Updated on: Jun 08, 2023 | 11:10 AM
ನಟಿ ರಮ್ಯಾ ಅವರು ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ. ಇದರ ಜೊತೆ ಜೊತೆಗೆ ಅವರು ಚಿತ್ರರಂಗದ ಅನೇಕ ಕಾರ್ಯಕ್ರಮಗಳಲ್ಲಿ ಹಾಜರಿ ಹಾಕುತ್ತಿದ್ದಾರೆ.
ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿಡಪ ಅವರ ಆರತಕ್ಷತೆಗೆ ರಮ್ಯಾ ಅವರು ಆಗಮಿಸಿದ್ದರು. ಕಿತ್ತಳೆ ಬಣ್ಣದ ಸೀರೆ ಉಟ್ಟು ಅವರು ರಿಸೆಪ್ಷನ್ಗೆ ಆಗಮಿಸಿದ್ದರು.
ಅಂಬರೀಷ್ ಕುಟುಂಬದ ಜೊತೆ ರಮ್ಯಾಗೆ ಒಳ್ಳೆಯ ಒಡನಾಟ ಇದೆ. ಸುಮಲತಾ ಅವರನ್ನು ಕಂಡರೆ ರಮ್ಯಾಗೆ ವಿಶೇಷ ಗೌರವ. ಅಭಿ ಜೊತೆ ಅವರಿಗೆ ಒಳ್ಳೆಯ ಗೆಳೆತನ ಇದೆ.
ಅಭಿಷೇಕ್ ಹಾಗೂ ಅವಿವಾಗೆ ರಮ್ಯಾ ವಿಶ್ ಮಾಡಿದ್ದಾರೆ. ಅವಿವಾ ಅವರನ್ನು ತಬ್ಬಿ ರಮ್ಯಾ ಶುಭಾಶಯ ತಿಳಿಸಿದ್ದಾರೆ.
ಆರತಕ್ಷತೆಗಾಗಿ ಉಟ್ಟ ಸೀರೆಯಲ್ಲಿ ತೆಗೆಸಿಕೊಂಡ ಫೋಟೋಗಳನ್ನು ರಮ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.
ಅನೇಕರು ಕಮೆಂಟ್ ಬಾಕ್ಸ್ನಲ್ಲಿ ‘ನೀವು ದೇವತೆ’ ಎಂದು ಕಮೆಂಟ್ ಹಾಕಿದ್ದಾರೆ. 12 ಗಂಟೆಯಲ್ಲಿ ಈ ಫೋಟೋ ಲಕ್ಷಾಂತರ ಲೈಕ್ಸ್ ಪಡೆದಿದೆ.