
ದೀಪಿಕಾ ಪಡುಕೋಣೆ ನಟನೆಯ ‘ಗೆಹರಾಯಿಯಾ’ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆದ ಈ ಸಿನಿಮಾ ಬಗ್ಗೆ ಕೆಲವರು ಟೀಕೆ ಮಾಡಿದರೆ, ಇನ್ನೂ ಕೆಲವರು ಸಿನಿಮಾವನ್ನು ಕೊಂಡಾಡುತ್ತಿದ್ದಾರೆ.

ದೀಪಿಕಾ ನಟನೆ ಬಗ್ಗೆ ಅವರ ಪತಿ, ನಟ ರಣವೀರ್ ಸಿಂಗ್ ಮೆಚ್ಚುಗೆ ಸೂಚಿಸಿದ್ದಾರೆ. ಸಿನಿಮಾ ರಿಲೀಸ್ ಆದ ದಿನವೇ ಚಿತ್ರದ ಬಗ್ಗೆ, ದೀಪಿಕಾ ನಟನೆ ಬಗ್ಗೆ ಸಂತಸ ಹೊರಹಾಕಿದ್ದರು ರಣವೀರ್. ಆದರೆ, ದೀಪಿಕಾ ಕುಟುಂಬದ ಎಲ್ಲರೂ ಈ ಚಿತ್ರವನ್ನು ಇಷ್ಟೇ ಕೂಲ್ ಆಗಿ ಸ್ವೀಕರಿಸಿಲ್ಲ.

‘ಗೆಹರಾಯಿಯಾ’ ಸಿನಿಮಾದಲ್ಲಿ ದೀಪಿಕಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಮದುವೆ ಆದ ನಂತರದಲ್ಲಿ ಈ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳೋಕೆ ಬಹುತೇಕರು ಹಿಂದೇಟು ಹಾಕುತ್ತಾರೆ. ಆದರೆ, ದೀಪಿಕಾ ಆ ರೀತಿ ಮಾಡಿಲ್ಲ. ಅವರು ಈ ಪಾತ್ರವನ್ನು ಒಪ್ಪಿ, ಮಾಡಿದ್ದಾರೆ.

‘ನನ್ನ ಪಾತ್ರ ಏನೆಲ್ಲ ಅನುಭವಿಸುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ನನ್ನ ಕುಟುಂಬದವರಿಗೆ ಸ್ವಲ್ಪ ಕಷ್ಟವಾಗಿತ್ತು. ನನ್ನ ಪಾತ್ರವನ್ನು ಅರಗಿಸಿಕೊಳ್ಳೋಕೆ ಅವರಿಂದ ಸಾಧ್ಯವಾಗಿಲ್ಲ. ಆದರೆ, ಅವರು ನನ್ನ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ ಎಂದಿದ್ದಾರೆ.

‘ಗೆಹರಾಯಿಯಾ’ ಸಿನಿಮಾದಲ್ಲಿ ಮಾನಸಿಕ ಆರೋಗ್ಯದ ಬಗ್ಗೆಯೂ ಸಂದೇಶ ನೀಡುವ ಕೆಲಸ ಮಾಡಲಾಗಿದೆ. ದೀಪಿಕಾ ಪಡುಕೋಣೆ ಈ ಮೊದಲು ಖಿನ್ನತೆಗೆ ಒಳಗಾಗಿದ್ದರು. ಈ ಬಗ್ಗೆ ಅವರು ಓಪನ್ ಆಗಿ ಮಾತನಾಡಿದ್ದು ಮಾತ್ರವಲ್ಲ, ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದ್ದರು. ಈ ಸಿನಿಮಾದಲ್ಲೂ ಅದೇ ರೀತಿಯ ಕೆಲಸ ಮಾಡಲಾಗಿದೆ.