಟಿಸಿದೆ. ಎಲ್ಲೆಲ್ಲೂ ನೀರು, ರಸ್ತೆಗಳು ಹೊಳೆಯಂತಾಗಿದ್ದು, ಅಂಡರ್‌ಪಾಸ್‌ಗಳು ಜಲಾವೃತಗೊಂಡಿವೆ. ವಾಹನ ಸವಾರರು ಪರದಾಡುವಂತಾಗಿದೆ. ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ಮುಭಾಗದ ರಸ್ತೆ ಮುಳುಗಡೆಯಾಗಿದೆ. ಸುಮಾರು 2 ಅಡಿಯಷ್ಟು ನೀರು ಆವರಿಸಿದೆ.
1 / 7
ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ರಾತ್ರಿ 2 ಗಂಟೆಗೆ ಶುರುವಾದ ಮಳೆ ಮುಂಜಾನೆವರೆಗೂ ಅಬ್ಬರಿಸಿ ಬೊಬ್ಬಿರಿದಿದೆ. ಭಾರಿ ಮಳೆಯಿಂದ ಕೆ.ಆರ್.ಮಾರ್ಕೆಟ್ ಜಲಮಯವಾಗಿದೆ.
2 / 7
ಫ್ಲವರ್ ಮಾರ್ಕೆಟ್ನಲ್ಲಂತೂ ಅಕ್ಷರಶಃ ನರಕ ದರ್ಶನ ತೋರಿದೆ. ಹೂವುಗಳು ಕೆರೆಯಂತೆ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ನಸುಕಿನ ವೇಳೆಯಿಂದಲೇ ಹೂವಿನ ವ್ಯಾಪಾರಕ್ಕೆ ಬಂದಿದ್ದ ವ್ಯಾಪಾರಿಗಳು ಕಂಗಾಲಾಗಿದ್ದಾರೆ.
3 / 7
ಒಕಳಿಪುರಂನ ಅಂಡರ್ಪಾಸ್ಗೆ ನೀರು ನುಗ್ಗಿ, ವಾಹನ ಸವಾರರು ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿತ್ತು. ನೀರು ನಿಂತದ್ದ ರಸ್ತೆಯಲ್ಲಿಯೇ ಆ್ಯಂಬುಲೆನ್ಸ್ ಸಿಲುಕಿಕೊಂಡಿತ್ತು. ಪೇಷಂಟ್ ಇಲ್ಲದಿರೋದ್ರಿಂದ, ನೀರಿನ ಪ್ರಮಾಣ ಕಡಿಮೆ ಆದ್ಮೇಲೆ ಆ್ಯಂಬುಲೆನ್ಸ್ ತೆರಳಿತು.
4 / 7
ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ಮುಭಾಗದ ರಸ್ತೆ ಮುಳುಗಡೆಯಾಗಿದೆ. ಸುಮಾರು 2 ಅಡಿಯಷ್ಟು ನೀರು ಆವರಿಸಿತ್ತು. ಗುಂಡಿಗಳು ಯಾವುದೋ, ರಸ್ತೆಯಾವುದೇ ಒಂದು ಕಾಣದ ಪರಿಸ್ಥಿತಿ ನಿರ್ಮಾಣವಾಗಿತ್ತು. ವಾಹನ ಸವಾರರು ಭಯದಲ್ಲಿಯೇ ಸಂಚಾರ ಮಾಡುತ್ತಿದ್ದ ದೃಶ್ಯ ಕಂಡುಬಂತು.
5 / 7
ರಾತ್ರೋರಾತ್ರಿ ಬೆಂಗಳೂರಲ್ಲಿ ದಿಢೀರ್ ಮಳೆ ಸುರಿದಿದ್ದು, ಮನೆಯಿಂದ ಹೊರಬಂದವರು ನಲುಗಿ ಹೋಗಿದ್ದಾರೆ. ಮೆಜೆಸ್ಟಿಕ್, ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಶಾಂತಿನಗರ, ವಿಧಾನಸೌಧ, ಶಿವಾಜಿನಗರ, ಕಾರ್ಪೊರೇಷನ್ ಸರ್ಕಲ್, ಟೌನ್ಹಾಲ್, ಜಯನಗರ ಸೇರಿ ಹಲವೆಡೆ ಅವಾಂತರಗಳನ್ನು ಸೃಷ್ಟಿಸಿದೆ.
6 / 7
ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ರಸ್ತೆ ಮೇಲೆ ನೀರು ನಿಂತಿದ್ದು ಸುಮಾರು 1 ಕಿ.ಲೋ ಮೀಟರ್ ಟ್ರಾಫಿಕ್ ಜಾಮ್ ಆಗಿತ್ತು. ಹೊಸರು ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಆಗಿದ್ದು ಸವಾರರು ಪರದಾಡುತ್ತಿದ್ದಾರೆ.
7 / 7
ದಾಸನಪುರ APMC ತರಕಾರಿ ಮಾರ್ಕೆಟ್ಗೆ ಮಳೆ ನೀರು ನುಗ್ಗಿದೆ. ಎಂಪಿಎಂಸಿ ತರಕಾರಿ ಮಾರ್ಕೆಟ್ ಜಲಾವೃತಗೊಂಡಿದ್ದು ವ್ಯಾಪಾರ ವಹಿವಾಟು ನಡೆಸಲಾಗದೆ ರೈತರು ಕಂಗಾಲಾಗಿದ್ದಾರೆ. ಮಳೆಯ ನೀರಿನಿಂದ ಎಪಿಎಂಸಿ ತರಕಾರಿ ಮಾರ್ಕೆಟ್ನಲ್ಲಿ ಅವ್ಯವಸ್ಥೆ.
Published On - 9:59 am, Mon, 12 August 24