ಈ ವಾರ ಒಟಿಟಿ ಬಂದಿರುವ ಕೆಲ ಹಿಟ್ ಸಿನಿಮಾಗಳಿವು
OTT release This week: ಪ್ರತಿ ವಾರವೂ ಕೆಲ ಒಳ್ಳೆಯ ಸಿನಿಮಾಗಳು ಒಟಿಟಿಗೆ ಬರುತ್ತಿವೆ. ಚಿತ್ರಮಂದಿರಗಳಲ್ಲಿ ಹಲವು ಕಾರಣಕ್ಕೆ ಒಳ್ಳೆಯ ಅಥವಾ ದೊಡ್ಡ ಸಿನಿಮಾಗಳು ಕೆಲ ವಾರಗಳಿಂದ ಬಿಡುಗಡೆ ಆಗುತ್ತಿಲ್ಲ. ಯುದ್ಧದ ಭೀತಿ, ಡೇಟ್ಸ್ ಸಮಸ್ಯೆ, ಮಳೆ ಇತ್ಯಾದಿ ಕಾರಣಗಳು ಇದಕ್ಕಿವೆ. ಆದರೆ ಒಟಿಟಿ ಅಂತೂ ಸಿನಿಮಾ ಪ್ರೇಮಿಗಳಿಗೆ ನಿರಾಸೆ ಮಾಡಿದ್ದಲ್ಲ. ಪ್ರತಿ ವಾರದಂತೆ ಈ ವಾರವೂ ಸಹ ಕೆಲ ಒಳ್ಳೆಯ ಸಿನಿಮಾಗಳು ಒಟಿಟಿಗೆ ಬಂದಿವೆ.
Updated on: May 18, 2025 | 4:10 PM

ಮಲಯಾಳಂನ ಸ್ಟಾರ್ ನಟ ತಮ್ಮ ಭಿನ್ನತೆಯಿಂದಲೇ ದೊಡ್ಡ ಅಭಿಮಾನಿ ವರ್ಗ ಪಡೆದಿರುವ ಬಾಸಿಲ್ ಜೋಸೆಫ್ ನಟನೆಯ ಥ್ರಿಲ್ಲರ್ ಸಿನಿಮಾ ‘ಮರನಮಾಸ್’ ಸಿನಿಮಾ ಸೋನಿ ಲಿವ್ ನಲ್ಲಿ ಪ್ರದರ್ಶನವಾಗುತ್ತಿದೆ. ಸಿನಿಮಾದ ಬಗ್ಗೆ ಬಹಳ ಒಳ್ಳೆಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಜೂ ಎನ್ಟಿಆರ್ ಅವರ ಸಹೋದರ ಕಲ್ಯಾಣ್ ರಾಮ್ ಹಾಗೂ ವಿಜಯಶಾಂತಿ ಒಟ್ಟಿಗೆ ನಟಿಸಿರುವ ಆಕ್ಷನ್ ಥ್ರಿಲ್ಲರ್ ಮತ್ತು ಕೌಟುಂಬಿಕ ಕತೆಯನ್ನೂ ಹೊಂದಿರುವ ‘ಅರ್ಜುನ್ ಸನ್ ಆಫ್ ವೈಜಯಂತಿ’ ಸಿನಿಮಾ ಇದೇ ವಾರ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ.

ಆಕ್ಷನ್, ರೊಮ್ಯಾಂಟಿಕ್ ಥ್ರಿಲ್ಲರ್ ತಮಿಳು ಸಿನಿಮಾ ‘ನೇಸಿಪ್ಪಾಯ’ ಇದೇ ವಾರ ಒಟಿಟಿಗೆ ಬಂದಿದೆ. ಆಕಾಶ್ ಮುರಳಿ, ಅದಿತಿ ಶಂಕರ್, ಕಲ್ಕಿ ಕೊಚಿಲಿನ್ ಇನ್ನೂ ಕೆಲವರು ನಟಿಸಿರುವ ಈ ಸಿನಿಮಾ ಲಯನ್ಸ್ ಗೇಟ್ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ. ಭರ್ಜರಿ ಆಕ್ಷನ್ ದೃಶ್ಯಗಳು ಈ ಸಿನಿಮಾನಲ್ಲಿವೆ.

ರಿಯಾಲಿಟಿ ಶೋಗಳನ್ನು ಆಧರಿಸಿ ನಿರ್ಮಿಸಿರುವ ಹಿಂದಿ ವೆಬ್ ಸರಣಿ ‘ಹೇ ಜುನೂನ್’ ಇದೇ ವಾರ ಹಾಟ್ಸ್ಟಾರ್ನಲ್ಲಿ ಬಿಡುಗಡೆ ಆಗಿದೆ. ನೀಲ್ ನಿತೇಶ್ ಮುಖರ್ಜಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ವೆಬ್ ಸರಣಿಯಲ್ಲಿ ಒಳ್ಳೆಯ ಸಂಗೀತದ ಜೊತೆಗೆ ಥ್ರಿಲ್ಲರ್ ಕತೆಯೂ ಸಹ ಇದೆ.

ಹಾರರ್ ಥ್ರಿಲ್ಲರ್ ಸಿನಿಮಾ ‘ವೂಲ್ಫ್ ಮ್ಯಾನ್’ ಇದೇ ವಾರ ಹಾಟ್ಸ್ಟಾರ್ನಲ್ಲಿ ಬಿಡುಗಡೆ ಆಗಿದೆ. ವ್ಯಕ್ತಿಯೊಬ್ಬ ತೋಳವಾಗಿ ತನ್ನದೇ ಕುಟುಂಬದವರನ್ನು ಕೊಲ್ಲಲು ಮುಂದಾಗುವ ಕತೆಯನ್ನು ಈ ಸಿನಿಮಾ ಹೊಂದಿದೆ. ತಾಯಿ ತನ್ನ ಮಗಳನ್ನು ಮಗುವಿನ ತಂದೆಯಿಂದಲೇ ಹೇಗೆ ಕಾಪಾಡುತ್ತಾಳೆ ಎಂಬುದೇ ಸಿನಿಮಾದ ಕತೆ.




