ಈ ವಾರ ಒಟಿಟಿಗೆ ಬಂದಿವೆ ಭರ್ಜರಿ ಸಿನಿಮಾಗಳು, ಎಲ್ಲಿ ನೋಡಬಹುದು?
OTT release this week: ಈ ವಾರ ಒಟಿಟಿಗೆ ಸೂಪರ್ ಹಿಟ್ ಸಿನಿಮಾಗಳು ಬಂದಿವೆ. ಅದರಲ್ಲೂ ಒಳ್ಳೆಯ ಕನ್ನಡ ಸಿನಿಮಾಗಳು ಒಟಿಟಿಗೆ ಬರುತ್ತಿಲ್ಲ ಎಂದು ದೂರುತ್ತಿದ್ದವರಿಗೆ ಈ ವಾರ ನಿರಾಸೆ ಆಗಲಿದೆ. ಏಕೆಂದರೆ ಎರಡು ದೊಡ್ಡ ಸಿನಿಮಾಗಳು ಈ ವಾರ ಒಟಿಟಿಗೆ ಬಂದಿವೆ. ಅದು ಮಾತ್ರವೇ ಅಲ್ಲದೆ ಪರ ಭಾಷೆಯ ಕೆಲವು ಆಸಕ್ತಿಕರ ಸಿನಿಮಾಗಳು, ವೆಬ್ ಸರಣಿಗಳು ಸಹ ಒಟಿಟಿಗೆ ಬಂದಿದ್ದು, ಅವುಗಳ ಪಟ್ಟಿ ಇಲ್ಲಿದೆ.
Updated on: Jan 24, 2026 | 3:23 PM

ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಚಿತ್ರಮಂದಿರಗಳಲ್ಲಿ ಇನ್ನೂ ಒಳ್ಳೆಯ ಪ್ರದರ್ಶನ ಕಾಣುತ್ತಿರುವಾಗಲೇ ಸಿನಿಮಾ ಒಟಿಟಿಗೆ ಕಾಲಿರಿಸಿದೆ. ‘ಮಾರ್ಕ್’ ಸಿನಿಮಾವನ್ನು ಜಿಯೋ ಹಾಟ್ಸ್ಟಾರ್ನಲ್ಲಿ ವೀಕ್ಷಿಸಬಹುದಾಗಿದೆ.

ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಒಟ್ಟಿಗೆ ನಟಿಸಿ, ಅರ್ಜುನ್ ಜನ್ಯ ನಿರ್ದೇಶನ ಮಾಡಿರುವ ‘45’ ಸಿನಿಮಾ ಚಿತ್ರಮಂದಿರದಲ್ಲೂ ‘ಮಾರ್ಕ್’ ಜೊತೆಗೆ ಬಿಡುಗಡೆ ಆಗಿತ್ತು. ಈಗ ಒಟಿಟಿಗೂ ‘ಮಾರ್ಕ್’ ಜೊತೆಗೆ ಬಂದಿದೆ. ಈ ಸಿನಿಮಾವನ್ನು ಜೀ5 ನಲ್ಲಿ ವೀಕ್ಷಿಸಬಹುದಾಗಿದೆ.

ಜಗದ್ವಿಖ್ಯಾತ ‘ಗೇಮ್ ಆಫ್ ಥ್ರೋನ್ಸ್’ ವೆಬ್ ಸರಣಿ ಪ್ರೀಕ್ವೆಲ್ ಎನ್ನಬಹುದಾದ ‘ನೈಟ್ ಆಫ್ ದಿ ಸೆವೆನ್ ಕಿಂಗ್ಡಮ್ಸ್’ ವೆಬ್ ಸರಣಿ ಇದೇ ವಾರ ಒಟಿಟಿಗೆ ಬಂದಿದೆ. ಜಿಯೋ ಹಾಟ್ಸ್ಟಾರ್ನಲ್ಲಿ ಹಲವು ಭಾಷೆಗಳಲ್ಲಿ ಇದನ್ನು ವೀಕ್ಷಿಸಬಹುದಾಗಿದೆ.

ಅಡಲ್ಟ್ ಕಾಮಿಡಿಯಿಂದ ಜನಪ್ರಿಯವಾಗಿರುವ ‘ಮಸ್ತಿ’ ಸಿನಿಮಾದ ನಾಲ್ಕನೇ ಭಾಗ ‘ಮಸ್ತಿ 4’ ಇದೇ ವಾರ ಒಟಿಟಿಗೆ ಬಂದಿದೆ. ಚಿತ್ರಮಂದಿರದಲ್ಲಿ ಅಷ್ಟೇನೂ ದೊಡ್ಡ ಯಶಸ್ವಿ ಆಗದಿದ್ದ ಈ ಸಿನಿಮಾ ಇದೀಗ ಜೀ5ನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಸಾಯಿ ಕುಮಾರ್ ಪುತ್ರ ಆದಿ ಸಾಯಿಕುಮಾರ್ ನಾಯಕನಾಗಿ ನಟಿಸಿರುವ ಮಿಸ್ಟ್ರಿ ಥ್ರಿಲ್ಲರ್ ಕತೆಯುಳ್ಳ ‘ಶಂಬಾಲ’ ಸಿನಿಮಾ ಇದೇ ವಾರ ಒಟಿಟಿಗೆ ಬಂದಿದೆ. ಈ ಸಿನಿಮಾವನ್ನು ತೆಲುಗಿನ ಆಹಾ ಒಟಿಟಿಯಲ್ಲಿ ವೀಕ್ಷಿಸಬಹುದಾಗಿದೆ.

ನಿಜ ಘಟನೆ ಆಧರಿಸಿದ ಕೋರ್ಟ್ ರೂಂ ಡ್ರಾಮಾ ಜಾನರ್ಗೆ ಸೇರಿದ ತಮಿಳು ಸಿನಿಮಾ ‘ಸಿರಾಯ್’ ಈ ವಾರ ಒಟಿಟಿಗೆ ಬಂದಿದೆ. ಒಳ್ಳೆಯ ವಿಮರ್ಶೆಗಳಿಂದ ಗಮನ ಸೆಳೆದಿರುವ ಈ ಸಿನಿಮಾ ಇದೀಗ ಜೀ5ನಲ್ಲಿ ಬಿಡುಗಡೆ ಆಗಲಿದೆ.

ಧನುಶ್, ಕೃತಿ ಸನೋನ್ ನಟನೆಯ ‘ತೇರೆ ಇಷ್ಕ್ ಮೇ’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿತ್ತು. ಆನಂದ್ ಎಲ್ ರಾಯ್ ನಿರ್ದೇಶನದ ಈ ಪ್ರೇಮಕಥಾ ಸಿನಿಮಾ ಇದೀಗ ಒಟಿಟಿಗೆ ಬಂದಿದ್ದು, ನೆಟ್ಫ್ಲಿಕ್ಸ್ನಲ್ಲಿ ಸಿನಿಮಾ ವೀಕ್ಷಿಸಬಹುದಾಗಿದೆ.




